ಪಾಕ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಖಭಂಗ: ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ?

Published : Mar 07, 2025, 10:04 AM ISTUpdated : Mar 07, 2025, 10:07 AM IST
ಪಾಕ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಖಭಂಗ: ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ ನಿರ್ಬಂಧ?

ಸಾರಾಂಶ

ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಅಮೆರಿಕ ಪ್ರವೇಶ ನಿರ್ಬಂಧ ಹೇರುವ ಸಾಧ್ಯತೆ ಇದೆ. ಅಫ್ಘಾನಿಸ್ತಾನ ಸೇರಿ ಕೆಲ ದೇಶಗಳ ಪ್ರಜೆಗಳಿಗೆ ನಿರ್ಬಂಧ ವಿಧಿಸುವ ಪಟ್ಟಿಯಲ್ಲಿ ಪಾಕಿಸ್ತಾನವೂ ಸೇರುವ ನಿರೀಕ್ಷೆ ಇದೆ.

ವಾಷಿಂಗ್ಟನ್‌: ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮುಖಭಂಗ ಅನುಭವಿಸುವ ನಿರೀಕ್ಷೆ ಇದೆ. ಮುಂದಿನ ವಾರ ಅಮೆರಿಕವು ಅಫ್ಘಾನಿಸ್ತಾನ ಸೇರಿ ಕೆಲ ದೇಶಗಳ ಪ್ರಜೆಗಳಿಗೆ ತನ್ನ ದೇಶಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಿದ್ದು, ಆ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರೂ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಮೆರಿಕ ಪ್ರವೇಶಿಸುವ ವ್ಯಕ್ತಿಗಳ ತಪಾಸಣೆ ತೀವ್ರಗೊಳಿಸುವಂತೆ ಹಾಗೂ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವ ವ್ಯಕ್ತಿಗಳನ್ನು ಗುರುತಿಸುವಂತೆ ಜ.20ರಂದು ಟ್ರಂಪ್‌ ಸರ್ಕಾರ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿತ್ತು. ಇದರ ಬೆನ್ನಲ್ಲೇ ಇಂಥ ನಿರ್ಬಂಧ ಹೊರಬೀಳುವ ನಿರೀಕ್ಷೆ ಇದೆ. ಕೆಲ ದೇಶಗಳ ಪ್ರಜೆಗಳ ಪೂರ್ವಾಪರ ಮಾಹಿತಿ ಸಂಗ್ರಹ ಕಷ್ಟಕರವಾಗಿರುವ ಹಿನ್ನೆಲೆಯಲ್ಲಿ ಆ ದೇಶದಿಂದ ಆಗಮಿಸುವವರ ಮೇಲೆ ಪೂರ್ಣ ಅಥವಾ ಭಾಗಶಃ ನಿರ್ಬಂಧ ಹೇರುವ ಸಾಧ್ಯತೆ ಇದೆ. ಇಂಥ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಹೆಸರೂ ಇದ್ದರೂ ಅಚ್ಚರಿ ಇಲ್ಲ ಎಂದು ಕೆಲ ಮೂಲಗಳು ತಿಳಿಸಿವೆ.

ರಂಜಾನ್‌ನ ತಿಂಗಳಲ್ಲೂ ಪಾಕಿಸ್ತಾನದ ಸ್ಥಿತಿ ಶೋಚನೀಯ, 1ಕೆಜಿ ಚಿಕನ್ 600ರೂ!

2021ರಲ್ಲಿ ಸಂಭವಿಸಿದ ಕಾಬೂಲ್‌ನ ಅಬ್ಬೇಗೇಟ್‌ ಬಾಂಬ್‌ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಉಗ್ರ ಮೊಹಮ್ಮದ್‌ ಶರೀಫುಲ್ಲಾನನ್ನು ಅಮೆರಿಕಕ್ಕೆ ಇತ್ತೀಚೆಗಷ್ಟೇ ಪಾಕಿಸ್ತಾನ ಹಸ್ತಾಂತರಿಸಿತ್ತು. ಈ ಸ್ಫೋಟದಲ್ಲಿ ಅಮೆರಿಕದ 13 ಯೋಧರು ಮತ್ತು 170 ಅಫ್ಘಾನಿಸ್ತಾನಿಯರು ಮೃತಪಟ್ಟಿದ್ದರು. ಆ ದಾಳಿಕೋರನನ್ನು ಬಂಧಿಸಲು ನೆರವು ನೀಡಿದ ಪಾಕಿಸ್ತಾನ ಸರ್ಕಾರಕ್ಕೆ ಬಹಿರಂಗವಾಗಿಯೇ ಟ್ರಂಪ್‌ ಧನ್ಯವಾದ ಹೇಳಿದ್ದರು. ಇದರ ಬೆನ್ನಲ್ಲೇ ಪಾಕಿಸ್ತಾನದ ಮೇಲೆ ಇಂಥದ್ದೊಂದು ನಿರ್ಬಂಧದ ತೂಗುಗತ್ತಿ ನೇತಾಡುತ್ತಿದೆ.

ಸಿಂಧೂ ನದಿ ಕಣಿವೆಯಲ್ಲಿ ಪತ್ತೆಯಾದ ಭಾರೀ ಚಿನ್ನದ ನಿಕ್ಷೇಪ: ಪಾಕಿಸ್ತಾನಕ್ಕೆ ಜಾಕ್‌ಪಾಟ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..