ರೈತರಿಗೆ ಬಂಪರ್ ಗಿಫ್ಟ್; 2022-23ರ ಸಾಲಿನ ಕೃಷಿ ಬೆಳೆಗೆ ಕನಿಷ್ಠ ಬೆಂಬಲ ಘೋಷಿಸಿದ ಕೇಂದ್ರ ಸರ್ಕಾರ!

By Suvarna NewsFirst Published Sep 13, 2021, 6:31 PM IST
Highlights
  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ
  • ಕೃಷಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಲು CCEA ಅನುಮೋದನೆ
  • ರೈತರ ಬೆಳೆಗಳಿಗೆ ಲಾಭದಾಯಕ ಬೆಲೆ, ರೈತರ ಹಿತ ಕಾಪಾಡಿದ ಕೇಂದ್ರ
     

ನವದೆಹಲಿ(ಸೆ.13): ಕೇಂದ್ರ ಸರ್ಕಾರ ರೈತರ ಹಿತ ಕಾಪಾಡಲು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಇದರ ಲಾಭವನ್ನು ದೇಶದ ರೈತರು ಪಡೆದುಕೊಳ್ಳುತ್ತಿದ್ದಾರೆ. ಇದೀಗ ರೈತರ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಸದೀಯ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ರೈತರ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಘೋಷಿಸಿದೆ.

ರಾಜ್ಯದ ಮೊಬೈಲ್‌ ಆ್ಯಪ್‌ ಬೆಳೆ ಸಮೀಕ್ಷೆಗೆ ಕೇಂದ್ರದ ಮೆಚ್ಚುಗೆ

ಕೇಂದ್ರ ಸರ್ಕಾರ ಜಾರಿಗೊಳಿಸಿದ ಹಲವು ರೈತಪರ ಯೋಜನೆಗಳಿಂದ ಭಾರತದಲ್ಲಿನ ಆಹಾರ ಧಾನ್ಯ, ಬೆಳೆಗಳ ಉತ್ಪಾದನೆಯಲ್ಲಿ ಸುಧಾರಣೆ ಕಂಡಿದೆ. ಕೊರೋನಾ 2 ಅಲೆಗಳ ನಡುವೆ ದೇಶ ಕೃಷಿ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಿದೆ. ಇದೀಗ ಕೇಂದ್ರ ಸರ್ಕಾರ, 2022ರ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. 

ರಾಬಿ ಬೆಳೆಗಳ ಬಿತ್ತನೆಗೂ ಮೊದಲೇ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಇದರಿಂದ ರೈತ ನಿರಾಂತಕವಾಗಿ ಬಿತ್ತನೆ ಮಾಡಲು ಸಾಧ್ಯವಾಗಲಿದೆ. ಇಷ್ಟೇ ಅಲ್ಲ ಫಸಲಿನ ಸಂದರ್ಭದಲ್ಲಿ ಬೆಲೆ ಕುಸಿತವಾದರೂ ಸರ್ಕಾರ ಘೋಷಿಸಿದ ಕನಿಷ್ಠ ಬೆಂಬಲ ಬೆಲೆ ರೈತರಿಗೆ ಸಿಗಲಿದೆ. ಕನಿಷ್ಠ ಬೆಂಬಲ ಬೆಲೆ ಕೃಷಿ ಬೆಲೆ ನೀತಿಯ ಅವಿಭಾಜ್ಯ ಅಂಗವಾಗಿದೆ. ಇದರಿಂದ ರೈತರಿಗೆ ಬೆಂಬಲ ಬೆಲೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯನ್ನು ಉತ್ಪನ್ನಗಳು ಸಿಗುವಂತಾಗಲಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ(CACP) ಮಾಡಿದ ಶಿಫಾರಸು ಆಧಾರದಲ್ಲಿ ಕೇಂದ್ರ ಸರ್ಕಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

'ಬಾಕಿ ವಿಮೆ ಹಣ ರೈತರ ಖಾತೆಗೆ ಶೀಘ್ರದಲ್ಲಿ ಜಮಾ'

ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮೂಲಕ ದೇಶದಲ್ಲಿ ಕೃಷಿ ಬೆಳೆಗಳಾದ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು ಮತ್ತು ವಾಣಿಜ್ಯ ಬೆಳೆಗಳು, ಭತ್ತ, ಜೋಳ, ಬಜಾರ, ರಾಗಿ, ಮೆಕ್ಕೆಜೋಳ, ಅರ್ಹಾರ್, ಮೂಂಗ್, ಉರಾಡ್, ಹತ್ತಿ, ನೆಲಗಡಲೆ, ಸೂರ್ಯಕಾಂತಿ ಬೀಜ, ಸೋಯಾಬೀನ್, ಸೇಸಮ್ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಲಾಗಿದೆ. ರಾಬಿ ಬೆಳೆಗಳಾದ ಗೋಧಿ, ಬಾರ್ಲಿ, ಗ್ರಾಂ, ಮಸೂರ್, ರಾಪ್ಸೀಡ್ಸ್, ಸಾಸಿವೆ, ಕುಸುಮ ಮತ್ತು ಟೋರಿಯಾಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿದೆ. 

ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!

ರಾಬಿ ಬೆಳೆಗಳಿಗೆ ವರ್ಷದ ಕನಿಷ್ಠ ಬೆಂಬಲ ಬೆಲೆ ಘೋಷಣೆಯನ್ನು ಅಕ್ಟೋಬರ್‌ನಲ್ಲಿ ಮಾಡಲಾಗುತ್ತಿತ್ತು. ಕಳೆದ ವರ್ಷ ಸೆಪ್ಟೆಂಬರ್ 23 ರಂದು ಮಾಡಿದರೆ, ಈ ವರ್ಷ 2022-223ರ ಸಾಲಿನ ಬೆಂಬಲ ಬೆಲೆಯನ್ನು ರಾಬಿ ಬೆಳೆಗಳ ಬಿತ್ತನೆಗೂ ಮೊದಲೇ ಘೋಷಣೆ ಮಾಡೋ ಮೂಲಕ ರೈತರ ಆತಂಕವಿಲ್ಲದೆ ಬಿತ್ತನೆಗೆ ಇಳಿಯಲು ಕೇಂದ್ರ ಸರ್ಕಾರ ಸಹಾಯ ಮಾಡಿದೆ. 

ಕಳೆದ ಸಾಲಿನಲ್ಲಿ ರಾಬಿ ಬೆಳೆಗಳ ಉತ್ಪಾದನೆ ಹೆಚ್ಚಾಗಿದೆ. ರಾಬಿ ಮಾರ್ಕೆಟಿಂಗ್ ಸೀಸನ್ 2022-23ಕ್ಕೆ ನಿಗದಿಪಡಿಸಿ ಕನಿಷ್ಠ ಬೆಂಬಲ ಬೆಲೆ ಉತ್ಪಾದನೆ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚಾಗಿದೆ.  ಗೋಧಿ (100%) ಮತ್ತು ಬೇಳೆ/ಸಾಸಿವೆ (100%), ನಂತರ ದ್ವಿದಳ ಧಾನ್ಯ (79%) ಮತ್ತು ಗ್ರಾಂ (74%) ದಲ್ಲಿ ರೈತರಿಗೆ ಅವರ ಉತ್ಪಾದನಾ ವೆಚ್ಚದ ಮೇಲೆ ನಿರೀಕ್ಷಿತ ಆದಾಯವು ಅತಿ ಹೆಚ್ಚು ಎಂದು ಅಂದಾಜಿಸಲಾಗಿದೆ; ಬಾರ್ಲಿ (60%); ಕುಸುಮ (50%) ನೀಡಲಾಗಿದೆ.

click me!