ಸಂಸದರಿಗೆ ವಿಶೇಷ ಚಿಕಿತ್ಸೆ, ಆಸ್ಪತ್ರೆಯಲ್ಲಿ ವಿಐಪಿ ಸಂಸ್ಕೃತಿ ವಿರುದ್ದ ಸಿಡಿದೆದ್ದ ವೈದ್ಯರ ಸಂಘ!

By Suvarna News  |  First Published Oct 20, 2022, 4:14 PM IST

ರಾಜಕಾರಣಿಗಳಿಗೆ SOP ಚಿಕಿತ್ಸೆಗೆ ಆದೇಶ ನೀಡಲಾಗಿದೆ. ಆದರೆ ಸಂಸದರು ಅನ್ನೋ ಕಾರಣಕ್ಕೆ ಅವರಿಗೆ ವಿಶೇಷ ಚಿಕಿತ್ಸೆಗೆ ನೀಡಿರುವ ಆದೇಶ ವಿಐಪಿ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇದರಿಂದ ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ಆಸ್ಪತ್ರೆಯಲ್ಲಿ ವಿಐಪಿ ಸಂಸ್ಕೃತಿ ನಡೆ ವಿರುದ್ಧ ವೈದ್ಯರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಪ್ರಧಾನಿ ಮೋದಿ ಉತ್ತರ ಕೇಳಿದ್ದಾರೆ.


ನವದೆಹಲಿ(ಅ.20): ಭಾರತದ ಬಹುತೇಕ ಎಲ್ಲಾ ಕ್ಷೇತ್ರದಲ್ಲಿದ್ದ ವಿಐಪಿ ಸಂಸ್ಕೃತಿಗೆ ಬ್ರೇಕ್ ಬೀಳುತ್ತಿದೆ.  ಖುದ್ದು ಪ್ರಧಾನಿ ನರೇಂದ್ರ ಭಾರತದ ವಿಐಪಿ ಸಂಸ್ಕೃತಿ ವಿರುದ್ಧ ಹಲವು ಬಾರಿ ಮಾತನಾಡಿದ್ದರು. ಇದೀಗ ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ವಿಐಪಿ ಸಂಸ್ಕೃತಿ ಜಾರಿಗೆ ತರಲಾಗಿದೆ. ಈ ಕುರಿತು ಏಮ್ಸ್ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಇದೀಗ ವಿವಾದಕ್ಕೆ ಕಾರಣವಾಗಿದೆ.  ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಸಂಸದರಿಗೆ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಚಿಕಿತ್ಸೆಗೆ ಏಮ್ಸ್ ನಿರ್ದೇಶಕರು ಆದೇಶಿದ್ದಾರೆ. ಈ ವಿಐಪಿ ಸಂಸ್ಕೃತಿ ವಿರುದ್ಧ ದೆಹಲಿ ವೈದ್ಯರ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಂಸದರು, ರಾಜಕಾರಣಿಗಳು ಚಿಕಿತ್ಸೆಗೆ ಬಂದಾಗ ಇತರ ಯಾವುದೇ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗಬಾರದು. ಪ್ರಧಾನಿ ನರೇಂದ್ರ ಮೋದಿ ವಿಐಪಿ ಸಂಸ್ಕೃತಿ ಅಂತ್ಯಗೊಳಿಸಲು ಕರೆ ನೀಡಿದ್ದಾರೆ. ಆದರೆ ಏಮ್ಸ್‌ನಲ್ಲಿ ಹೊಸದಾಗಿ ವಿಐಪಿ ಸಂಸ್ಕೃತಿಯನ್ನ ತರಲಾಗಿದೆ ಎಂದು ವೈದ್ಯರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಏಮ್ಸ್(AIIMS Delhi) ನಿರ್ದೇಶಕ ಡಾ. ಎಂ ಶ್ರೀನಿವಾಸ್ ಲೋಕಸಭಾ ಜಂಟಿ ಕಾರ್ಯದರ್ಶಿ ಕಂದಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ವಿಐಪಿ ಸಂಸ್ಕೃತಿ(VIP Culture) ಕುರಿತು ನಿರ್ದೇಶ ನೀಡಿರುವ ಮಾಹಿತಿಯನ್ನ ತಿಳಿಸಲಾಗಿದೆ ಒಪಿಡಿ(OPD) ವಿಭಾಗದಲ್ಲಿ ಸಂಸದರಿಗೆ ತುರ್ತು ಚಿಕಿತ್ಸೆ, ತುರ್ತು ತಪಾಸಣೆ, ಆಸ್ಪತ್ರೆ ದಾಖಲಿಸುವಿಕೆ ಸೇರಿದಂತೆ ಹಲವು ಸೇವೆಗಳನ್ನು  ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್( SOP) ಚಿಕಿತ್ಸೆ ನೀಡಲು ಆದೇಶಿಲಾಗಿದೆ ಎಂದು ಪತ್ರ ಬರೆದಿದ್ದಾರೆ. ಇದು ವಿವಾದಕ್ಕೆ ಕಾರಣಾಗಿದೆ.

Tap to resize

Latest Videos

 

We condemn VIP culture. No patient should suffer at the cost of another’s privileges. THAT being said, having a protocol to streamline things should not be viewed as derogatory, provided it doesn’t hamper patient care.

— FORDA INDIA (@FordaIndia)

 

ಸರ್ಕಾರಿ ಶಾಲಾ, ಕಾಲೇಜಿನಲ್ಲಿ ವಿದ್ಯಾಭ್ಯಾಸ; ಇಂದು ದೆಹಲಿಯ ಪ್ರತಿಷ್ಠಿತ AIIMS ನಿರ್ದೇಶಕರಾಗಿ ನೇಮಕ!

ಫೆಡರೇಷನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಶನ್ (FORDA) ಹಾಗೂ ಆಲ್ ಇಂಡಿಯಾ ಮೆಡಿಕಲ್ ಡಾಕ್ಟರ್ ಅಸೋಸಿಯೇಶನ್(FAIMA) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ವಿಪಿಐ ಸಂಸ್ಕೃತಿಯನ್ನು ವಿರೋಧಿಸುತ್ತೇವೆ. ಒಬ್ಬರಿಗೆ ಇನ್ಯಾವುದೋ ಸವಲುತ್ತು ಇದೆ ಅನ್ನೋ ಕಾರಣಕ್ಕೆ ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೆ ಸಮಸ್ಯೆ ಆಗಬಾರದು. ಹೀಗಾಗಿ ಸಂಸದರಿಗೆ SOP ವಿಧಾನದ ಚಿಕಿತ್ಸೆಗೆ ಅವಕಾಶ ನೀಡುವುದು ಸೂಕ್ತವಲ್ಲ ಎಂದು (FORDA) ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ವಿಐಪಿ ಸಂಸ್ಕೃತಿ ಇಲ್ಲ ಎಂದು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದರೆ ಏಮ್ಸ್ ನಿರ್ದೇಶಕರು ವಿಐಪಿ ಸಂಸ್ಕೃತಿಗೆ ನಾಂದಿ ಹಾಡಿದ್ದಾರೆ. ಆಸ್ಪತ್ರೆಯಲ್ಲೂ ವಿಐಪಿ ಸಂಸ್ಕೃತಿ ತರುವ ಪ್ರಯತ್ನವನ್ನು ಖಂಡಿಸುತ್ತೇವೆ ಎಂದು FAIMA ಹೇಳಿದೆ. ಇಷ್ಟೇ ಅಲ್ಲ ಹಲವು ವೈದ್ಯರು ಏಮ್ಸ್ ಆಸ್ಪತ್ರೆಯ ವಿಐಪಿ ಸಂಸ್ಕೃತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. 

AIIMS Hospital: ಕರ್ನಾಟಕಕ್ಕೆ ದಿಲ್ಲಿ ಮಾದರಿ ಏಮ್ಸ್‌ ಆಸ್ಪತ್ರೆ: ಕೇಂದ್ರ ಭರವಸೆ

ಹಾಲಿ ಸಂಸದರಿಗೆ ವಿಶೇಷ ಚಿಕಿತ್ಸೆಗೆ ವ್ಯವಸ್ಥೆ ಮಾಡುವ SOP ವಿಧಾನ ಅವಶ್ಯತೆ ಇಲ್ಲ ಅನ್ನೋ ಕೂಗೂ ಹೆಚ್ಚಾಗುತ್ತಿದೆ. ಹಲವರು ಇದರ ವಿರುದ್ಧ ಮಾತನಾಡಿದ್ದಾರೆ.  

click me!