ದಿಢೀರ್ ಟ್ರಾಫಿಕ್ ಜಾಮ್: 2 ಕಿ ಮೀ ಓಡಿ ಪರೀಕ್ಷಾ ಕೇಂದ್ರ ಸೇರಿದ ವಿದ್ಯಾರ್ಥಿಗಳು

By Anusha KbFirst Published Feb 19, 2023, 10:58 AM IST
Highlights

ರಸ್ತೆಯಲ್ಲಿ ದಿಢೀರ್ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು ತಾವಿದ್ದ ವಾಹನದಿಂದ ಇಳಿದು ಬರೋಬ್ಬರಿ 2 ಕಿಲೋ ಮೀಟರ್ ಓಡುವ ಮೂಲಕ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿ ಸೇರಿದ ಘಟನೆ ಬಿಹಾರದ ಕೈಮುರ್‌ನಲ್ಲಿ ನಡೆದಿದೆ. 

ಪಾಟ್ನಾ: ರಸ್ತೆಯಲ್ಲಿ ದಿಢೀರ್ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಪರೀಕ್ಷೆ ಬರೆಯಲು ಹೊರಟ ವಿದ್ಯಾರ್ಥಿಗಳು ತಾವಿದ್ದ ವಾಹನದಿಂದ ಇಳಿದು ಬರೋಬ್ಬರಿ 2 ಕಿಲೋ ಮೀಟರ್ ಓಡುವ ಮೂಲಕ ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೊಠಡಿ ಸೇರಿದ ಘಟನೆ ಬಿಹಾರದ ಕೈಮುರ್‌ನಲ್ಲಿ ನಡೆದಿದ್ದು, ವಿದ್ಯಾರ್ಥಿನಿಯರು ರಸ್ತೆಯಲ್ಲಿ ಓಡಿಕೊಂಡು ಹೋಗುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ. 

ಟ್ರಾಫಿಕ್ ಅಂದ್ರೆ ಪಟ್ ಅಂತ ನೆನಪಾಗೋದು ನಮ್ಮ ಬೆಂಗಳೂರು. ಆದರೆ ಈ ಘಟನೆ ನಡೆದಿರುವುದು ಬಿಹಾರದ ಕೈಮುರ್‌ನಲ್ಲಿ. ಇಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರದ ಆರಂಭದಲ್ಲಿ ಪರೀಕ್ಷೆ ಆರಂಭವಾಗಿದ್ದು, ಫೆ.17 ರಂದು ಈ ಘಟನೆ ನಡೆದಿದೆ. ಪರೀಕ್ಷೆ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಪರೀಕ್ಷಾ ಕೇಂದ್ರಕ್ಕೆ (Exam center) ಹೊರಟಿದ್ದರು. ಆದರೆ ಟ್ರಾಫಿಕ್‌ನಿಂದಾಗಿ ಅವರ ವಾಹನ ರಸ್ತೆ ಮಧ್ಯೆಯೇ ಸ್ಥಗಿತಗೊಂಡಿದ್ದರಿಂದ ಪೋಷಕರು ಮಕ್ಕಳಿಗಿಂತ ಹೆಚ್ಚು ಆತಂಕಗೊಂಡಿದ್ದರು. ವಾಹನ ದಟ್ಟಣೆ ಸರಿ ಹೋಗಬಹುದು ಎಂದು ಕೆಲ ಕಾಲ ಕಾದ ಮಕ್ಕಳು ಅದು ಸರಿ ಹೋಗದೇ ಇದ್ದಾಗ ವಾಹನದಿಂದ ಇಳಿದು ರಾಷ್ಟ್ರೀಯ ಹೆದ್ದಾರಿ 2 ರ ಬದಿಯಲ್ಲಿ ಓಡಲು ಆರಂಭಿಸಿದರು. 

Latest Videos

ಪೀಕ್ ಅವರ್‌ನಲ್ಲಿ ಬೆಂಗಳೂರು ಟ್ರಾಫಿಕ್ ಜಾಮ್ ತಪ್ಪಿಸಲು ಪೊಲೀಸರ ಮಾಸ್ಟರ್‌ ಪ್ಲ್ಯಾನ್‌..!

ಕೈಗಳಲ್ಲಿ ಹಾಲ್ ಟಿಕೆಟ್ (Admit card) ಹಾಗೂ ಪರೀಕ್ಷಾ ಪರಿಕರಗಳನ್ನು ಹಿಡಿದು ಮಕ್ಕಳು ಓಡುತ್ತಿರುವ ದೃಸ್ಯದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಷಕರು (Parents) ಮಕ್ಕಳನ್ನು ಬೈಕ್ ಕಾರು ಮತ್ತೆ ಕೆಲವರು ಆಟೋಗಳಲ್ಲಿ ಜೊತೆಗೆ ಕರೆದುಕೊಂಡು ಬಂದಿದ್ದು, ಟ್ರಾಫಿಕ್ ಜಾಮ್‌ನಿಂದಾಗಿ (Traffic Jam) ಸಮಯ ಒಂದೆಡೆ ವೇಗವಾಗಿ ಸಾಗುತ್ತಿದ್ದರೆ ಆತಂಕಕ್ಕೊಳಗಾದ ಮಕ್ಕಳು ರಸ್ತೆಯಲ್ಲೇ ವಾಹನದಿಂದ ಇಳಿದು 2 ಕಿಲೋ ಮೀಟರ್ ಓಡಿ ಪರೀಕ್ಷಾ ಕೇಂದ್ರ ತಲುಪಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೈಮೂರ್ (Kaimur) ಜಿಲ್ಲಾ ಶಿಕ್ಷಣಾಧಿಕಾರಿ ಸುಮನ್ ಶರ್ಮಾ (Suman Sharma), ಈ ವಿಚಾರವನ್ನು ಕೇಳಿ ನಮಗೆ ಶಾಕ್ ಆಯ್ತು. ಅವರು ಟ್ರಾಫಿಕ್ ಜಾಮ್‌ ಬಗ್ಗೆ ಇದಕ್ಕೂ ಮೊದಲು ಹಲವು ಬಾರಿ ದೂರಿದ್ದರು. ಈ ಬಗ್ಗೆ ನಾವು ಸ್ಥಳೀಯಾಡಳಿತಕ್ಕೆ (Local Administration) ತಿಳಿಸಿದ್ದೆವು. ಆದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.  ಪ್ರತಿ ಸಭೆಯಲ್ಲೂ ಈ ಸಮಸ್ಯೆ ಬಗ್ಗೆ ನಾವು ವಿಭಾಗದ ಅಧಿಕಾರಿಗಳ ಗಮನ ಸೆಳೆದಿದ್ದೇವೆ.  ಆದರೆ ಅವರು ಟ್ರಾಫಿಕ್ ಜಾಮ್‌ಗೆ ರಸ್ತೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯದ ಕಾರಣ ನೀಡಿದ್ದಾರೆ ಎಂದು ಸುಮನ್ ಹೇಳಿದ್ದಾರೆ. ಬಿಹಾರ ಶಾಲಾ ಶಿಕ್ಷಣ ಮಂಡಳಿ ನಡೆಸುತ್ತಿರುವ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. 

Tumakuru Rain: ಮಳೆ ಅವಾಂತರಕ್ಕೆ 4ಗಂಟೆಗಳ ಕಾಲ 15 ಕಿಲೋ ಮೀಟರ್ ಟ್ರಾಫಿಕ್ ಜಾಮ್

ಇನ್ಮುಂದೆ ಟ್ರಾಫಿಕ್  ಜಾಮ್ ನಿಂದ ಮುಕ್ತವಾಗಲಿದೆ ಮುಳ್ಳಯ್ಯನಗಿರಿ!

ಕರ್ನಾಟಕ(Karnataka)ದ ಅತ್ಯಂತ ಎತ್ತರದ ಪ್ರದೇಶ, ಸೌಂದರ್ಯದ ಖಣಿ ಕಾಫಿನಾಡ(Coffeenadu) ಮುಳ್ಳಯ್ಯನಗಿರಿ(mullayyanagiri), ದತ್ತಪೀಠ(Dattapeetha), ಸೀತಾಳಯ್ಯನಗಿರಿ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ಮುಂದೆ ಟ್ರಾಫಿಕ್ ಜಾಮ್((Traffic jam) ಪ್ರಾಬ್ಲಂ ಇರೋದಿಲ್ಲ. ಹಾವು-ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ಪ್ರವಾಸಿಗರು(Tourists) ಬೇಕಾಬಿಟ್ಟಿ ಗಾಡಿ ಹೊಡೀತಿದ್ರು. ಎಲ್ಲೆಂದರಲ್ಲಿ ಪಾರ್ಕ್ ಮಾಡಿ ಟ್ರಾಫಿಕ್ ಜಾಮ್ ಕಿರಿ-ಕಿರಿ ಮಾಡ್ತಿದ್ರು. ಗಾಡಿ ಕೆಳಗೆ ಇಳಿದ್ರೆ ಹಾಳಾಗುತ್ತೆ ಎಂಬಂತೆ ಕಿರಿದಾದ ರಸ್ತೆಯಲ್ಲಿ ಅರ್ಧ ರಸ್ತೆಗೆ ಪಾರ್ಕ್ ಮಾಡಿ ಹೋಗೋ ಕೆಲ ಪ್ರವಾಸಿಗರು ಕೂಡ ಇದ್ರು. ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಆದ್ರೆ ಐದತ್ತು ನಿಮಿಷ ಅಲ್ಲ. ಗಂಟೆಗಟ್ಟಲೇ ಆಗ್ತಿತ್ತು. ಪಾರ್ಕ್ ಮಾಡಿ ಹೋದ ಪುಣ್ಯಾತ್ಮ ಬಂದು ತೆಗೆಯೋವರೆಗೂ ಉದ್ದಕ್ಕೂ ನಿಲ್ಲಬೇಕಿತ್ತು.

ಈ ಗೋಳು ತಪ್ಪಿಸಲು ಇದೀಗ ಜಿಲ್ಲಾಡಳಿತವೇ ಗಿರಿಭಾಗದ ಪ್ರವಾಸಿತಾಣಗಳಿಗೆ ಪರ್ಮಿಟ್ ವಾಹನಗಳನ್ನ ಬಿಡೋದಕ್ಕೆ ತೀರ್ಮಾನಿಸಿದೆ. ನೀವು ಬೆಂಗಳೂರು-ಮೈಸೂರು(Bengaluru-mysuru) ಸೇರಿದಂತೆ ಎಲ್ಲಿಂದಲೇ ನಿಮ್ಮ ಗಾಡಿಯಲ್ಲಿ ಬಂದ್ರು ಚಿಕ್ಕಮಗಳೂರಿ(Chikkamagaluru)ನಿಂದ ಗಿರಿಭಾಗಕ್ಕೆ ಜಿಲ್ಲಾಡಳಿತದ ಗಾಡಿಗಳಲ್ಲೇ ಹೋಗಬೇಕು. ಜೊತೆಗೆ, ಎಲ್ಲೆಂದರಲ್ಲಿ ಗಾಡಿ ಪಾರ್ಕ್ ಮಾಡ್ಕೊಂಡು ರೋಡ್ ಮಧ್ಯೆ ಮದ್ಯ ಸೇವಿಸ್ಕೊಂಡು ಡ್ಯಾನ್ಸ್ ಮಾಡೋದು ತಪ್ಪುತ್ತೆ. ನೀಟಾಗಿ ಹೋಗಿ ಪ್ರಕೃತಿ ಸೌಂದರ್ಯವನ್ನ ಸವಿದು ನೀಟಾಗಿ ವಾಪಸ್ ಬರ್ಬೋದು. 

ನೀವು ನಿಮ್ದೇ ಗಾಡಿಗಳಲ್ಲಿ ಬಂದ್ರು ಕೂಡ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಐದು ಎಕರೆ ಜಾಗದಲ್ಲಿ ಜಿಲ್ಲಾಡಳಿತವೇ ಪಾರ್ಕಿಂಗ್ ವ್ಯವಸ್ಥೆ ಮಾಡಲಿದೆ. ಅಲ್ಲಿ ಎಲ್ಲಾ ಸೌಲಭ್ಯವೂ ಇರಲಿದೆ. ನೀವು ನಿಮ್ಮ ಗಾಡಿಗಳನ್ನ ಅಲ್ಲೇ ಬಿಟ್ಟು ಜಿಲ್ಲಾಡಳಿತದ ಪರ್ಮಿಟ್ ಗಾಡಿಗಳಲ್ಲಿ ಹೋಗಬೇಕು. ಸ್ವಂತ ವಾಹನಗಳಲ್ಲಿ ಹೋಗೋ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕವರ್, ಬಾಟಲಿಗಳನ್ನ ಎಸೆಯುತ್ತಿದ್ದರು. ಆದ್ರೆ, ಇನ್ಮುಂದೆ ಅವೆಲ್ಲಕ್ಕೂ ಬ್ರೇಕ್ ಬೀಳಲಿದೆ. ಬರೀಗೈಲಿ ಹೋಗ್ಬೇಕು. ಪ್ರಕೃತಿ ಸೌಂದರ್ಯವನ್ನ ನೋಡ್ಕಂಡ್ ವಾಪಸ್ ಬರ್ಬೇಕು ಅಷ್ಟೆ. 

click me!