ಉತ್ತರ ಪ್ರದೇಶ(ಸೆ.13): ದೇಶದಲ್ಲಿ ಭಯೋತ್ಪಾದನೆಗೆ ತಾಯಿ ಕಾಂಗ್ರೆಸ್ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದಾರೆ. ಕುಶಿನಗರದಲ್ಲಿ ಕೆಲ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಯೋಗಿ, ಕಾಂಗ್ರೆಸ್ ವಿರುದ್ಧ ಹಿಗ್ಗಾಮುಗ್ಗ ದಾಳಿ ನಡೆಸಿದ್ದಾರೆ.
ಕಾನೂನು ಸುವ್ಯವಸ್ಥೆಯಲ್ಲಿ ಯೋಗಿಗೆ ಅಗ್ರಸ್ಥಾನ, ಮತ್ತೆ BJP ಆಡಳಿತ ಬಯಸಿದ ಜನ; ಸುವರ್ಣನ್ಯೂಸ್ ಸಮೀಕ್ಷೆ!
ಕಾಂಗ್ರೆಸ್ ದೇಶವನ್ನು ಒಡೆಯಲು ಯತ್ನಿಸಿದವರಿಗೆ ರಾಜಾತಿಥ್ಯ ನೀಡಿದೆ. ದೇಶದಲ್ಲಿನ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದವರನ್ನು ಸಾಕಿ ಸಲಹಿದೆ. ಹೀಗಾಗಿ ಕಾಂಗ್ರೆಸ್ ಭಾರತದಲ್ಲಿನ ಭಯೋತ್ಪಾದನೆ ತಾಯಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ದೇಶದ ಜನರ ನಂಬಿಕೆಗೆ ದ್ರೋಹ ಮಾಡಿದ, ನಂಬಿಕೆಯನ್ನು ನೋಯಿಸುವ ಜನರನ್ನು ಸಹಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಶ್ರೀರಾಮನನ್ನು ಅವಮಾನಿ, ಮಾಫಿಯಾಗೆ ಆಶ್ರಯ ನೀಡಿದೆ. ಆದರೆ ಬಿಜೆಪಿ ನಾಗರೀಕರ ರಕ್ಷಣೆ, ಅವರ ನಂಬಿಕೆ ಹಾಗೂ ಅವರಿಗೆ ಬೇಕಾದ ಮೂಲಭೂತ ಸೌಕರ್ಯ ನೀಡುತ್ತಿದೆ. ಬಿಜೆಪಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತಿದೆ. ಬಿಜೆಪಿ ಎಲ್ಲರನ್ನೂ ಗೌರವಿಸುತ್ತದೆ, ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮೊದಲು ಬ್ರಿಟೀಷರು ದೇಶ ಲೂಟಿ ಮಾಡಿದರು, ಬಳಿಕ ಕಾಂಗ್ರೆಸ್ ದೇಶವನ್ನು ಕೊಳ್ಳೆ ಹೊಡೆಯಿತು. ಜವಾಹರ್ ಲಾಲ್ ನೆಹರೂ ಶ್ರೀರಾಮನನ್ನು ನಂಬುತ್ತಿರಲಿಲ್ಲ. ರಾಮನ ಹೆಸರು ಹೇಳುತ್ತಿರಲಿಲ್ಲ. ಇಂದಿರಾ ಗಾಂಧಿ ಸಂತರ ವಿರುದ್ಧ ಹರಿಹಾಯ್ದಿದ್ದಾರೆ. ಸೋನಿಯಾ ಗಾಂಧಿ ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಶ್ರೀರಾಮನೇ ಇಲ್ಲ ಎಂದ ಪಕ್ಷ. ಆದರೆ ರಾಮ ಜನ್ಮಸ್ಥಳದಲ್ಲಿ ಜನರ ಆಶಯದಂತೆ ಬಿಜೆಪಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಿದೆ ಎಂದು ಯೋಗಿ ಹೇಳಿದ್ದಾರೆ
ರಾಜಕೀಯ ಬದಿಗಿಟ್ಟು ಸತ್ಯವನ್ನು ಅರಿತುಕೊಳ್ಳಿ: ಮೋದಿ ವಿರೋಧಿಗಳಿಗೆ ಯೋಗಿ ಪಾಠ!
ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಆಡಳಿತದಲ್ಲಿ ಉತ್ತರ ಪ್ರದೇಶ ಮಾಫಿಯಾ ರಾಜ್ಯ, ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿತು. ಇದು ಅವರ ಕೊಡುಗೆ. ಬಿಜೆಪಿ ಸರ್ಕಾರ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೀವೇ ಗಮನಿಸಿ. ರಾಜ್ಯದಲ್ಲಿನ ಕ್ರೈಂ ರೇಟ್ ಪರಿಶೀಲಿಸಿ. ಇದು ಅಭಿವೃದ್ಧಿಪರ ಬಿಜೆಪಿ ಆಡಳಿತ ಎಂದು ಯೋಗಿ ಹೇಳಿದ್ದಾರೆ.