ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಬಂಧನದ ವಾರಂಟ್ ಜಾರಿ!

By Web DeskFirst Published Nov 12, 2019, 8:36 PM IST
Highlights

ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಬಂಧನದ ವಾರಂಟ್| ಪ್ರಧಾನಿ ಮೋದಿ ಅವರನ್ನು ಶಿವಲಿಂಗದ ಮೇಲಿನ ಚೇಳು ಎಂದಿದ್ದ ಶಶಿ ತರೂರ್| ಶಶಿ ತರೂರ್ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆ| ವಿಚಾರಣೆಗೆ ಗೈರು ಹಾಜರಾದ ಪರಿಣಾಮವಾಗಿ ತರೂರ್ ವಿರುದ್ಧ ಜಾಮೀನು ಸಹಿತ ವಾರಂಟ್|

ನವದೆಹಲಿ(ನ.12): ಮಹತ್ವದ ಬೆಳವಣಿಗೆಯೊಂದರಲ್ಲಿ ಕೇರಳ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.

ಪ್ರಧಾನಿ  ನರೇಂದ್ರ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳಿಗೆ ಹೋಲಿಸಿ ಶಶಿ ತರೂರ್ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿತ್ತು.

ಜಾಗತಿಕ ವೇದಿಕೆಯಲ್ಲಿ ಪಾಕಿಸ್ತಾನದ ಮಾನ ಹರಾಜು ಹಾಕಿದ ಶಶಿ ತರೂರ್!

ಪ್ರಕರಣದ ವಿಚಾರಣೆಯುದ್ದಕ್ಕೂ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದ ತರೂರ್ ವಿರುದ್ದ ಇದೀಗ ಜಾಮೀನು ಸಹಿತ ವಾರೆಂಟ್ ಹೊರಡಿಸಲಾಗಿದೆ.

ಕಳೆದ ವರ್ಷದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ನಡೆದ ಸಾಹಿತ್ಯೋತ್ಸವ ಉದ್ದೇಶಿಸಿ  ಮಾತನಾಡಿದ್ದ ತರೂರ್, ಪ್ರಧಾನಿ ಮೋದಿ ಅವರನ್ನು ಶಿವಲಿಂಗದ ಮೇಲೆ ಕುಳಿತಿರುವ ಚೇಳು ಎಂದು ಬಣ್ಣಿಸಿದ್ದರು.

ಹೌಡಿ ಮೋದಿ ವ್ಯಂಗ್ಯವಾಡಿದ ರಾಹುಲ್: ಗೌರವ ಇರಲಿ ಎಂದ ತರೂರ್!

ಅಲ್ಲದೇ ಚೇಳನ್ನು ಕೈಯಿಂದ ತೆಗೆದು ಹೊರಗೆ ಎಸೆಯಲು ಸಾಧ್ಯವಿಲ್ಲ. ಅಲ್ಲದೇ ಶಿವಲಿಂಗ ಇರುವುದರಿಂದ ಅದನ್ನು ಚಪ್ಪಲಿಯಿಂದ ಹೊಡೆಯಲು ಸಾಧ್ಯವಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಶಿ ತರೂರ್ ನೀಡಿದ್ದ ಹೇಳಿಕೆ ವಿರುದ್ದ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

'370ನೇ ವಿಧಿ ಶಾಶ್ವತವಾಗಿಡಲು ನೆಹರೂ ಕೂಡಾ ಬಯಸಿರಲಿಲ್ಲ!'

click me!