
ನವದೆಹಲಿ(ಜೂ.04): ಕೊರೋನಾ ವೈರಸ್ ಬಳಿಕ ಬಹುತೇಕ ರಾಷ್ಟ್ರಗಳು ಚೀನಾದಲ್ಲಿರುವ ತಮ್ಮ ತಮ್ಮ ಉತ್ಪಾದನ ಘಟಕ, ಶಾಖೆಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದೆ. ಇದೀಗ ಜರ್ಮನ್ ಚಪ್ಪಲಿ ಕಂಪನಿ ಚೀನಾದಿಂದ ದೆಹಲಿಯ ಆಗ್ರಾಗೆ ಸ್ಥಳಾಂತರಗೊಳ್ಳುತ್ತಿದೆ. ಈ ಕುರಿತು ಭಾರತದ ಸರ್ಕಾರ ಜೊತೆಗೆ ಮಹತ್ವದ ಮಾತುಕತೆ ನಡೆಸಿದೆ. ಕಾಸಾ ಎವೆರ್ಜ್ Gmbh ಕಂಪನಿ ಇದೀಗ ಚೀನಾಗೆ ಗುಡ್‌ಬೇ ಹೇಳಿ, ಆಗ್ರಾದಲ್ಲಿ ಘಟಕ ಸ್ಥಾಪಿಸಲು ನಿರ್ಧರಿಸಿದೆ.
ಲಡಾಖ್ ಗಡಿಯಲ್ಲಿ ಚೀನಾ ಯುದ್ದ ವಿಮಾನ ಹಾರಾಟ; ಯುದ್ಧದ ಕಾರ್ಮೋಡ!.
ಕಾಸಾ ಎವೆರ್ಜ್ Gmbh ಕಂಪನಿಯ ವೊನ್ ವೆಲ್ಲೆಕ್ಸ್ ( Von Wellx) ಬ್ರ್ಯಾಂಡ್ ಶೂ, ಚಪ್ಪಲ್ ಘಟಕ ಸ್ಥಳಾಂತರವಾಗುತ್ತಿದೆ. ಈ ಕುರಿತು ಕಾಸಾ ಎವೆರ್ಜ್ Gmbh ಕಂಪನಿ ಜೊತೆ ಮಾತುಕತೆ ನಡೆಸಿರುವ MSME ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಈ ವಿಚಾರ ಬಹಿರಂಗ ಪಡಿಸಸಿದ್ದಾರೆ. ಆಗ್ರಾದಲ್ಲಿ ಘಟಕ ಸ್ಥಾಪನೆಯಾದರೆ ಬರೋಬ್ಬರಿ 10,000 ಉದ್ಯೋಗ ಸೃಷ್ಟಿಯಾಗಲಿದೆ.
ಚೀನಿ ವಸ್ತು ಬಹಿಷ್ಕರಿಸಲು ವಾಂಗ್‌ಚುಕ್ ಕರೆ; ಟಿಕ್‌ಟಾಕ್ ಡಿಲೀಟ್ ಮಾಡಿದ ಮಿಲಿಂದ್ ಸೋಮನ್!.
ಭಾರತದ ಲ್ಯಾಟ್ರಿಕ್ಸ್ ಲಿಮಿಟೆಡ್ ಕಂಪನಿ ಜೊತೆ ಕಾಸಾ ಎವೆರ್ಜ್ Gmbh ಕಂಪನಿ ಈಗಾಗಲೇ ಒಪ್ಪಂದ ಮಾಡಿಕೊಂಡಿದ್ದು, ಜಂಟಿಯಾಗಿ ಬೃಹತ್ ಫ್ಯಾಕ್ಟರಿ ತೆರೆಯಲು ಉದ್ದೇಶಿಸಿದೆ. ಒಂದು ಕಂಪನಿಯೊಂದು ಚೀನಾದಿಂದ ಆಗ್ರಾಗೆ ಬರುತ್ತಿದೆ. ಈ ಮೂಲಕ ಇತರ ಕಂಪನಿಗಳು ಭಾರತಕ್ಕೆ ಆಗಮಿಸಲಿದೆ ಎಂದು ರಾಜ್ಯ ಸಚಿವ ಉದಯಾನ್ ಸಿಂಗ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ