ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೋದಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಶೇರ್ ಆಯಾ ಶೇರ್ ಆಯಾ ಅನ್ನೋ ಜಯಘೋಷಗಳು ಮೊಳಗಿತ್ತು. ಜನರತ್ತ ತೆರಳಿದ ಮೋದಿ ಕೈಕುಲಕಿದರು. ಹೊಸ ಜಯಘೋಷದ ವಿಡಿಯೋ ವೈರಲ್ ಆಗಿದೆ.
ಶಿಮ್ಲಾ(ಅ.13): ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಜನರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಈ ಸ್ವಾಗತ ನೋಡಿದ ಹಿಮಾಚಲ ಪ್ರದೇಶ ಬಿಜೆಪಿಗೆ ಮುಂಬರುವ ಚನಾವಣಾ ತಯಾರಿಗೆ ಹೊಸ ಹುರುಪು ಸಿಕ್ಕಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಜನರು ಹೊಸ ಜಯಘೋಷ ಮೊಳಗಿಸಿದ್ದಾರೆ. ದೇಖೋ ದೇಖೋ ಕೌನ್ ಆಯಾ..ಶೇರ್ ಆಯಾ ಶೇರ್ ಆಯಾ( ನೋಡಿ ನೋಡಿ ಯಾರು ಬಂದಿದ್ದಾರೆ? ಸಿಂಹ ಬಂದಿದೆ, ಸಿಂಹ ಬಂದಿದೆ) ಎಂಬ ಜಯಘೋಷ ಮೊಳಗಿದೆ. ಜನರು ಅತೀ ಉತ್ಸಾಹದಲ್ಲಿ ಈ ಘೋಷಣೆಗಳನ್ನು ಕೂಗಿದ್ದಾರೆ. ಇಷ್ಟೇ ಅಲ್ಲ ಮೋದಿ, ಮೋದಿ ಜಯಘೋಷಗಳು ಮೊಳಗಿದೆ. ಈ ವಿಡಿಯೋ ವೈರಲ್ ಆಗಿದೆ. ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಇದರ ನಡುವೆ ಈ ವಿಡಿಯೋ ಬಿಜೆಪಿ ಉತ್ಸಾಹ ಇಮ್ಮಡಿಗೊಳಿಸಿದೆ.
4ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲು ಪ್ರಧಾನಿ ಮೋದಿ ಇಂದು ಬೆಳಗ್ಗೆ ಹಿಮಾಚಲ ಪ್ರದೇಶದ ಉನಾಗೆ ಆಗಮಿಸಿದ್ದರು. ಅಂಬ್ ಅಂದೌರಾದಿಂದ ನವದೆಹಲಿಗೆ ಸಂಚರಿಸುವ ಈ ವಂದೇಭಾರತ್ ಎಕ್ಸ್‌ಪ್ರೆಸ್ ರೈಲು ಅತ್ಯಾಧುನಿಕ ಸೌಲಭ್ಯ ಹೊಂದಿದ ಅತೀ ವೇಗದ ರೈಲಾಗಿದೆ. ಈ ರೈಲಿಗೆ ಚಾಲನೆ ನೀಡಲು ನಿಲ್ದಾಣಕ್ಕೆ ಆಗಮಿಸಿದ ಮೋದಿಗೆ ಜಯಘೋಷಗಳ ಅದ್ಧೂರಿ ಸ್ವಾಗತ ಸಿಕ್ಕಿದೆ.
Temples renovation: ಮೋದಿ ನೇತೃತ್ವದಲ್ಲಿ ಗತವೈಭವ ಮರಳಿ ಪಡೆಯುತ್ತಿವೆ ದೇವಾಲಯಗಳು!
ಮೋದಿಯನ್ನು ನೋಡಲು, ಜನರು ಕಕ್ಕಿರಿದು ತುಂಬಿದ್ದರು. ಅತೀವ ಉತ್ಸಾಹದಿಂದ ಹೊಸ ಹೊಸ ಘೋಷಣೆಗಳನ್ನು ಕೂಗಿದ್ದಾರೆ. ಶೇರ್ ಆಯಾ ಶೇರ್ ಆಯಾ ಅನ್ನೋ ಘೋಷಣೆ ಇದೀಗ ವೈರಲ್ ಆಗಿದೆ. ಇತ್ತ ಮೋದಿ ಜನರತ್ತತೆರಳಿ ಕೈಕುಲುಕಿ ಸಂತಸ ಹಂಚಿಕೊಂಡರು. ಈ ವೇಳೆ ಭದ್ರತಾ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
देखो देखो कौन आया-शेर आया, शेर आया... के नारों के साथ हिमाचल प्रदेश के लोगों ने प्रधानमंत्री श्री का देवभूमि आगमन पर भव्य स्वागत किया। pic.twitter.com/DXvFrb0Abw
— BJP (@BJP4India)
ಹಿಮಾಚಲ ಪ್ರದೇಶದ ಅಂಬ್ ಅಂಡೌರಾದಿಂದ ದೆಹಲಿಗೆ ವಂದೇ ಭಾರತ್ ರೈಲು ಪ್ರಯಾಣಿಸಲಿದೆ. ಇದು ಮೊದಲ ಮೂರು ರೈಲಿಗಿಂತ ಉನ್ನತ ಗುಣಮಟ್ಟದ್ದಾಗಿರಲಿದ್ದು, ಗಂಟೆಗೆ 100 ಕಿ.ಮಿ ವೇಗದಲ್ಲಿ ಚಲಿಸಲಿದೆ. ಚಂಡೀಗಢ ಮಾರ್ಗವಾಗಿ ಸಂಚರಿಸುವ ಈ ರೈಲಿನಿಂದ ಚಂಡೀಗಢ-ದಿಲ್ಲಿ ಪ್ರಯಾಣದ ಅವಧಿ 3 ತಾಸಿಗಿಂತ ಕಮ್ಮಿ ಆಗಲಿದೆ.
ಭಾರತದ ಆರ್ಥಿಕ ಬೆಳವಣಿಗೆ ದರ ಪರಿಷ್ಕರಿಸಿದ ವಿಶ್ವಬ್ಯಾಂಕ್, ಇತರ ರಾಷ್ಟ್ರಗಳಿಗಿಂತ ಅತ್ಯಧಿಕ ವೇಗದಲ್ಲಿ ಚೇತರಿಕೆ!
ಅಲ್ಲದೇ ಮೋದಿ, 1900 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಔಷಧ ಪಾರ್ಕ್ನ ಅಡಿಗಲ್ಲು ಸಮಾರಂಭ ನೆರವೇರಿಸಿದರು. ಇದರಿಂದ 20000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ನಂತರ ಛಂಬಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ 270 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಲ್ಲ 48 ಮೆಗಾ ವ್ಯಾಟ್‌ನ ಚಾಂಜು ಹೈಡ್ರೋ ಎಲೆಕ್ಟ್ರಿಕಲ್ ಯೋಜನೆ ಹಾಗೂ 30 ಮೆಗಾವ್ಯಾಟ್‌ನ ಡಿಯೋಥಾಲ್ ಚಾಂಜು ಹೈಡ್ರೋ ಎಲೆಕ್ಟ್ರಿಕಲ್ ಯೋಜನೆಗೆ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು. ಈ ಯೋಜನೆಗಳಿಂದ ಹಿಮಾಚಲ ಪ್ರದೇಶ ವಾರ್ಷಿಕ 110 ಕೋಟಿ ಆದಾಯ ಗಳಿಸಲಿದೆ. ನಂತರ ಮೋದಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೊಜನೆಯನ್ನು ಉದ್ಘಾಟಿಸಿದರು. ಈ ವರ್ಷದ ಕೊನೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.