ಚಳಿಗಾಲ ಹೋಗುತ್ತಿದ್ದಂತೆ ತಾಪಮಾನದಲ್ಲಿ ಭಾರಿ ಏರಿಕೆ

Published : Feb 19, 2023, 12:59 PM IST
ಚಳಿಗಾಲ ಹೋಗುತ್ತಿದ್ದಂತೆ ತಾಪಮಾನದಲ್ಲಿ ಭಾರಿ ಏರಿಕೆ

ಸಾರಾಂಶ

ಇಷ್ಟು ದಿನ ಚಳಿ ಚಳಿ ಎಂದು ಕಂಗೆಟ್ಟ ಜನ ಈಗ ಬಿಸಿಲಿನ ತಾಪ ತಡೆಯಲಾಗದೇ ಕಸಿವಿಸಿಗೊಂಡಿದ್ದಾರೆ.  ದೆಹಲಿ, ರಾಜಸ್ಥಾನ ಗೋವಾದಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೆಹಲಿ: ಶಿವರಾತ್ರಿ ಮುಗಿತಿದ್ದಂಗೆ ಚಳಿಯೆಲ್ಲಾ ಶಿವ ಶಿವ ಅಂತ ಹೋಗಿ ಬಿಡುತ್ತೆ ಅಂತ ಪೂರ್ವಜರು, ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಅದರಂತೆ ಶಿವರಾತ್ರಿ ಹೋಗುತ್ತಿದ್ದಂತೆ ತಾಪಮಾನದಲ್ಲಿ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು, ಇಷ್ಟು ದಿನ ಚಳಿ ಚಳಿ ಎಂದು ಕಂಗೆಟ್ಟ ಜನ ಈಗ ಬಿಸಿಲಿನ ತಾಪ ತಡೆಯಲಾಗದೇ ಕಸಿವಿಸಿಗೊಂಡಿದ್ದಾರೆ.  ದೆಹಲಿ, ರಾಜಸ್ಥಾನ ಗೋವಾದಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದೇಶದಾದ್ಯಂತ ಹಲವಾರು ರಾಜ್ಯಗಳಲ್ಲಿ ತಾಪಮಾನ ಭಾರಿ ಪ್ರಮಾಣದಲ್ಲಿ ಏರಿಕೆ ಆಗಲಿದೆ, ಜೊತೆಗೆ ರಾತ್ರಿಯ ತಾಪಮಾನವೂ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರ ಸೇರಿದಂತೆ ವಾಯುವ್ಯ ಮತ್ತು ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಪ್ರಕಾರ ದೆಹಲಿಯಲ್ಲಿ ಶನಿವಾರ ಕನಿಷ್ಠ ತಾಪಮಾನ 11.7 °C ದಾಖಲಾಗಿತ್ತು ಹಾಗೆಯೇ ಗರಿಷ್ಠ ತಾಪಮಾನವು 31 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ.

ಹಾಗೆಯೇ ಗುಜರಾತ್‌ನ (Gujarat) ಕಚ್ (Kutch) ಜಿಲ್ಲೆಯ ಭುಜ್ ನಗರದಲ್ಲಿ 71 ವರ್ಷಗಳಲ್ಲಿ ಈ ಅವಧಿಯಲ್ಲಿ ಅತ್ಯಂತ ಗರಿಷ್ಟ ತಾಪಮಾನ  40.3 ಸೆಲ್ಸಿಯಸ್‌  ದಾಖಲಾಗಿದೆ. ಹಾಗೆಯೇ ರಾಜಸ್ಥಾನದಲ್ಲಿಯೂ (Rajasthan) ಕೂಡ ಹವಾಮಾನದಲ್ಲಿ ಬದಲಾವಣೆ ಆಗಿದೆ, ತಾಪಮಾನವು ಈ ಅವಧಿಯಲ್ಲಿ ಸಾಮಾನ್ಯಕ್ಕಿಂತ 10 ಸೆಲ್ಸಿಯಸ್‌ ಹೆಚ್ಚಾಗಿದೆ. ಇಲ್ಲಿನ ಬಾರ್ಮರ್‌ನಲ್ಲಿ (Barmer) 37.6 ಅಂದರೆ ಅತ್ಯಂತ ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆಯ ವಕ್ತಾರರು ಹೇಳಿದ್ದಾರೆ. 

ಉತ್ತರ ಭಾರತಕ್ಕೆ ಶೀತ ಮಾರುತ ಹೊಡೆತ: ಜಮ್ಮು ರಾಜಸ್ಥಾನದಲ್ಲಿ ಮೈನಸ್‌ ತಾಪಮಾನ

ಹವಾಮಾನ ಇಲಾಖೆಯ ಪ್ರಕಾರ, ಉತ್ತರ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಗುಜರಾತ್ ಪ್ರದೇಶದ ಮೇಲೆ ಸೈಕ್ಲೋನಿಕ್  ವಿರೋಧಿ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ ಕಾರಣ ರಾಜ್ಯದಲ್ಲಿ ತಾಪಮಾನ ಹೆಚ್ಚಾಗಿದೆ. ಈ ನಡುವೆ ಪಂಜಾಬ್ (Haryana) , ಹರಿಯಾಣದ ಹೆಚ್ಚಿನ ಭಾಗಗಳಲ್ಲಿ ಕನಿಷ್ಠ ತಾಪಮಾನವು (Minimum temperature )ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ.

ಶಿಮ್ಲಾದಲ್ಲಿ(Shimla) ಶುಕ್ರವಾರದಂದು ಫೆಬ್ರವರಿಯ ಅತ್ಯಂತ ಬೆಚ್ಚಗಿನ ರಾತ್ರಿ ಆಗಿತ್ತು. ಕನಿಷ್ಠ ತಾಪಮಾನ 14.4 ° C ಇದ್ದು, ಇದು ಸಾಮಾನ್ಯಕ್ಕಿಂತ ಹನ್ನೊಂದು ಡಿಗ್ರಿ ಹೆಚ್ಚು ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಿಮಾಚಲದ (Himachal) ನೆರೆಯ ರಾಜ್ಯಗಳ ಪ್ರಮುಖ ನಗರಗಳಲ್ಲಿ ಕನಿಷ್ಠ ತಾಪಮಾನವು ಶಿಮ್ಲಾಕ್ಕಿಂತ ಕಡಿಮೆಯಾಗಿದೆ. ಗೋವಾ (Goa) ರಾಜಧಾನಿ ಪಣಜಿಯಲ್ಲಿ(Panaji) ಕಳೆದ ಗುರುವಾರ ಹತ್ತು ವರ್ಷಗಳಲ್ಲಿಯೇ ಎರಡನೇ ಅತಿ  38.2 ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.  ಇದಕ್ಕೂ ಮೊದಲು ಮಾರ್ಚ್ 6, 2013 ರಂದು 38.7 °C ತಾಪಮಾನ ಇಲ್ಲಿ ದಾಖಲಾಗಿತ್ತು. 

ವಿಶ್ವದ ಅತಿ ಚಳಿಯ ನಗರದಲ್ಲಿ -50 ಡಿಗ್ರಿ ತಾಪಮಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ