ದೆಹಲಿ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದ್ದ ವಿದೇಶಿಯರಿಗೆ ನಿರ್ಬಂಧ/ 10 ವರ್ಷ ಬಹಿಷ್ಕಾರ ಹಾಕಿದ ಭಾರತ ಸರ್ಕಾರ/ 2,550 ವಿದೇಶಿಯರ ವಿರುದ್ದ ಕ್ರಮ/ ಕೇಂದ್ರ ಗೃಹ ಇಲಾಖೆ ಹೇಳಿಕೆ/ ವೀಸಾ ರದ್ದು
ನವದೆಹಲಿ(ಜೂ.04): ಕೊರೋನಾ ವೈರಸ್ ನಡುವೆ ತಬ್ಲಿಘಿ ಜಮಾತ್ ನೀಡಿದ ಆತಂಕದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದ್ದ 2,550 ವಿದೇಶಿಗರನ್ನು ಭಾರತದ ಗೃಹ ಇಲಾಖೆ ಬ್ಯಾನ್ ಮಾಡಿದೆ.
ಪೊಲೀಸರು ಹೊಸದಾಗಿ 12 ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 541 ವಿದೇಶಿಗರು ತಬ್ಲಿಘಿಗಳ ಸಂಪರ್ಕದಲ್ಲಿ ಇದ್ದರು ಎಂದು ಹೆಸರಿಸಲಾಗಿದೆ. 1,750 ಜನರ ವೀಸಾ ಕಪ್ಪುಪಟ್ಟಿಗೆ ಸೇರಿಸಲಾಗಿದೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಗೃಹ ಸಚಿವಾಲಯ ಅಧಿಕಾರಿಗಳು ಮುಂದಿನ 10 ವರ್ಷಗಳ ಕಾಲ ಇವರು ಭಾರತಕ್ಕೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ತಬ್ಲಿಘಿಗಳಿಂದ ಕೊರೋನಾ ಬಂದಿದೇಯಾ? ಸಿದ್ದು ಬೌನ್ಸರ್
ಕೊರೋನಾ ವೈರಸ್ ಕಾಣಿಸಿಕೊಂಡ ಮೇಲೆ ಈ ವರ್ಷದ ಮಾರ್ಚ್ ಮಧ್ಯಭಾಗದಲ್ಲಿ ದೆಹಲಿಯಲ್ಲಿ ನಡೆದ ತಬ್ಲಿಲಿ ಜಮಾತ್ ಧಾರ್ಮಿಕ ಸಭೆ ನಂತರ ದೇಶವ್ಯಾಪಿ ಕೊರೋನಾ ಹರಡುವುದಕ್ಕೆ ಕಾರಣವಾಗಿತ್ತು. ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ ಮೇಲೆ ಕೇಂದ್ರ ಗೃಹ ಇಲಾಖೆ ದಿಟ್ಟ ಕ್ರಮ ತೆಗೆದುಕೊಂಡಿದೆ.
ಸಭೆಯಲ್ಲಿ ಇಂಡೋನೇಷ್ಯಾ, ಮಲೇಷ್ಯಾ ಸೇರಿದಂತೆ ಅನೇಕ ದೇಶಗಳ ವಿದೇಶೀಯರು ಸೇರಿದಂತೆ ಸುಮಾರು 2,000ಕ್ಕೂ ಅಧಿಕ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜನರು ಒಂದೆ ಕಡೆ ಸೇರಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ದೇಶವೇ ಕೊರೋನಾ ವಿರುದ್ಧದ ಹೋರಾಟದಲ್ಲಿದ್ದಾಗ ಈ ಧಾರ್ಮಿಕಕ ಸಭೆಯ ಅಗತ್ಯ ಏನಿತ್ತು ಎಂದು ಪ್ರಶ್ನೆ ಮಾಡಲಾಗಿದೆ. ದೇಶದಲ್ಲಿ 21 ದಿನದ ಲಾಕ್ ಡೌನ್ ಜಾರಿಯಲ್ಲಿದ್ದಾಗ ಇಲ್ಲಿ ಸಭೆ ನಡೆಯುತ್ತಿದ್ದು 2300 ಜನ ಇದ್ದರು.