ಪ್ರಮೋದ್ ಮಹಾಜನ್ ಹೇಳಿದ್ದ ಡೆಮಾಕ್ರೆಸಿ ಕತೆ: ಮಹಾರಾಷ್ಡ್ರದಲ್ಲಿ ನಡೆಯುತ್ತಿರುವುದೇನು ಮತ್ತೆ?

By Web DeskFirst Published Nov 12, 2019, 8:13 PM IST
Highlights

ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳ ಕಸರತ್ತು| ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ ರಾಜ್ಯಪಾಲ| ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ರಚನೆಗೆ ಮುಂದುವರೆದ ಕಸರತ್ತು| ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪ್ರಮೋದ್ ಮಹಾಜನ್ ಮಾತು| ಲೋಕಸಭೆಯಲ್ಲಿ ಪ್ರಜಾಪ್ರಭುತ್ವದ ಕುರಿತು ಮಾತನಾಡಿದ್ದ ಬಿಜೆಪಿಯ ದಿವಂಗತ ನಾಯಕ| ಮಹಾಜನ್ ಭಾಷಣ ಮಹಾರಾಷ್ಡ್ರ ರಾಜಕೀಯ ವಿಪ್ಲವಕ್ಕೆ ಪೂರಕ|

ಮುಂಬೈ(ನ.12): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ರಾಜಕೀಯ ಪಕ್ಷಗಳು ಹಗ್ಗ ಜಗ್ಗಾಟ ಮುಂದುವರೆಸಿವೆ. ಯಾವುದೇ ಮೈತ್ರಿಕೂಟ ಸರ್ಕಾರ ರಚಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕ್ಷಣಗಣನೆ?: ಕಾನೂನು ಹೋರಾಟಕ್ಕೆ ಸೈ ಎಂದ ಶಿವಸೇನೆ!

ರಾಜ್ಯಪಾಲರ ಪತ್ರ ಸ್ವೀಕರಿಸಿರುವ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಡಳಿತ ಹೇರಲು ಮುಂದಾಗಿದ್ದು, ರಾಮನಾಥ್ ಕೋವಿಂದ್ ಕೂಡ ಶಿಫಾರಸ್ಸಿಗೆ ಅಂಕಿತ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯ ವಿಪ್ಲವ ತಾರಕಕ್ಕೇರಿದೆ.

'ಮಹಾ' ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು: ಒದ್ದಾಡುತ್ತಿದೆ ಈ ತ್ರಿಮೂರ್ತಿಗಳ ಮನಸ್ಸು!

ಈ ಮಧ್ಯೆ ಮಹಾರಾಷ್ಟ್ರ ರಾಜಕೀಯ ವಿಪ್ಲವಕ್ಕೆ ಪೂರಕ ಎಂಬಂತೆ ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿವಂಗತ ಪ್ರಮೋಧ್ ಮುಹಾನ್ ಲೋಕಸಭೆಯಲ್ಲಿ ಮಾಡಿದ ಭಾಷಣದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

What is Democracy?? Hilarious speech by Late. Pramod Mahajan 🔥🔥🔥😝 pic.twitter.com/pqaZWoJhE2

— Rainmaker 🌦 (@Raeesjada)

ಲೋಕಸಭೆಯಲ್ಲಿ ಮಾತನಾಡುತ್ತಿದ್ದ ಪ್ರಮೋದ್ ಮಹಾಜನ್, ಭಾರತದ ಪ್ರಜಾಪ್ರಭುತ್ವದ ಕುರಿತು ಮಾರ್ಮಿಕವಾಗಿ ವಿಶ್ಲೇಷಣೆ ಮಾಡಿದ್ದ ವಿಡಿಯೋ ಇದಾಗಿದೆ. ಅಂದು ಮಹಾಜನ್ ಹೇಳಿದ್ದಂತೇ ಇಂದು ಮಹಾರಾಷ್ಟ್ರದಲ್ಲಿ ಬೆಳವಣಿಗೆಗಳು ನಡೆಯುತ್ತಿದ್ದು, ಮಹಾಜನ್ ವಿಡಿಯೋ ವೈರಲ್ ಆಗಿದೆ.

ಅಂದು ಮಹಾಜನ್ ಲೋಕಸಭೆಯಲ್ಲಿ ಹೇಳಿದ್ದು ಹೀಗೆ:
ನಿಮ್ಮ ಪ್ರಜಾಪ್ರಭುತ್ವ ಹೇಗಿದೆ ಎಂದು ಕೇಳಲಾಗಿತ್ತು. ನಾನು ಪ್ರಜಾಪ್ರಭುತ್ವ ವಿವರಿಸೋ ಮೊದಲು ನನ್ನ ಪರಿಚಯ ಮಾಡಿಕೊಳ್ಳುತ್ತೇನೆ. ನಿಮಗೆ ಪ್ರಜಾಪ್ರಭುತ್ವ ಅರ್ಥವಾಗುತ್ತೆ ಎಂದೆ. ನಾನು ಪ್ರಮೋದ್ ಮಹಾಜನ್. ನಾನು ಲೋಕಸಭೆ  ಮೆಂಬರ್. ಚುನಾವಣಾ ಫಲಿತಾಂಶದಲ್ಲಿ ಅತೀ ದೊಡ್ಡ ಪಕ್ಷದ ಸದಸ್ಯ. ಆದರೆ ನಾನು ವಿರೋಧ ಪಕ್ಷದಲ್ಲಿದ್ದೇನೆ. ವ್ಯಕ್ತಿ ನನ್ನನ್ನು ನೋಡಿ ನೀವು ಅತೀ ದೊಡ್ಡ ಪಕ್ಷದ ಸದಸ್ಯರೇ ಎಂದು ಮರು ಪ್ರಶ್ನಿಸಿದ್ದ. ಹೌದು ಎಂದ ನಾನು, ಪಾಣಿಯೆಡೆಗೆ ಕೈತೋರಿಸಿ ಇವರ ಎರಡನೇ ಅತೀ ದೊಡ್ಡ ಪಕ್ಷದ ಸದಸ್ಯರು, ಅವರು ಸರ್ಕಾರದಿಂದ ಹೊರಗಿದ್ದು,  ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರನ್ನು ತೋರಿಸಿ ಇವರು 3ನೇ ಅತೀ ದೊಡ್ಡ ಪಕ್ಷದ  ಸದಸ್ಯರು, ಇವರು ಮೈತ್ರಿಯ ಒಳಗಿದ್ದರೂ ಸರ್ಕಾರದಿಂದ ಹೊರಗಿದ್ದಾರೆ. ಬಳಿಕ ನಾನು ರಮಾಕಾಂತ್ ಖಲಾಪ್ ಅವರನ್ನ ತೋರಿಸಿ ಹೇಳಿದೆ. ಇವರು ಪಾರ್ಟಿಯ ಏಕೈಕ ಸದಸ್ಯ ಹಾಗೂ ಅವರೇ ಸರ್ಕಾರ. 

 

ಅಂದರೆ ಸರ್ಕಾರ ಮತ್ತು ಪ್ರಜಾಪ್ರಭುತ್ವ ಜನಾದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳದೇ. ಒಳ ಒಪ್ಪಂದ, ಅಪವಿತ್ರ ಮೈತ್ರಿ ಮಾಡಿಕೊಂಡು ಪ್ರಜಾಪ್ರಭುತ್ವವನ್ನು ಅಣುಕಿಸುವಂತಾಗಿದೆ ಎಂದು ಮಹಾಜನ್ ಮಾರ್ಮಿಕವಾಗಿ ವಿವರಿಸಿದ್ದರು.

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ: ಸುಪ್ರೀಂ ಕದ ತಟ್ಟಿದ ಶಿವಸೇನೆ!

ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ರಚಿಸಲು ಯತ್ನಿಸುತ್ತಿದ್ದು, ಮಹಾಜನ್ ಅವರ ಅಂದಿನ ಭಾಷಣ ಇದಕ್ಕೆ ಪೂರಕವಾಗಿದೆ ಎನ್ನಲಾಗಿದೆ.

ವಿಮಾನ ಹತ್ತುವ ಮೊದಲು ಮೋದಿ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

click me!