ಶಿವ, ವಿಷ್ಣು ಸೇರಿ ಅಯೋಧ್ಯೆ ರಾಮ ಮಂದಿರ ಪ್ರಾಂಗಣದಲ್ಲಿ ತಲೆ ಎತ್ತಲಿದೆ 6 ದೇವಸ್ಥಾನ!

Published : Sep 13, 2021, 07:38 PM IST
ಶಿವ, ವಿಷ್ಣು ಸೇರಿ ಅಯೋಧ್ಯೆ ರಾಮ ಮಂದಿರ ಪ್ರಾಂಗಣದಲ್ಲಿ ತಲೆ ಎತ್ತಲಿದೆ 6 ದೇವಸ್ಥಾನ!

ಸಾರಾಂಶ

ಅಯೋಧ್ಯೆ ರಾಮ ಮಂದಿರದ ಅಂತಿಮ ನೀಲ ನಕ್ಷೆ ಪ್ರಾಂಗಣದಲ್ಲಿ ರಾಮ ಮಂದಿರ ಜೊತೆಗೆ 6 ದೇವಸ್ಥಾನ ದುರ್ಗೆ, ಬ್ರಹ್ಮ, ವಿಷ್ಣು ಸೇರಿ 6 ದೇವಸ್ಥಾನ ನಿರ್ಮಾಣ  

ಅಯೋಧ್ಯೆ(ಸೆ.13):  ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಭರದಿಂದ ಸಾಗಿದೆ. ಇದರ ನಡುವೆ ರಾಮ ಮಂದಿರದ ಅಂತಿಮ ನೀಲ ನಕ್ಷೆ ಬಹಿರಂಗೊಂಡಿದೆ. ಇದರಲ್ಲಿ ರಾಮ ಮಂದಿರ ಪ್ರಾಂಗಣದಲ್ಲಿ 6 ದೇವಾಲಯಗಳು ತಲೆ ಎತ್ತಲಿದೆ. ಈ ಮೂಲಕ ರಾಮ ಮಂದಿರ ಅಕ್ಕ ಪಕ್ಕ ಶಿವ, ದುರ್ಗೆ, ಬ್ರಹ್ಮ, ವಿಷ್ಠು ಸೇರಿ 6 ದೇವರು ಕೂಡ ಪ್ರತಿಷ್ಠಾಪನೆಗೊಳ್ಳಲಿದೆ.

2023ರ ಅಂತ್ಯಕ್ಕೆ ರಾಮ​ಮಂದಿ​ರ ಗರ್ಭಗುಡಿ ಸಿದ್ಧ, ಅಲ್ಲೇ ಪೂಜೆ: ವಿಎ​ಚ್‌​ಪಿ!

ರಾಮಜನ್ಮಭೂಮಿ ಪ್ರಾಂಗಣದಲ್ಲಿ ಈ 6 ಮಂದಿರಗಳು ತಲೆ ಎತ್ತಲಿದೆ. ಸೂರ್ಯ ದೇವ, ಗಣೇಶ, ಶಿವ, ದುರ್ಗೆ, ಬ್ರಹ್ಮ, ವಿಷ್ಣುವಿನ ಮಂದಿರಗಳು ರಾಮಜನ್ಮಭೂಮಿ ಪ್ರಾಂಗಣದಲ್ಲೇ ನಿರ್ಮಾಣಗೊಳ್ಳಲಿದೆ. ಶ್ರೀರಾಮನ ಪೂಜೆ ಜೊತೆಗ ಈ 6 ದೇವರನ್ನು ಪೂಜಿಸುವುದು ಹಿಂದೂ ಧರ್ಮದಲ್ಲಿ ಮುಖ್ಯವಾಗಿದೆ ಎಂದು ರಾಮಮಂದಿರ ಟ್ರಸ್ಟ್ ಸದಸ್ಯ ಡಾ. ಅನಿಲ್ ಮಿಶ್ರಾ ಹೇಳಿದ್ದಾರೆ.

ರಾಮ ಮಂದಿರದ ಅಡಿಪಾಯ ಕಾರ್ಯ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಮೊದಲ ವಾರದಲ್ಲಿ ಪೂರ್ಣಗೊಳ್ಳಲಿದೆ. ಹಲವು ವಿಶೇಷತೆ, ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಅನಿಲ್ ಮಿಶ್ರಾ ಹೇಳಿದ್ದಾರೆ.

ಆರ್ಟಿಕಲ್ 370 ರದ್ದು, ರಾಮ ಮಂದಿರ ಅಡಿಗಲ್ಲು, ಹಾಕಿ ಪದಕ; ಆಗಸ್ಟ್ 5ರ ಇತಿಹಾಸ ಹೇಳಿದ ಮೋದಿ!

ರಾಮಮಂದಿರದ ಸ್ತಂಭವನ್ನು ಉತ್ತರ ಪ್ರದೇಶದ ಮಿರ್ಜಾಪುರದ 3.5 ಲಕ್ಷ ಕ್ಯೂಬಿಕ್ ಅಡಿ ಕಲ್ಲುಗಳಿನಂದ ನಿರ್ಮಿಸಲಾಗುತ್ತಿದೆ. ಕಲ್ಲುಗಳನ್ನು ಕತ್ತರಿಸುವ ಹಾಗೂ ಕಲ್ಲುಗಳನ್ನು ಹೊಂದಿಸುವ ಗುತ್ತಿಗೆಯನ್ನು ಮಿರ್ಜಾಪುರದ ಎರಡು  ಖಾಸಗಿ ಸಂಸ್ಥೆಗಳಿಗೆ ನೀಡಲಾಗಿದೆ. ಆದರೆ ವಿದ್ಯತ್ ಅಭಾವದಿಂದ ಕಲ್ಲು ಕತ್ತರಿಸುವ ಕಾರ್ಯ ವಿಳಂಬವಾಗುತ್ತಿದೆ.

ರಾಮ ಮಂದಿರ ಅಡಿಪಾಯದಲ್ಲಿ 44 ಪದರಗಳ ಎಂಜಿನಿಯರಿಂಗ್ ಫಿಲ್ ಮೆಟಿರಿಯಲ್ ಬದಲು ಇದೀಗ 48 ಲೇಯರ್‌ಗೆ ಹೆಚ್ಚಿಸಲಾಗಿದೆ. 1,20,000 ಚದರ ಅಡಿ ಮತ್ತು 50 ಅಡಿ ಆಳ ಅಗೆದಿರುವ ಅಡಿಪಾಯ ಪ್ರದೇಶದ ಭರ್ತಿ ಕಾರ್ಯ ನಡೆಯುತ್ತಿದೆ. ನವೆಂಬರ್ ಮೊದಲ ವಾರಕ್ಕೆ ಅಡಿಪಾಯದ ಕಾರ್ಯಗಳು ಪೂರ್ಣಗೊಳ್ಳಲಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana