
ಚೆನ್ನೈ (ಮೇ.13): ಟಿವಿಕೆ ಗೆಲುವಿನ ಬಗ್ಗೆ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿ ವಿಜಯ್ ತಮ್ಮ ವಿಶೇಷ ರಾಜಕೀಯ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ. ‘ಟಿವಿಕೆ ಸುನಾಮಿ ಗೆಲುವು ಪಡೆಯಲಿದೆ. ವಿಜಯ್ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ರಿಕಿ ಭವಿಷ್ಯ ನುಡಿದಿದ್ದರು.
ವಿಜಯ್ ಮಾತ್ರವಲ್ಲ, ಈ ಹಿಂದೆ ಜಯಲಲಿತಾ, ಸ್ಟಾಲಿನ್, ಎಡಪ್ಪಾಡಿ ಸೇರಿದಂತೆ ಪ್ರಮುಖರ ಬಗ್ಗೆ ನಿಖರ ಭವಿಷ್ಯ ಹೇಳಿದ್ದರು. ಸ್ಟಾಲಿನ್ ರಾಜಕೀಯವಾಗಿ ಕಠಿಣ ದಿನಗಳನ್ನು ಎದುರಿಸಲಿದ್ದಾರೆ, ಉದಯನಿಧಿ ಸ್ಟಾಲಿನ್ ಹೆಚ್ಚಿನ ಪ್ರಗತಿ ಸಾಧಿಸುವುದಿಲ್ಲ. ಎಡಪ್ಪಾಡಿ ರಾಜಕೀಯವು ಪ್ರಸ್ತುತ ಉತ್ತಮವಾಗಿರಲಿದೆ ಎಂದಿದ್ದರು. ಇದಕ್ಕೂ ಮುನ್ನ ಅವರು ಜಯಲಲಿತಾ ರಾಜಕೀಯವಾಗಿ ಹಿನ್ನಡೆ ಅನುಭವಿಸಲಿದ್ದಾರೆ ಅಂತಲೂ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ