ಚಿನ್ನದ ಸರ ಹೊತ್ತು ಸಾಗುತ್ತಿರುವ ಪುಟ್ಟ ಸ್ಮಗ್ಲರ್‌ಗಳು: ಗೊಂದಲದಲ್ಲಿ ಪೊಲೀಸರು

By Anusha Kb  |  First Published Jun 30, 2022, 11:31 AM IST

ಇರುವೆಗಳು ದೊಡ್ಡದಾದ ಚಿನ್ನದ ಸರವನ್ನು ಹೊತ್ತು ಸಾಗಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಹಳೆಯ ವಿಡಿಯೋ ಇದಾಗಿದ್ದು, ಈಗ ಮತ್ತೆ ವೈರಲ್ ಆಗಿದೆ.


ಇರುವೆಗಳು ದೊಡ್ಡದಾದ ಚಿನ್ನದ ಸರವನ್ನು ಹೊತ್ತು ಸಾಗಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಹಳೆಯ ವಿಡಿಯೋ ಇದಾಗಿದ್ದು, ಈಗ ಮತ್ತೆ ವೈರಲ್ ಆಗಿದೆ. ಇರುವೆಗಳು ಸಾಮಾನ್ಯ ಕೀಟಗಳು. ಆದರೆ ಅವುಗಳು ತಮ್ಮ ಒಗಟ್ಟು ಹಾಗೂ ಒಗ್ಗಟ್ಟಿನ ಬೃಹತ್‌ ಶಕ್ತಿಗೆ ಸಾಕ್ಷಿಯಾಗಿವೆ. ಸದಾ ತಾನು ತನ್ನದು ಎಂದು ಹೊಡೆದಾಡುವ ಮನುಷ್ಯನಿಗೆ ಇರುವೆಗಳು ಜೊತೆಯಾಗಿದ್ದರಷ್ಟೇ ಲಾಭ ಹಾಗೂ ಶಕ್ತಿ ಎಂಬ ಒಗಟ್ಟಿನ ಪಾಠವನ್ನು ಕಲಿಸುತ್ತವೆ. ಇಂತಹ ಪುಟ್ಟ ಇರುವೆಗಳು ದೊಡ್ಡ ಗಾತ್ರದ ಚಿನ್ನದ ಸರವೊಂದನ್ನು ಸಾಗಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕ್ಯಾಮೆರಾದಲ್ಲಿ ಸೆರೆಹಿಡಿದ ಈ ಅದ್ಭುತ ಕ್ಷಣವು ಪ್ರಕೃತಿಯ ಸುಂದರ ವೈವಿಧ್ಯತೆಗೆ ಸಾಕ್ಷಿಯಾಗಿದೆ. 

ಇರುವೆಗಳು ತಮ್ಮ ಗಾತ್ರಕ್ಕಿಂತ ಭಾರವಾದ ವಸ್ತುಗಳನ್ನು ಸಾಗಿಸುವುದು ಹೊಸದೇನಲ್ಲ. ಹಾಗೆಯೇ ಇಲ್ಲಿ ಇರುವೆಗಳು ದೊಡ್ಡದಾದ ಚಿನ್ನದ ಸರವೊಂದನ್ನು ಸಾಗಣೆ ಮಾಡುತ್ತಿವೆ. ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ್ ನಂದಾ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ವಿಡಿಯೋದಲ್ಲಿ ಕಲ್ಲಿನ ಬಂಡೆಯೊಂದರ ಮೇಲೆ ಇರುವೆಗಳ ಗುಂಪು ಚಿನ್ನದ ಸರವನ್ನು ಎಳೆದುಕೊಂಡು ಸಾಗುತ್ತಿರುವುದು ಕಾಣುತ್ತಿದೆ. 

Tap to resize

Latest Videos

ಪುಟ್ಟ ಚಿನ್ನದ ಕಳ್ಳಸಾಗಣೆದಾರರು. ಇವರನ್ನು ಐಪಿಸಿಯ ಯಾವ ಸೆಕ್ಷನ್ ಅಡಿಯಲ್ಲಿ ಬಂಧಿಸಬಹುದು ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದಾಗಿನಿಂದ 143,000 ಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇದಕ್ಕೊಬ್ಬರು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಮೊದಲು ಇರುವೆಗಳ ಲಿಂಗ ಪತ್ತೆ ಮಾಡಬೇಕು ನಂತರ ಒಂದು ವೇಳೆ ಅವು ಹೆಣ್ಣಾಗಿದ್ದರೆ ಅದನ್ನು ಕಾಪಾಡಿಕೊಳ್ಳುವುದು ಮತ್ತು ಸ್ಥಾನಮಾನದೊಂದಿಗೆ ಬದುಕುವುದು ಅವರ ಹಕ್ಕು. ಪುರುಷರಾಗಿದ್ದರೆ ಪ್ರಕರಣವನ್ನು ಬುಕ್ ಮಾಡುವ ಅಗತ್ಯವಿಲ್ಲ. ಕೆಲವು ರಾಜ್ಯ ಪೊಲೀಸರನ್ನು ಸಂಪರ್ಕಿಸಿ ಮತ್ತು ಅವರು ಸ್ಥಳದಲ್ಲೇ ಪ್ರಕರಣ ಎದುರಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

ಟನ್‌ಗಟ್ಟಲೇ ಚಿನ್ನದ ನಿಕ್ಷೇಪದ ಸುಳಿವು ನೀಡಿದ ಇರುವೆಗಳ ಸೈನ್ಯ


ಮತ್ತೊಬ್ಬ ಬಳಕೆದಾರನು ತಮಾಷೆಯಾಗಿ ಚಿನ್ನದ ಸರದ ಬದಲು ಅವರಿಗೆ ಸ್ವಲ್ಪ ಸಕ್ಕರೆಯನ್ನು ನೀಡುವ ಮೂಲಕ ಚಿನ್ನವನ್ನು ಹಿಂಪಡೆಯಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಅವರು ಅದನ್ನು ತಮ್ಮ ಇರುವೆ ರಾಣಿಗಾಗಿ ತೆಗೆದುಕೊಂಡು ಹೋಗುತ್ತಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಏನೂ ಅಸಾಧ್ಯವಲ್ಲ ನೋಡಿ ಸಾಮೂಹಿಕ ಪ್ರಯತ್ನದಿಂದ ನಾವು ಏನು ಬೇಕಾದರೂ ಮಾಡಬಹುದು ಟೀಮ್ ಸ್ಪಿರಿಟ್ ಮತ್ತು ಟೀಮ್ ವರ್ಕ್ ನಮಗೆ ಏನನ್ನಾದರೂ ಸಾಧಿಸಲು ಸಹಾಯ ಮಾಡುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

Gold Price: ಕುಸಿದ ಚಿನ್ನ,ಬೆಳ್ಳಿ ಬೆಲೆ; ಖರೀದಿಗೆ ಇದು ಸೂಕ್ತ ಸಮಯನಾ? ತಜ್ಞರು ಏನ್ ಹೇಳ್ತಾರೆ?

ಕೆಲ ದಿನಗಳ ಹಿಂದೆ ಮಾವೋವಾದಿಗಳ ಪ್ರಾಬಲ್ಯವಿರುವ ಬಿಹಾರದ ಜಮುಯಿಯ ಕೆಂಪು ಮಣ್ಣಿನಡಿಯಲ್ಲಿ ದೊಡ್ಡ ಚಿನ್ನದ ನಿಕ್ಷೇಪ ಅಡಗಿದೆ ಎಂಬುದು ಪುಟ್ಟ ಇರುವೆಗಳಿಂದ ತಿಳಿದು ಬಂದಿತ್ತು. ಐತಿಹ್ಯಗಳ ಪ್ರಕಾರ ನಲವತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಬೃಹತ್ ಆಲದ ಮರವಿತ್ತು. ಸೂರ್ಯನ ಶಾಖ ಮತ್ತು ಶಾಖದಿಂದ ತಪ್ಪಿಸಿಕೊಳ್ಳಲು ಇಲ್ಲಿ ಇರುವೆಗಳು ಆಲದ ಮರದ ಕೆಳಗೆ ಗೂಡು ಕಟ್ಟಲು ಪ್ರಾರಂಭಿಸುತ್ತವೆ. ಗೂಡು ಕಟ್ಟುವ ಸಲುವಾಗಿ ಇರುವೆಗಳು ಭೂಮಿಯ ಕೆಳಭಾಗದಿಂದ ಮಣ್ಣನ್ನು ಹೊರ ತರಲು ಪ್ರಾರಂಭಿಸಿದವು. 

ಸ್ಥಳೀಯರು ಈ ಇರುವೆಗಳು ಭೂಮಿಯ ಆಳದಿಂದ ತಂದ ಮಣ್ಣಿನಲ್ಲಿ ಹಳದಿ ಬಣ್ಣದ ಮಿಶ್ರಣವಿರುವುದನ್ನು ಪತ್ತೆ ಮಾಡಿದರು. ಅಲ್ಲದೇ ಈ ಸುದ್ದಿ ಶರವೇಗದಲ್ಲಿ ಆ ಪ್ರದೇಶದ ಸುತ್ತಮುತ್ತಲ ಹಳ್ಳಿಗಳಲ್ಲಿ ಹರಡಿತು. ಅಲ್ಲದೇ ಚಿನ್ನದ ನಿಕ್ಷೇಪದ ಹುಡುಕಾಟಕ್ಕೆ ಕಾರಣವಾಯಿತು. ಬಿಹಾರದ ಜಮುಯಿ ಜಿಲ್ಲೆಯ ಕರ್ಮಾತಿಯಾ, ಝಾಝಾ ಮತ್ತು ಸೋನೋ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಕಳೆದ ವರ್ಷ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಬಿಹಾರದ ಗಣಿಗಳಲ್ಲಿ ದೇಶದ ಒಟ್ಟು ಚಿನ್ನದ ಶೇಕಡಾ  44ರಷ್ಟು ಸಿಗುತ್ತದೆ ಎಂದು ಲೋಕಸಭೆಗೆ ತಿಳಿಸಿದ್ದಾರೆ. ಈ ಚಿನ್ನದ ಒಟ್ಟು ಪ್ರಮಾಣ ಸುಮಾರು 230 ಮಿಲಿಯನ್ ಟನ್ ಆಗಿರಬಹುದು ಎಂದು ತಿಳಿದು ಬಂದಿದೆ.

click me!