ನಾಳೆಯಿಂದ ಮೋದಿ 2 ದಿನ ಕಾಶ್ಮೀರಕ್ಕೆ: ಯೋಗ ದಿನದಲ್ಲಿ ಭಾಗಿ

By Kannadaprabha News  |  First Published Jun 19, 2024, 1:49 PM IST

ಜೂ.21ರಂದು ಮೋದಿ ಶ್ರೀನಗರದ ಶೇರ್‌-ಎ-ಕಾಶ್ಮೀರ್ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ


ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜೂ.20 ಹಾಗೂ 21ರಂದು ಕಾಶ್ಮೀರ ಪ್ರವಾಸ ಕೈಗೊಳ್ಳಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ನಡುವೆ ಜೂ.21ರಂದು ಮೋದಿ ಶ್ರೀನಗರದ ಶೇರ್‌-ಎ-ಕಾಶ್ಮೀರ್ ಅಂತರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ

''ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ'' ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗತ್ತಿದ್ದು, ಸ್ವಯಂನ ಆಂತರ್ಯ ಮತ್ತು ಬಾಹ್ಯ ಪ್ರಪಂಚದ ನಡುವಿನ ಸಂಬಂಧವನ್ನು ಉತ್ತೇಜಿಸುವುದು ಇದರ ಉದ್ದೇಶ ಎಂದು ಕೇಂದ್ರ ಆಯುಷ್‌ ಖಾತೆ ರಾಜ್ಯಸಚಿವ ಪ್ರತಾಪ್ ರಾವ್ ಜಾಧವ್ ಮಂಗಳವಾರ ಹೇಳಿದ್ದಾರೆ. ಗ್ರಾಮೀಣ ಭಾಗಗಳಲ್ಲಿಯೂ ಯೋಗವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನಿ ಗ್ರಾಮಗಳ ಪ್ರಧಾನರಿಗೆ ಪತ್ರ ಬರೆದಿದ್ದಾರೆ ಎಂದರು.

Tap to resize

Latest Videos

ಮನ್ ಕಿ ಬಾತ್ ಪುನಾರಂಭ

ಲೋಕಸಭೆ ಚುನಾವಣೆ ಕಾರಣ ನಿಂತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮ ಜೂ.30ರಿಂದ ಪುನಾರಂಭ ಆಗಲಿದೆ. ಮಂಗಳವಾರ ಈ ವಿಷಯವನ್ನು ಟ್ವೀಟ್‌ನಲ್ಲಿ ಪ್ರಕಟಿಸಿರುವ ಮೋದಿ, ‘ಕಾರ್ಯಕ್ರಮದ ಬಗ್ಗೆ ಜನರು ತಮ್ಮ ವಿಚಾರಗಳನ್ನು ಮೈಗೌ ಓಪನ್ ಫೋರಂ, ನಮೋ ಆಪ್ ಅಥವಾ 1800 11 7800ಕ್ಕೆ ಸಂದೇಶ ಕಳಿಸಿ ಹಂಚಿಕೊಳ್ಳಬಹುದು’ ಎಂದು ಕೇಳಿಕೊಂಡಿದ್ದಾರೆ. ಮನ್-ಕೀ-ಬಾತ್ ಕೊನೆಯ ಬಾರಿಗೆ ಫೆ.25ರಂದು ಪ್ರಸಾರವಾಗಿತ್ತು. ಚುನಾವಣೆಯ ಸಮಯದ ಮಾದರಿ ನೀತಿ ಸಂಹಿತೆ ಕಾರಣ ಕಾರ್ಯಕ್ರಮ ನಿಲ್ಲಿಸಲಾಗಿತ್ತು.

ನೀಟ್‌ನಲ್ಲಿ ಎಳ್ಳಷ್ಟು ಲೋಪ ಆಗಿದ್ದರೂ ಕ್ರಮ: ಸುಪ್ರೀಂ ತಾಕೀತು

click me!