ಮೋದಿ ನನ್ನ ಪ್ರಧಾನಿ: ಪಾಕ್ ಸಚಿವನಿಗೆ ಕೇಜ್ರಿ ತಪರಾಕಿ!

By Suvarna News  |  First Published Jan 31, 2020, 4:26 PM IST

ಪ್ರಧಾನಿ ಮೋದಿದ ನನ್ನ ಪ್ರಧಾನಿ ಎಂದ ಕೇಜ್ರಿವಾಲ್| ದೆಹಲಿ ಚುನಾವಣೆಯಲ್ಲಿ ಮೋದಿ ಸೋಲಿಸುವಂತೆ ಕರೆ ನೀಡಿದ್ದ ಪಾಕ್ ಸಚಿವ| ಪಾಕ್ ಸಚಿವ ಚೌಧರಿ ಫವಾದ್ ಹುಸೇನ್ ಟ್ವೀಟ್’ಗೆ ಕೇಜ್ರಿವಾಲ್ ತಿರುಗೇಟು| ದೆಹಲಿ ಚುನಾವಣೆ ದೇಶದ ಆಂತರಿಕ ರಾಜಕೀಯ ವಿಚಾರ ಎಂದ ಕೇಜ್ರಿ| ಕೇಜ್ರಿವಾಲ್ ಟ್ವೀಟ್’ಗೆ ಎಲ್ಲರಿಂದ ಮೆಚ್ಚುಗೆ|


ನವದೆಹಲಿ(ಜ.30): ದೆಹಲಿ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದ್ದ ಪಾಕಿಸ್ತಾನ ಸಚಿವ ಚೌಧರಿ ಫವಾದ್ ಹುಸೇನ್ ಅವರಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.

ದೆಹಲಿ ಚುನಾವಣೆ ದೇಶದ ಆಂತರಿಕ ರಾಜಕೀಯ ವಿಚಾರವಾಗಿದ್ದು, ಮೋದಿ ನನಗೂ ಸೇರಿದಂತೆ ಇಡೀ ದೇಶಕ್ಕೆ ಪ್ರಧಾನಿ ಎಂದು ಅರವಿಂದ್ ಕೇಜ್ರಿವಾಲ್ ಗುಡುಗಿದ್ದಾರೆ.

Tap to resize

Latest Videos

undefined

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸಿಎಂ, ಪಾಕ್ ಸಚಿವ ಚೌಧರಿ ಫವಾದ್ ಹುಸೇನ್ ತಮ್ಮ ದೇಶದ ಬಗ್ಗೆ ತಲೆಕೆಡಿಸಿಕೊಳ್ಳಲಿ, ದೆಹಲಿ ಚುನಾವಣೆ ನಮ್ಮ ಆಂತರಿಕ ರಾಜಕೀಯ  ವಿಚಾರ ಎಂದು ಹೇಳಿದ್ದಾರೆ.

नरेंद्र मोदी जी भारत के प्रधानमंत्री है। मेरे भी प्रधानमंत्री है। दिल्ली का चुनाव भारत का आंतरिक मसला है और हमें आतंकवाद के सबसे बड़े प्रायोजकों का हस्तक्षेप बर्दाश्त नहीं। पाकिस्तान जितनी कोशिश कर ले, इस देश की एकता पर प्रहार नहीं कर सकता। https://t.co/E2Rl65nWSK

— Arvind Kejriwal (@ArvindKejriwal)

ಮೋದಿ ಭಾರತದ ಪ್ರಧಾನಿಯಾಗಿದ್ದು ಅವರು ನನಗೂ ಪ್ರಧಾನಿ, ನಮ್ಮ  ಪ್ರಧಾನಿ ಕುರಿತು ಹೊರಗಿನವರು ಕೀಳಾಗಿ ಮಾತನಾಡಿದರೆ ಅದನ್ನು ತಾವು ಸಹಿಸುವುದಿಲ್ಲ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದ್ದಾರೆ.

ದೆಹಲಿ ಚುನಾವಣಾ ಪೂರ್ವ ಸಮೀಕ್ಷೆ: ಕೈ, ಕಮಲಕ್ಕೆ ನಿರಾಸೆ, ಮತ್ತೆ ಆಪ್ ಕಮಾಲ್!

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪದ ನಡುವೆಯೂ ಕೇಜ್ರಿವಾಲ್ ಪಾಕ್ ಸಚಿವನಿಗೆ ತಪರಾಕಿ ನೀಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

click me!