ವಿಶ್ವ ಸೈಕಲ್ ದಿನದಂದೆ ಭಾರತದ ಅಟ್ಲಾಸ್ ಕಂಪನಿ ಸ್ಥಗಿತ; ಬೀದಿಗೆ ಬಿದ್ದ ನೌಕರರು!

Suvarna News   | Asianet News
Published : Jun 04, 2020, 09:07 PM ISTUpdated : Jun 04, 2020, 09:11 PM IST
ವಿಶ್ವ ಸೈಕಲ್ ದಿನದಂದೆ ಭಾರತದ ಅಟ್ಲಾಸ್ ಕಂಪನಿ ಸ್ಥಗಿತ; ಬೀದಿಗೆ ಬಿದ್ದ ನೌಕರರು!

ಸಾರಾಂಶ

ಅಟ್ಲಾಸ್ ಸೈಕಲ್ ಭಾರತದ ಪ್ರಸಿದ್ದ ಸೈಕಲ್. ಹಲವು ದಶಕಗಳಿಂದ ಭಾರತದಲ್ಲಿ ಸೈಕಲ್ ಪೂರೈಕೆ ಮಾಡುತ್ತಿರುವ ಅಟ್ಲಾಸ್ ಇದ್ದಕ್ಕಿದ್ದಂತೆ ಕಂಪನಿ ಸ್ಥಗಿತಗೊಂಡಿದೆ. ನೌಕರರಿಗೆ ಯಾವುದೇ ಸೂಚನೆ ನೀಡಿದೆ ಕಂಪನಿ ಬಾಗಿಲು ಮುಚ್ಚಿದೆ. ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ದುರಂತ ಅಂದರೆ ವಿಶ್ವ ಬೈಸಿಕಲ್ ದಿನದಂತೆ ಕಂಪನಿ ಕ್ಲೋಸ್ ಆಗಿದೆ.

ಉತ್ತರ ಪ್ರದೇಶ(ಜೂ.04): ಭಾರತದ ಪ್ರಖ್ಯಾತ ಸೈಕಲ್ ಕಂಪನಿ ಅಟ್ಲಾಸ್ ದುರಂತ ಅಂತ್ಯಕಂಡಿದೆ. ಜೂನ್ 3 ವಿಶ್ವ ಬೈಸಿಕಲ್ ದಿನ. ಇದೇ ದಿನ ಉತ್ತರ ಪ್ರದೇಶದ ಘಾಝಿಯಾಬಾದ್‌ನಲ್ಲಿದ್ದ ಅತೀ ದೊಡ್ಡ ಫ್ಯಾಕ್ಟರಿ ಮುಚ್ಚಲಾಗಿದೆ. ಇದರೊಂದಿಗೆ 1000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಭಾರಿ ನಷ್ಟದ ಕಾರಣ ಕಂಪನಿ ಸ್ಥಗಿತಗೊಳಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಸೈಕಲ್‌ ಅಂದರೆ ಎಷ್ಟೊಂದು ಸವಿಸವಿ ನೆನಪು!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಅಟ್ಲಾಸ್ ಫ್ಯಾಕ್ಟರಿ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಕಳೆದೆರಡು ತಿಂಗಳಿಂದ ಕಂಪನಿ ಮುಚ್ಚಿತ್ತು. ಲಾಕ್‌ಡೌನ್ ಸಡಿಲಿಕೆ ಬೆನ್ನಲ್ಲೇ ಜೂನ್ 1 ರಿಂದ ಅಟ್ಲಾಸ್ ಸೈಕಲ್ ಕಂಪನಿ ಪುನರ್ ಆರಂಭಗೊಂಡಿತು. ಉದ್ಯೋಗಿಗಳು ಖುಷಿ ಖುಷಿಯಿಂದ ಕೆಲಸಕ್ಕೆ ತೆರಳಿದ್ದರು. 2 ದಿನ ಕೆಲಸ ಮಾಡಿದ್ದ ನೌಕರರು, ಜೂನ್ 3 ರಂದು ಕೆಲಸಕ್ಕೆ ಬೆಳಗ್ಗೆ ತೆರಳಿದಾಗ ಕಂಪನಿಯ ಮುಖ್ಯ ದಾರ ಬೀಗ ಹಾಕಿ ಮುಚ್ಚಲಾಗಿತ್ತು.

ಮಂಗಳೂರಿಗೆ ಬಂತು 12 ಲಕ್ಷ ರು.ಗಳ ದುಬಾರಿ ಸೈಕಲ್‌!

ಗೇಟ್‌ನಲ್ಲಿ ಕಂಪನಿ ನೊಟೀಸ್ ಹಾಕಲಾಗಿತ್ತು. ಆರ್ಥಿಕ ನಷ್ಟ ಸರಿದೂಗಿಸಲು ಸಾಧ್ಯವಾಗದ ಕಾರಣ ಕಂಪನಿ ಮುಚ್ಚಲಾಗಿದೆ ಎಂದು ಹೇಳಲಾಗಿತ್ತು. ಕಂಪನಿ ಆಡಳಿತ ಮಂಡಳಿ ಯಾವುದೇ ಸೂಚನೆ ನೀಡಿದ ಫ್ಯಾಕ್ಟರಿ ಸ್ಥಗಿತಗೊಂಡಿತು. ಉದ್ಯೋಗ ಕಳೆದುಕೊಂಡ ನೌಕರರು ಕೋರ್ಟ್ ಮೆಟ್ಟಿಲೇರಿದ್ದಾರೆ. ಯಾವುದೇ ಸೂಚನೆ ನೀಡಿದ ಕಂಪನಿ ಮುಚ್ಚಲಾಗಿದೆ ಎಂದಿದ್ದಾರೆ. ಈ ಕುರಿತು ಕೋರ್ಟ್ ಶುಕ್ರವಾರಕ್ಕೆ(ಜೂ.05) ವಿಚಾರಣೆ ಮುಂದೂಡಿದೆ.

ಕೊರೋನಾ ವಾರಿಯರ್ಸ್ ಹಾಗೂ ಲಾಕ್‌ಡೌನ್ ಕಾರಣ ಎಲ್ಲೂ ಉದ್ಯೋಗವಿಲ್ಲ. ಕುಟುಂಬ, ಮಕ್ಕಳು, ಅವರ ವಿದ್ಯಭ್ಯಾಸ, ಜೀವನ ನಡೆಸುವುದು ಹೇಗೆ? ಎಂದು ನೌಕರರು ಪ್ರಶ್ನಿಸಿದ್ದಾರೆ. ಹಲವು ಉದ್ಯೋಗಿಗಳು 1989ರಿಂದ ಅಟ್ಲಾಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಿಂಗಳ 2 ಲಕ್ಷ ಸೈಕಲ್ ಉತ್ಪಾದಿಸುತ್ತಿದ್ದರು. ಆದರೆ ಇಷ್ಟು ವರ್ಷ ಕೆಲಸ ಮಾಡಿ ಇದೀಗ ಏಕಾಏಕಿ ಕಂಪನಿ ಮುಚ್ಚಿ ಉದ್ಯೋಗ ಕಳೆದುಕೊಂಡಿರುವುದು ನೌಕರರಿಗೆ ತೀವ್ರ ನೋವು ತರಿಸಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ