LAC ಪರ್ವತ ಹಾದಿಗಳನ್ನು ಚೀನಾ ಸೇನೆಗೂ ಮುನ್ನವೇ ಭಾರತೀಯ ಸೇನೆ ಹೀಗೆ ತಲುಪಬಹುದು ನೋಡಿ..!

By Suvarna NewsFirst Published Dec 3, 2022, 1:27 PM IST
Highlights

ಚೀನಾದ ಗಡಿಯುದ್ದಕ್ಕೂ ಸೂಕ್ಷ್ಮತೆಯು ತುಂಬಾ ಹೆಚ್ಚಾಗಿದೆ ಮತ್ತು ನಾವು ಗಡಿ ಪ್ರದೇಶಗಳಲ್ಲಿ ನಮ್ಮ ಸ್ಥಾನಗಳನ್ನು ಬಲಪಡಿಸಿದ್ದೇವೆ ಎಂದು ರಕ್ಷಣಾ ಸಂಸ್ಥೆಯ ಮೂಲಗಳು ಹೇಳಿವೆ. 

ಇತ್ತೀಚಿನ ವರ್ಷಗಳಲ್ಲಿ ಉತ್ತರ ವಲಯದಿಂದ ಪೂರ್ವ ವಲಯದವರೆಗಿನ ನೈಜ ನಿಯಂತ್ರಣ ರೇಖೆಯ (Line of Actual Control) ಉದ್ದಕ್ಕೂ ಚೀನಾದ (China) ಗಡಿ ಉಲ್ಲಂಘನೆಗಳು ಹಿಮಾಚಲ ಪ್ರದೇಶ (Himachal Pradesh) ಮತ್ತು ಉತ್ತರಾಖಂಡದ (Uttarakhand) ಮಧ್ಯಮ ವಲಯದಲ್ಲಿ ತನ್ನ ಮಿಲಿಟರಿ ಸನ್ನದ್ಧತೆ ಮತ್ತು ಮೂಲಸೌಕರ್ಯ ಹೆಚ್ಚಿಸಲು ಭಾರತವನ್ನು (India) ಪ್ರೇರೇಪಿಸಿದೆ. ಉತ್ತರಾಖಂಡ್‌ನ ಬಾರಾಹೋತಿ (Barahoti) ಪ್ರದೇಶದಲ್ಲಿ ಕೆಲವು ಘಟನೆಗಳು ವರದಿಯಾಗಿದ್ದರೂ, ಭಾರತದ ಭೂಪ್ರದೇಶದ ಯಾವುದೇ ಗಂಭೀರವಾದ ಚೀನೀ ಉಲ್ಲಂಘನೆಗೆ ಮಧ್ಯ ವಲಯವು ಇನ್ನೂ ಸಾಕ್ಷಿಯಾಗಿಲ್ಲ. ಇನ್ನು, ಈ ಸಂಬಂಧ ಮಾಹಿತಿ ನೀಡಿದ ರಕ್ಷಣಾ ಸಂಸ್ಥೆಯ ಮೂಲಗಳು, "ಗಾಲ್ವಾನ್ ಕಣಿವೆಯ (Galwan Valley) ಮುಖಾಮುಖಿ ಪ್ರಾರಂಭವಾದ ನಂತರ, ಸೇನೆಯಲ್ಲಿ ಎಲ್ಲವೂ ಬದಲಾಗಿದೆ. ಚೀನಾದ ಗಡಿಯುದ್ದಕ್ಕೂ ಸೂಕ್ಷ್ಮತೆಯು ತುಂಬಾ ಹೆಚ್ಚಾಗಿದೆ ಮತ್ತು ನಾವು ಗಡಿ ಪ್ರದೇಶಗಳಲ್ಲಿ ನಮ್ಮ ಸ್ಥಾನಗಳನ್ನು ಬಲಪಡಿಸಿದ್ದೇವೆ" ಎಂದು ಹೇಳಿದೆ. 

ಮಧ್ಯ ವಲಯವನ್ನು ಯಾವಾಗಲೂ ನೆಲೆಸಿದ ಗಡಿ ಎಂದು ಪರಿಗಣಿಸಲಾಗಿತ್ತು. ಆದರೆ ಮೇ 2020ರ ಚೀನಾದ ಗಡಿ ಉಲ್ಲಂಘನೆಗಳು ಮತ್ತು ಪೂರ್ವ ಲಡಾಖ್‌ನಲ್ಲಿ ಭಾರತೀಯ ಭೂಪ್ರದೇಶವನ್ನು ವಶಪಡಿಸಿಕೊಂಡ ನಂತರ ಪರಿಸ್ಥಿತಿ ಬದಲಾಗಿದೆ. ಲಡಾಖ್ ನಂತಹ ಘಟನೆಯ ಸಂದರ್ಭದಲ್ಲಿ ಅದರ ತ್ವರಿತ ಪ್ರತಿಕ್ರಿಯೆ ಸಮಯವನ್ನು ಬಲಪಡಿಸುವ ಗುರಿಯೊಂದಿಗೆ, ಸರ್ಕಾರವು ಈ ವಲಯಕ್ಕೆ ಆದ್ಯತೆ ನೀಡಿದೆ. ವಿಶೇಷವಾಗಿ ಹರ್ಷಿಲ್, ಮನ, ನೀತಿ ಮತ್ತು ಬಾರಾಹೋತಿಯಿಂದ ಪ್ರಾರಂಭವಾಗುವ ನಾಲ್ಕು ಕಣಿವೆಗಳಿಂದ ಮಾಡಲ್ಪಟ್ಟಿರುವ ವಲಯಕ್ಕೂ ಪ್ರಾಮುಖ್ಯತೆ ನೀಡಿದೆ.

ಇದನ್ನು ಓದಿ: ನಿಮ್ಮ ಕೆಲಸ ನೋಡಿಕೊಳ್ಳಿ, ಭಾರತದ ಜೊತೆ ಜಂಟಿ ಸಮರಾಭ್ಯಾಸ ಪ್ರಶ್ನಿಸಿದ ಚೀನಾಗೆ ಅಮೆರಿಕ ತಿರುಗೇಟು!

ಈ ಭಾಗದಲ್ಲಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣ ಸೇರಿದಂತೆ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಹಲವು ಮೂಲಗಳು ಮಾಹಿತಿ ನೀಡಿದೆ. ಚೀನಾದ ಸೇನೆ ಗಸ್ತು ತಿರುಗುವುದಕ್ಕೆ ಮುಂಚೆಯೇ ನಮ್ಮ ಪಡೆಗಳು ಈಗ ಅತ್ಯಂತ ಪ್ರಮುಖವಾದ ಪ್ರವೇಶ ಬಿಂದುಗಳನ್ನು ಅಂದರೆ ಪರ್ವತದ ಪಾಸ್‌ಗಳನ್ನು ತಲುಪಬಹುದು ಎಂದು ಮೂಲಗಳು ದೃಢಪಡಿಸಿವೆ.

ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ನಡುವಿನ ಗಡಿಯನ್ನು ಒಳಗೊಂಡಂತೆ ಆ ವಲಯದ ಗಡಿ ಪ್ರದೇಶದಲ್ಲಿ 20ಕ್ಕೂ ಹೆಚ್ಚು ಪಾಸ್‌ಗಳಿದ್ದು, ರಸ್ತೆ ಮೂಲಸೌಕರ್ಯಗಳ ತ್ವರಿತ ನಿರ್ಮಾಣವು ಇದನ್ನು ಸಾಧ್ಯವಾಗಿಸಿತು ಎಂದೂ ಹೇಳಲಾಗಿದೆ. ಭಾರತ ಮತ್ತು ಚೀನಾವು ಲಡಾಖ್‌ ಉತ್ತರ ವಲಯದಿಂದ ಅರುಣಾಚಲ ಪ್ರದೇಶದ ಪೂರ್ವ ವಲಯದವರೆಗೆ 3,488-ಕಿಮೀ-ಉದ್ದದ LAC ಗಡಿಯನ್ನು ಹಂಚಿಕೊಂಡಿದೆ, ಅದರಲ್ಲಿ 545-ಕಿಮೀ-ಉದ್ದದ LAC ಮಧ್ಯ ವಲಯದ ಅಡಿಯಲ್ಲಿ ಬರುತ್ತದೆ.

ಇದನ್ನು ಓದಿ: Galwan Clash: ಚೀನಾ ಸುಳ್ಳು ಬಟಾಬಯಲು, ಗಲ್ವಾನ್ ಸಂಘರ್ಷದಲ್ಲಿ 38 ಚೀನಾ ಸೈನಿಕರು ಸಾವು!

ಮಧ್ಯ ವಲಯದಲ್ಲಿ ಶಸ್ತ್ರಸಜ್ಜಿತ ವಾಹನಗಳ ನಿಯೋಜನೆಯು ಪೂರ್ವ ಲಡಾಖ್‌ನಲ್ಲಿ ಕಲಿತ ಪಾಠದ ಪರಿಣಾಮವಾಗಿದೆ. ಮಧ್ಯ ವಲಯದಲ್ಲಿ ಬಾರಾಹೋತಿಯು ಭಾರತ ಮತ್ತು ಚೀನಾದಿಂದ 'ವಿವಾದ' ಎಂದು ಪರಿಗಣಿಸಲ್ಪಟ್ಟಿರುವ ಏಕೈಕ ಪ್ರದೇಶವಾಗಿದ್ದು, ಇನ್ನೂ ಇತ್ಯರ್ಥವಾಗಬೇಕಿದೆ. ಇನ್ನು, ಉತ್ತರ ಮತ್ತು ಪೂರ್ವ ವಲಯದಲ್ಲಿ ಇತರ 7 ಪರಸ್ಪರ ಒಪ್ಪಿಗೆಯ ವಿವಾದಿತ ಪ್ರದೇಶಗಳಿದ್ದರೂ, LAC ಗಡಿ ಉದ್ದಕ್ಕೂ 2 ದೇಶಗಳ ನಡುವಿನ ಎಲ್ಲಾ ಇತರ ವಿವಾದಗಳು ಎರಡೂ ಕಡೆಯಿಂದ ನೇರವಾದ ಪ್ರಾದೇಶಿಕ ಹಕ್ಕುಗಳಾಗಿವೆ ಎಂದೂ ತಿಳಿದುಬಂದಿದೆ.
 
ಶುಕ್ರವಾರ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ಪಡೆಗಳು ತಮ್ಮ 18 ನೇ ಆವೃತ್ತಿಯ ದ್ವಿಪಕ್ಷೀಯ ಸೇನಾ ವ್ಯಾಯಾಮ 'ಯುದ್ಧ ಅಭ್ಯಾಸ 2022' ಅನ್ನು ಉತ್ತರಾಖಂಡದ ಔಲಿಯಲ್ಲಿ ಮುಕ್ತಾಯಗೊಳಿಸಿದ್ದು, ಇದು ನೈಜ ನಿಯಂತ್ರಣ ರೇಖೆಯಿಂದ 100 ಕಿಮೀ ದೂರದಲ್ಲಿದ್ದು, ಇದಕ್ಕೆ ಚೀನಾ ಆಡಳಿತ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತ-ಚೀನಾ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿ ನಡೆಯುತ್ತಿರುವ ಸೇನಾ ಶಕ್ತಿ ಪ್ರದರ್ಶನವು 1993 ಮತ್ತು 1996 ರ ಗಡಿ ಒಪ್ಪಂದಗಳ ನೀತಿಯನ್ನು ಉಲ್ಲಂಘಿಸಿದೆ ಎಂದು ಚೀನಾ ಹೇಳಿಕೆ ನೀಡಿತ್ತು.

ಇದನ್ನೂ ಓದಿ: ಗಲ್ವಾನ್ ಸಂಘರ್ಷ, ಚೀನಾ ರೂಪಿಸಿದ್ದ ಷಡ್ಯಂತ್ರ: ಡ್ರ್ಯಾಗನ್ ಬಣ್ಣ ಬಯಲು ಮಾಡಿದ ದೊಡ್ಡಣ್ಣ!

ಆದರೆ, ಭಾರತವು ಔಲಿಯಲ್ಲಿ ನಡೆದ ಯುದ್ಧ ಅಭ್ಯಾಸಕ್ಕೂ 1993 ಮತ್ತು 1996ರ ಒಪ್ಪಂದಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ. ಹಾಗೂ, ಚೀನಾದ ಕಡೆಯವರು ಈ ಒಪ್ಪಂದಗಳನ್ನು ಪ್ರಸ್ತಾಪಿಸಿರುವುದರಿಂದ, 1993 ಮತ್ತು 1996 ರ ಈ ಒಪ್ಪಂದಗಳ ತನ್ನದೇ ಆದ ಉಲ್ಲಂಘನೆಯನ್ನು ಚೀನಾದ ಕಡೆಯವರು ಪ್ರತಿಬಿಂಬಿಸುವ ಮತ್ತು ಯೋಚಿಸುವ ಅಗತ್ಯವಿದೆ ಎಂದು ನಾನು ಹೇಳುತ್ತೇನೆ ಎಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿರುಗೇಟು ನೀಡಿದ್ದರು. 

ಇದನ್ನೂ ಓದಿ: ಮೋದಿ ಭೇಟಿಗೆ ಬೆದರಿದ ಚೀನಾ, ಗಾಲ್ವಾನ್‌ನಿಂದ ಕಾಲ್ಕಿತ್ತ ಸೇನೆ

click me!