Assam: 35,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಸ್ಕೂಟರ್‌ ಉಡುಗೊರೆ..!

By BK AshwinFirst Published Oct 20, 2022, 4:31 PM IST
Highlights

ನವೆಂಬರ್ 30 ರಿಂದ ಸ್ಕೂಟರ್‌ ವಿತರಣೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಈ ವರ್ಷ, ಹುಡುಗರು ಸಹ ಸ್ಕೂಟರ್‌ಗಳನ್ನು ಪಡೆಯುತ್ತಾರೆ. ಆದರೆ ಅವರು ಗಳಿಸಿದ ಅಂಕಗಳು 75% ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು ಎಂದು ಹೇಳಿದರು. 

ಅಸ್ಸಾಂನ (Assam) ಬಿಜೆಪಿ (BJP) ಸರ್ಕಾರ ಮೆರಿಟ್‌ ವಿದ್ಯಾರ್ಥಿಗಳಿಗೆ (ಯುವಕರು ಮತ್ತು ಯುವತಿಯರು) ಉಚಿತ ಸ್ಕೂಟರ್‌ಗಳನ್ನು (Scooters) ನೀಡಲು ನಿರ್ಧಾರ ಮಾಡಿದೆ. 35,800 ವಿದ್ಯಾರ್ಥಿಗಳಿಗೆ ಈ ಸ್ಕೂಟರ್‌ಗಳನ್ನು ನೀಡಲಾಗುತ್ತಿದೆ. ಈ ವರ್ಷ ಮೆರಿಟ್‌ನಲ್ಲಿ 12ನೇ ತರಗತಿ (ಹೈಯರ್‌ ಸೆಕೆಂಡರಿ) (Higher Secondary) ಪಾಸಾದ ಯುವಕ (Boys) ಹಾಗೂ ಯುವತಿಯರಿಗೆ (Girls) ಈ ಸ್ಕೂಟರ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಶೇ. 60 ಹಾಗೂ ಅಧಿಕ ಅಂಕ ಪಡೆದ 29,748 ವಿದ್ಯಾರ್ಥಿನಿಯರಿಗೆ ಹಾಗೂ ಶೇ. 75 ಹಾಗೂ ಅದಕ್ಕೂ ಹೆಚ್ಚು ಅಂಕ ಪಡೆದ 6,052 ಯುವಕರಿಗೆ ಈ ಸ್ಕೂಟರ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ. 

ಅಸ್ಸಾಂ ರಾಜ್ಯದ ಶಿಕ್ಷಣ ಸಚಿವ (Education Minister) ರೊನೊಜ್ ಪೆಗು ಅವರು ಈ ನಿರ್ಧಾರವನ್ನು ಘೋಷಿಸಿದ್ದು, ಇದು ಹಿಂದಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡ ಇದೇ ರೀತಿಯ ಉಪಕ್ರಮಗಳ ಮುಂದುವರಿಕೆಯಾಗಿದೆ ಎಂದು ತಿಳಿಸಿದ್ದಾರೆ. “ರಾಜ್ಯ ಸರ್ಕಾರವು ವಿಶೇಷವಾಗಿ ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಲು ಸ್ಕೂಟರ್‌ಗಳನ್ನು ನೀಡುತ್ತಿದೆ. ಈ ವರ್ಷ, ಹುಡುಗರು ಸಹ ಸ್ಕೂಟರ್‌ಗಳನ್ನು ಪಡೆಯುತ್ತಾರೆ. ಆದರೆ ಅವರು ಗಳಿಸಿದ ಅಂಕಗಳು 75% ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು ಎಂದು ರೊನೊಜ್ ಪೆಗು ಹೇಳಿದರು.

Latest Videos

ಇದನ್ನು ಓದಿ: 10 ಪಾಲಿಕೆ ಸಫಾಯಿ ಕರ್ಮಚಾರಿಗಳಿಗೆ ಸ್ಕೂಟರ್‌: ಸಿಎಂ ಬೊಮ್ಮಾಯಿ

ಅಸ್ಸಾಂ ರಾಜಧಾನಿ ಗುವಾಹಟಿಯ ಜನತಾ ಭವನದಲ್ಲಿ ಬುಧವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಈ ಸಭೆ ನಡೆದಿದೆ. ನವೆಂಬರ್ 30 ರಿಂದ ಸ್ಕೂಟರ್‌ ವಿತರಣೆ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಕಾಮರೂಪ್ (ಮೆಟ್ರೋ) ಹಾಗೂ ಕಾಮರೂಪ್‌ ಜಿಲ್ಲೆಯಲ್ಲಿ ಇದರ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಅಸ್ಸಾಂ ಸರ್ಕಾರದ ಸಚಿವ ಜಯಂತ ಮಲ್ಲಾ ಬರುವಾ ಹೇಳಿದ್ದಾರೆ. 

ಇನ್ನು, ಪ್ರಸ್ತಾವನೆಯ ಭಾಗವಾಗಿ ಉನ್ನತ ಶಿಕ್ಷಣ ಇಲಾಖೆಯು ನೋಡಲ್ ಪ್ರಾಂಶುಪಾಲರ ಮೂಲಕ ಫಲಾನುಭವಿಗಳಿಗೆ ನೋಂದಣಿ ಮತ್ತು ವಿಮೆಗಾಗಿ ಹಣಕಾಸಿನ ನೆರವು ನೀಡುತ್ತದೆ ಎಂದು ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಒಟ್ಟಾರೆ ಅಸ್ಸಾಂ ರಾಜ್ಯ ಸರ್ಕಾರ ಇದಕ್ಕಾಗಿ  258.9 ಕೋಟಿ ರೂ. ಅನ್ನು ಖರ್ಚು ಮಾಡುತ್ತಿದೆಯಂತೆ.

ಇದನ್ನೂ ಓದಿ: 29 ವರ್ಷ ಹಳೆಯ ಬಜಾಜ್ ಚೇತಕ್‌ ಸ್ಕೂಟರ್‌ಗೆ ಮರುಜೀವ: ವಿಡಿಯೋ ವೈರಲ್ 
ಇಷ್ಟೇ ಅಲ್ಲ, ರಾಜ್ಯದಲ್ಲಿನ ಪ್ರಾಂತೀಯ ಕಾಲೇಜುಗಳಲ್ಲಿ ( ಅಸ್ಸಾಂ ರಾಜ್ಯ ಸರ್ಕಾರವು ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗೆ ವೇತನ ನೀಡುವ ಸಂಸ್ಥೆಗಳು) 135 ಸಹಾಯಕ ಪ್ರಾಧ್ಯಾಪಕರ ವೇತನವನ್ನು ತಿಂಗಳಿಗೆ ₹ 8,000 ರಿಂದ ಮತ್ತು ತಿಂಗಳಿಗೆ ₹ 21,600 ರಿಂದ ತಿಂಗಳಿಗೆ ₹ 55,000 ನಿಗದಿತ ವೇತನಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. .
 
ಇನ್ನೊಂದೆಡೆ, ರಾಜ್ಯದಲ್ಲಿ ಅತ್ಯಾಧುನಿಕ ಹೋಟೆಲ್‌ಗಳನ್ನು ಪ್ರಾರಂಭಿಸುವ ಬಿಜೆಪಿ ಸರ್ಕಾರದ ಕ್ರಮದ ಭಾಗವಾಗಿ, ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಳಿ ಹಯಾತ್ ಗ್ರೂಪ್‌ನಿಂದ ಪಂಚತಾರಾ ಹೋಟೆಲ್ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಮತ್ತು ಹೋಟೆಲ್‌ಗೆ ರಾಜ್ಯ ಸರ್ಕಾರದಿಂದ ಭೂಮಿಯನ್ನು ಒದಗಿಸಲಾಗುವುದು ಎಂದೂ ತೀರ್ಮಾ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಿದೆ. 

click me!