IMD forecasts: ಈ ವರ್ಷ ಒಂದು ವಾರ ಮೊದಲೇ, ಮೇ 17ಕ್ಕೆ ಅಂಡಮಾನ್‌ಗೆ ಮಾನ್ಸೂನ್‌ ಪ್ರವೇಶ

Kannadaprabha News   | Kannada Prabha
Published : May 13, 2026, 07:14 AM IST
Meteorological Department predicts monsoon entry into Andaman on May 17

ಸಾರಾಂಶ

ಈ ವರ್ಷ ಮುಂಗಾರು ಮಾರುತಗಳು ವಾಡಿಕೆಗಿಂತ ಮುಂಚಿತವಾಗಿ ಆಗಮಿಸುವ ಸಾಧ್ಯತೆಯಿದೆ. ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ಮೇ 17ರಂದು ಅಂಡಮಾನ್‌ ಮತ್ತು ಮೇ 25ರ ಸುಮಾರಿಗೆ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ದಕ್ಷಿಣ ಭಾರತಕ್ಕೆ ಬಿಸಿಲಿನಿಂದ ಶೀಘ್ರದಲ್ಲೇ ಮುಕ್ತಿ ಸಿಗಲಿದೆ.

ನವದೆಹಲಿ: ದೇಶದ ಕೃಷಿ ಮತ್ತು ಆರ್ಥಿಕತೆಯ ಮೂಲವಾದ ಮುಂಗಾರು ಮಾರುತಗಳುಈ ವಾರದ ಕೊನೆಯಲ್ಲಿ (ಮೇ 17) ದಕ್ಷಿಣ ಬಂಗಾಳದ ಉಪಸಾಗರ, ಅಂಡಮಾನ್ ಸಮುದ್ರ ಮತ್ತು ಅಂಡಮಾನ್‌, ನಿಕೋಬಾರ್‌ ದ್ವೀಪಗಳಿಗೆ ಆಗಮಿಸುವ ಸಾಧ್ಯತೆಯಿದೆ. ವಾಡಿಕೆಯಂತೆ ಇದು ಮೇ 22ಕ್ಕೆ ಅಂಡಮಾನ್‌ ಪ್ರವೇಶಿಸುತ್ತದೆ. ಆದರೆ ಈ ಬಾರಿ ಸುಮಾರು 5-6 ದಿನ ಮುಂಚಿತವಾಗಿ ಆಗಮಿಸಲಿದೆ. ಸಾಮಾನ್ಯವಾಗಿ ಜೂ.1ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುತ್ತದೆ. ಈ ಮೂಲಕ 4 ತಿಂಗಳ ಮಳೆಗಾಲ ಆರಂಭವಾಗುತ್ತದೆ.

ಈ ವರ್ಷ ಮೇ 25ಕ್ಕೇ ಕೇರಳಕ್ಕೆ ಮುಂಗಾರು ಆಗಮನ?

ತಿರುವನಂತಪುರಂ: ‘ವಾಡಿಕೆಯಂತೆ ಕೇರಳಕ್ಕೆ ಜೂ.1ರ ಸುಮಾರಿಗೆ ಆರಂಭವಾಗುತ್ತಿದ್ದ ಮಾನ್ಸೂನ್‌ ಈ ವರ್ಷ ಮೇ ಕೊನೆಯ ವಾರದಲ್ಲೇ (ಮೇ.25-ಜೂ.1) ಆರಂಭವಾಗಲಿದ್ದು, ಬಿಸಿಲಿನ ಧಗೆಗೆ ಬೇಸತ್ತಿರುವ ದಕ್ಷಿಣ ಭಾರತಕ್ಕೆ ಶೀಘ್ರವಾಗಿ ತಂಪೆರೆಯಲಿದೆ’ ಎಂದು ಯುರೋಪ್‌ ಹವಾಮಾನ ಮುನ್ಸೂಚನೆ ಕೇಂದ್ರ ಹೇಳಿದೆ.

ದಕ್ಷಿಣ-ಪೂರ್ವ ಅರಬ್ಬೀ ಸಮುದ್ರದಲ್ಲಿ ಬಲವಾದ ಪಶ್ಚಿಮ ಗಾಳಿಗಳು ರೂಪುಗೊಳ್ಳುವುದರಿಂದ ಕೇರಳ ಮತ್ತು ದಕ್ಷಿಣ ತಮಿಳುನಾಡು ಪ್ರದೇಶಗಳಿಗೆ ಹೆಚ್ಚಿನ ತೇವಾಂಶವುಂಟಾಗಬಹುದು. ಇದು ಸಾಧ್ಯವಾದರೆ, ಕೇರಳದಲ್ಲಿ ಮಾನ್ಸೂನ್ ಮೇ 25ರಷ್ಟು ಮುಂಚಿತವಾಗಿ ಆರಂಭವಾಗಬಹುದು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೇ 17ರಿಂದ 25ರ ನಡುವೆ, ದಕ್ಷಿಣ ಭಾರತಕ್ಕೆ ಮೇ ಕೊನೆಯ ವೇಳೆಗೆ ಮಾನ್ಸೂನ್ ತಲುಪುವ ನಿರೀಕ್ಷೆ ಇದೆ. ಕೇರಳ ಮತ್ತು ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮೇ 25ರಿಂದ ಜೂ.1ರವರೆಗೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: 5-6 ದಿನ ಮುಂಚಿತವಾಗಿ ಮೇ 17ರಂದು ಅಂಡಮಾನ್‌ಗೆ ಮಾನ್ಸೂನ್‌ ಪ್ರವೇಶ
ಪಾಕಿಸ್ತಾನ ಮಗ್ಗುಲ ಮುಳ್ಳಾದರೂ ಮಾತುಕತೆ ನಿಲ್ಲಿಸಬಾರದು; ಹೊಸಬಾಳೆ ಹೇಳಿಕೆಯಲ್ಲಿ ಅಡಗಿರುವ ಸಂದೇಶ ಏನು?