ಈ ತಿಂಗಳಾಂತ್ಯದಿಂದ ವಿಶ್ವಯುದ್ಧ ಆರಂಭ? ಭಯಾನಕ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

By Kannadaprabha News  |  First Published Jun 19, 2024, 2:14 PM IST

ವಿಶ್ವದ 3ನೇ ಸಮರಕ್ಕೆ ಕಾರಣವಾಗುವಂಥ ಅತ್ಯಂತ ಬಲವಾದ ಗ್ರಹ ಬದಲಾವಣೆ ಜೂ.18ರಂದು ಸಂಭವಿಸಲಿದೆ ಎಂದಿದ್ದಾರೆ.


ನವದೆಹಲಿ: ಇಸ್ರೇಲ್‌-ಹಮಾಸ್‌, ರಷ್ಯಾ-ನ್ಯಾಟೋ, ಉತ್ತರ ಕೊರಿಯಾ- ದಕ್ಷಿಣ ಕೊರಿಯಾ, ಚೀನಾ- ತೈವಾನ್‌ ನಡುವಿನ ಬಿಕ್ಕಟ್ಟು ಉಲ್ಬಣದ ಕುರಿತು ನಿಖರವಾಗಿ ಭವಿಷ್ಯ ನುಡಿದಿದ್ದ ಖ್ಯಾತ ಜ್ಯೋತಿಷಿ ಕುಶಾಲ್‌ ಕುಮಾರ್‌ ಈ ಮಾಸಾಂತ್ಯ ಅಂದರೆ ಜೂ.29ರಂದು ಮೂರನೇ ವಿಶ್ವ ಮಹಾಯುದ್ಧ (ವಿನಾಶ ಕಾಲ) ಆರಂಭವಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.

ವೇದಿಕ್‌ ಆಸ್ಟ್ರಾಲಜಿ ಚಾರ್ಟ್‌ ನೋಡಿ ತಾವು ಭವಿಷ್ಯ ನುಡಿಯುವುದಾಗಿ ಹೇಳಿರುವ ಕುಶಾಲ್‌, ವಿಶ್ವದ 3ನೇ ಸಮರಕ್ಕೆ ಕಾರಣವಾಗುವಂಥ ಅತ್ಯಂತ ಬಲವಾದ ಗ್ರಹ ಬದಲಾವಣೆ ಜೂ.18ರಂದು ಸಂಭವಿಸಲಿದೆ ಎಂದಿದ್ದಾರೆ.

Tap to resize

Latest Videos

ನಟ ದರ್ಶನ್ ಕೋಪ ಮತ್ತು ಉಮಾಪತಿ ಗೌಡ ತಾಳ್ಮೆ, ಭವಿಷ್ಯ ನುಡಿದ ಕೋಡಿಶ್ರೀ

ತಮ್ಮ ಹೇಳಿಕೆಗೆ ಪೂರಕವಾಗಿ ಅವರು, ಇಸ್ರೇಲ್‌- ಲೆಬನಾನ್‌ ನಡುವೆ ಉದ್ವಿಗ್ನ ಪರಿಸ್ಥಿತಿ, ಉತ್ತರ ಕೊರಿಯಾದ ಸೈನಿಕರು ದಕ್ಷಿಣದ ಕೊರಿಯಾದ ಗಡಿ ನಿಯಂತ್ರಣ ರೇಖೆ ದಾಟಿರುವುದು, ರಷ್ಯಾ ತನ್ನ ಯುದ್ಧ ನೌಕೆಗಳನ್ನು ಪ್ರಕ್ಷುಬ್ಧ ಪ್ರದೇಶಕ್ಕೆ ರವಾನಿಸಿರುವುದು, ತೈವಾನ್‌ ಸಮೀಪ ಚೀನಾ ತನ್ನ ಸೇನಾ ಕವಾಯತು ನಡೆಸಿರುವುದನ್ನು ಉದಾಹರಣೆಯಾಗಿ ನೀಡಿದ್ದಾರೆ.

ವಿಶೇಷವೆಂದರೆ ಶತಮಾನಗಳ ಹಿಂದೆ ಫ್ರಾನ್ಸ್‌ನಲ್ಲಿ ಬದುಕಿದ್ದ ಖ್ಯಾತ ಜ್ಯೋತಿಷಿ ನಾಸ್ಟ್ರಾಡಮಸ್‌ ಕೂಡಾ 2024ರಲ್ಲಿ ನೌಕಾ ಯುದ್ಧ, ಹೊಸ ಪೋಪ್‌ ಆಗಮನ, ರಾಜಮನೆತನದಲ್ಲಿ ಪಲ್ಲಟದ ಭವಿಷ್ಯ ನುಡಿದಿದ್ದರು.

ಅಮೇಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಆರ್ಡರ್ ಮಾಡಿದ ದಂಪತಿಗೆ ಪಾರ್ಸೆಲ್ ಜೊತೆ 'ನಾಗರಹಾವು' ಫ್ರೀ!

click me!