ಹವಾ ನಿಯಂತ್ರಣದಿಂದ ಹವಾಮಾನನೇ ಬದ್ಲಾಯ್ತು: ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

Published : Oct 20, 2022, 03:38 PM IST
ಹವಾ ನಿಯಂತ್ರಣದಿಂದ ಹವಾಮಾನನೇ ಬದ್ಲಾಯ್ತು: ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

ಸಾರಾಂಶ

ಎಸಿ ಆಫ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಛತ್ತೀಸ್‌ಗಡದ ಆಸ್ಪತ್ರೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ.

ರಾಯ್‌ಪುರ: ಹವಾ ನಿಯಂತ್ರಕ ಇರುವ ಕಚೇರಿಯಲ್ಲಿ ಕೆಲಸ ಮಾಡುವವರಾದರೆ ನಿಮಗೆ ಹವಾ ನಿಯಂತ್ರಕ ಕೆಲವೊಮ್ಮೆ ಎಷ್ಟೊಂದು ಕಾಟ ಕೊಡುತ್ತದೆ ಎನ್ನುವ ಅನುಭವ ಇರಬಹುದು. 24 ಗಂಟೆ ಬಳಸುವ ಸಿಸ್ಟಂ, ಕಂಪ್ಯೂಟರ್‌ಗಳನ್ನು ಕೆಡದಂತೆ ಇಡಲು ಬಳಸುವ ಈ ಹವಾ ನಿಯಂತ್ರಕ ಅಥವಾ ಎಸಿ ಮನುಷ್ಯರಿಗೆ ಬಹಳಷ್ಟು ಕಾಟ ನೀಡುತ್ತದೆ. ಕೈ ಕಾಲುಗಳ ಮರಗಟ್ಟುವಂತೆ ಮಾಡುತ್ತದೆ. ದೇಹದಲ್ಲಿರುವ ರಕ್ತವನ್ನು ಹೀರುತ್ತದೆ. ಇದು ಸೇರಿದಂತೆ ಹವಾ ನಿಯಂತಕದಿಂದ ಹಲವು ಆರೋಗ್ಯ ಸಮಸ್ಯೆಗಳಿವೆ. ಏಸಿಯ ಪ್ರಮಾಣ ಮೈನಸ್ ಆಗುತ್ತಿದ್ದಂತೆ ಮೈ ನಡುಕ ಶುರುವಾಗುತ್ತದೆ. ಇದೆಲ್ಲಾ ಪುರಾಣ ಈಗ್ಯಾಕೆ ಅಂತೀರಾ ಕಾರಣ ಇದೆ ಮುಂದೆ ಓದಿ...

ಇಲ್ಲೊಂದು ಕಡೆ ಎಸಿ ಆಫ್ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಛತ್ತೀಸ್‌ಗಡದ ಆಸ್ಪತ್ರೆಯೊಂದರಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ರಾಯ್‌ಪುರದ (Raipur) ಅಂಬಿಕಾಪುರ (Ambikapur) ಮೆಡಿಕಲ್‌ ಕಾಲೇಜಿನಲ್ಲಿ (Medical College) ಈ ಘಟನೆ ನಡೆದಿರುವುದಾಗಿ ವರದಿ ಆಗಿದೆ. 

ಮಹಿಳೆಯೊಬ್ಬಳು ಆಸ್ಪತ್ರೆಯಲ್ಲಿದ್ದ ಹವಾ ನಿಯಂತ್ರಕವನ್ನು ಆಫ್ ಮಾಡಲು ಮುಂದಾಗಿದ್ದಾಳೆ. ಇದಕ್ಕೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಆತನ ಮುಖ ಮೂತಿ ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ (Assult). ಮಹಿಳೆ ತನ್ನ ಚಪ್ಪಲಿಯಲ್ಲಿ(Slipper) ಆತನಿಗೆ ಹೊಡೆದಿದ್ದಲ್ಲದೇ ಬೆನ್ನಿಗೆ ಸತತವಾಗಿ ಕಾಲಿನಿಂದ ಒದ್ದಿದ್ದಾಳೆ. 

ಶ್ವಾನಗಳಿಗೂ‌ ಇಲ್ಲಿ ಕೂಲರ್ ಬೇಕು, ಅಷ್ಟೇ ಅಲ್ಲ ನಿತ್ಯ ನಾಲ್ಕಾರು ಬಾರಿ ಎಳನೀರು ಕುಡಿಸ್ಬೇಕು!

ವಿಡಿಯೋದಲ್ಲಿ ಕಾಣಿಸುವಂತೆ ಆಸ್ಪತ್ರೆಯ ನೆಲದ ಮೇಲೆ ವ್ಯಕ್ತಿಯೊಬ್ಬ ಕುಳಿತಿದ್ದಾನೆ. ಈ ವೇಳೆ ಕಪ್ಪು ಬಣ್ಣದ ಚೂಡಿಧಾರ್ ಟಾಪ್ ಧರಿಸಿದ್ದ ಮಹಿಳೆಯೊಬ್ಬಳು ಅಲ್ಲಿಗೆ ಬಂದಿದ್ದು, ಆಕೆ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಆತನ ಕೆನ್ನೆಗೆ ಬೆನ್ನಿಗೆ ಹೊಡೆದಿದ್ದಾಳೆ. ಇಷ್ಟು ಸಾಲದೆಂಬಂತೆ ಆಕೆ ಹಿಂದೆಯಿಂದ ಬಂದು ಕಾಲಿನಿಂದ ಆತನ ಬೆನ್ನಿಗೆ ಒದ್ದಿದ್ದಾಳೆ. ಇದೇ ವೇಳೆ ಅಲ್ಲೇ ಇದ್ದ ಮತ್ತೊಬ್ಬ ವ್ಯಕ್ತಿ ಬಂದು ಕೆಳಗೆ ಕುಳಿತಿದ್ದವನ ಬೆನ್ನಿಗೆ ಕೋಲಿನಿಂದ ಕುಟ್ಟುತ್ತಾ ಎದ್ದೇಳುವಂತೆ ಹೇಳುತ್ತಿದ್ದಾರೆ. ಅಲ್ಲದೇ ಆತನ  ಬಳಿ ಇದ್ದ ಬ್ಯಾಗ್‌ನ್ನು ಕೋಲೊಂದರಿಂದ ಮುಟ್ಟುತ್ತಾನೆ. 

ಕೆಲ ವರದಿಗಳ ಪ್ರಕಾರ, ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ವೈದ್ಯರಿಗಾಗಿ ಕಾಯುವ ಹಾಲ್‌ನಲ್ಲಿ (Waiting hall) ಬಂದು ಏರ್‌ ಕೂಲರ್ (Air Cooler) ಆನ್ ಮಾಡಿಕೊಂಡು ಮಲಗಿದ್ದು, ಅಲ್ಲಿಗೆ ಬಂದ ಮಹಿಳೆಯೊಬ್ಬಳು ಏರ್ ಕೂಲರ್ ಆಫ್ ಮಾಡಿದ್ದಾಳೆ. ಈ ವೇಳೆ ಏಕೆ ಏರ್ ಕೂಲರ್ ಆಫ್ ಮಾಡಿದ್ದು ಎಂದು ಆತ ಕೇಳಿದ್ದಾನೆ ಇದರಿಂದ ಒಮ್ಮೆಲೇ ತಾಳ್ಮೆ ಕಳೆದುಕೊಂಡ ಆಕೆ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಅಲ್ಲದೇ ಆತನಿಗೆ ನಿಂದಿಸಿದ್ದಾಳೆ. ಆದರೆ ಏಟು ತಿಂದ ವ್ಯಕ್ತಿ ಮಾತ್ರ ಯಾವುದೇ ಪ್ರತಿರೋಧವಾಗಲಿ ಪ್ರತಿಕ್ರಿಯೆಯಾಗಲಿ ನೀಡದೇ ಸುಮ್ಮನೇ ಕುಳಿತಿದ್ದಾನೆ. ಘಟನೆ ಇನ್ನಷ್ಟು ವಿಕೋಪಕ್ಕೆ ಹೋಗುವ ಮುನ್ನ ಅಲ್ಲಿಗೆ ಬಂದ ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಅಲ್ಲಿಂದ ಏಳಿಸಿ ಬೇರೆಡೆ ಕಳುಹಿಸಿದ್ದಾರೆ. 

Summer Tips: ಎಸಿ, ಕೂಲರ್ ಇಲ್ಲದೆ ಮನೆ ಥಂಡಾ ಥಂಡಾ ಕೂಲ್ ಆಗೋದು ಹೇಗೆ?

ಆದರೆ ನಂತರ ಆ ವ್ಯಕ್ತಿ ಆಸ್ಪತ್ರೆಗೆ ಸಂಬಂಧಿಸಿದವನಲ್ಲ, ಮಲಗುವ ಕಾರಣಕ್ಕೆ ಆತ ಇಲ್ಲಿಗೆ ಬರುತ್ತಿದ್ದ, ಇಂತಹ ಅನಧಿಕೃತ ಪ್ರವೇಶವನ್ನು ಆಸ್ಪತ್ರೆ ಒಪ್ಪುವುದಿಲ್ಲ ಎಂದು ನಂತರ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಆದರೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ(Social Media)  ವೈರಲ್ ಆಗುತ್ತಿದ್ದಂತೆ ಹೀಗೆ ಅಮಾನವೀಯವಾಗಿ ಥಳಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!