ವರ ಮೂರ್ಛೆ ಹೋಗಿ ಹೊರಬಂದ 'ಖಾಲಿ' ಸತ್ಯ: ಮದುವೆಗೆ ನಿರಾಕರಿಸಿದ ವಧು

Published : May 22, 2022, 04:53 PM IST
ವರ ಮೂರ್ಛೆ ಹೋಗಿ ಹೊರಬಂದ 'ಖಾಲಿ' ಸತ್ಯ: ಮದುವೆಗೆ ನಿರಾಕರಿಸಿದ ವಧು

ಸಾರಾಂಶ

ಮದುವೆ ವೇಳೆ ಮೂರ್ಛೆ ಹೋದ ವರ ಮೂರ್ಛೆ ಹೋದ ಪರಿಣಾಮ ಹಾರಿದ ವಿಗ್‌ ಬೋಳು ತಲೆ ನೋಡಿ ಮದುವೆಗೆ ನಿರಾಕರಿಸಿದ ವಧು

ಉನ್ನಾವೋ: ಮದುವೆ ಗಂಡಿನ ತಲೆಯಲ್ಲಿ ಕೂದಲಿಲ್ಲ ಎಂದು ವಧು (Bride) ಮದುವೆ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಉನ್ನಾವೋದಲ್ಲಿ (Unnao) ನಡೆದಿದೆ. ಭಾರತದಲ್ಲಿ ಕೆಲವು ಮದುವೆಗಳಲ್ಲಿ ನಡೆಯುಬ ಸೀನ್‌ಗಳು ಯಾವ ಸಿನಿಮಾಗಳಿಗೂ ಕಡಿಮೆ ಇರುವುದಿಲ್ಲ. ಮದುವೆಯಲ್ಲಿ ತಮಗೆ ಬೇಕಾದ ಆಹಾರ ತಯಾರಿಸಲಿಲ್ಲ, ವರದಕ್ಷಿಣೆ ಹಣ ಇನ್ನು ತಲುಪಿಲ್ಲ. ದಿಬ್ಬಣ ಸಮಯಕ್ಕೆ ಸರಿಯಾಗಿ ಆಗಮಿಸಿಲ್ಲ ಮುಂತಾದ ಹಲವಾರು ಕಾರಣಕ್ಕೆ ಮದುವೆ ನಿಂತ ಘಟನೆಗಳನ್ನು ನೀವು ಈಗಾಗಲೇ ಕೇಳಿರಬಹುದು. ಈಗ ಇಲ್ಲಿ ವಧು ವರ ಬಾಂಡ್ಲಿಯಾಗಿದ್ದಾನೆ ಆತನ ತಲೆಯಲ್ಲಿ ಕೂದಲಿಲ್ಲ ಎಂದು ತಿಳಿದು ಮದುವೆ ನಿರಾಕರಿಸಿದ್ದಾಳೆ. 

ಇಲ್ಲಿ ವರ ತನ್ನ ಬೋಳು ತಲೆಯನ್ನು ವಿಗ್‌ನಿಂದ ಮುಚ್ಚಿದ್ದ, ಇದು ಮದುವೆ ಸಮಯದಲ್ಲಿ ವಧುವಿಗೆ ತಿಳಿದಿದ್ದು ಸಿಟ್ಟುಗೊಂಡ ಆಕೆ ಮದುವೆ ನಿರಾಕರಿಸಿದ್ದಾಳೆ. ಈ ಘಟನೆಯು ಖಂಡಿತವಾಗಿಯೂ ನಿಮಗೆ ಆಯುಷ್ಮಾನ್ ಖುರಾನಾ ಅವರ 2019 ರ ಚಲನಚಿತ್ರ 'ಬಾಲಾ'ವನ್ನು ನೆನಪಿಸುತ್ತದೆ. ಈ ಸಿನಿಮಾದ ಕತೆಯೂ ಹೀಗೆ ಇದ್ದು, ಅಕಾಲಿಕ ಬೋಳು ತಲೆಯಿಂದ ಬಳಲಿದ್ದ ಆತ  ಮದುವೆಯಾಗುವ ಹುಡುಗಿಯಿಂದ ಆ ವಿಚಾರವನ್ನು ಮರೆಮಾಚುವ ಕತೆಯನ್ನು ಹೊಂದಿದೆ. 

ವರ ವಿಗ್‌ ಧರಿಸಿದ್ದು ತಿಳಿದು ಮಂಟಪದಲ್ಲೇ ಮೂರ್ಛೆ ಹೋದ ವಧು... ಮದುವೆ ರದ್ದು

ಈ ಉನ್ನಾವೋ (Unnao) ಘಟನೆಯಲ್ಲಿಯೂ ಮದುವೆಯ ಅರ್ಧದಷ್ಟು ಸಂಪ್ರದಾಯಗಳು ಮುಗಿದು ಇನ್ನೇನು ಅಂತಿಮ ವಿಧಿಯಷ್ಟೇ ಬಾಕಿ ಇತ್ತು. ಈ ವೇಳೆ ವರ ಮೂರ್ಛೆ ತಪ್ಪಿ ಬಿದ್ದಿದ್ದು, ಇದರಿಂದ ವರ ಧರಿಸಿದ್ದ ವಿಗ್ ನೆಲಕ್ಕೆ ಬಿದ್ದಿದೆ. ಪರಿಣಾಮ ವರನ ತಲೆಯಲ್ಲಿ ಕೂದಲೇ ಇಲ್ಲ ಎಂಬುದು ಎಲ್ಲರಿಗೂ ತಿಳಿದು ಹೋಗಿದ್ದು, ಇದು ಮದುವೆಯ ಸನ್ನಿವೇಶವನ್ನೇ ಕ್ಷಣದಲ್ಲಿ ಬದಲಾಯಿಸಿದೆ. ಇತ್ತ ವಧುವಿನ ಕುಟುಂಬದವರಿಂದ ವರನ ಈ ಬೋಳು ತಲೆಯನ್ನು ವಿಗ್‌ (wig) ಧರಿಸುವ ಮೂಲಕ ಮುಚ್ಚಿಡಲಾಗಿತ್ತು. 

ಹೀಗಾಗಿ ವರನ ಬೋಳು ತಲೆಯನ್ನು ಮದುವೆ ಮಂಟಪದಲ್ಲಿ ನೋಡಿದ ವಧು ಮದುವೆಯಾಗಲು ನಿರಾಕರಿಸಿದಳು. ಅನೇಕರು ಅವಳನ್ನು ಮನವೊಲಿಸಲು ಮತ್ತು ಮದುವೆಗಯಾಗುವಂತೆ ಮನವೊಲಿಸಲು ಮುಂದಾದರು ಆದರೆ ವಧು ತನ್ನ ನಿಲುವಿನಲ್ಲಿ ದೃಢವಾಗಿ ಉಳಿದು ಮದುವೆಯನ್ನು ರದ್ದುಗೊಳಿಸಿದಳು. ಈ ವಿಷಯ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿ ಪೊಲೀಸರು ಮಧ್ಯಪ್ರವೇಶಿಸಿ ಸಂಧಾನ ಮಾಡಲು ಯತ್ನಿಸಿದರು ವಧು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ನಂತರ ಪೊಲೀಸರೇ ಪಂಚಾಯತಿ ನಡೆಸಿದ್ದಾರೆ. ಮದುವೆಗೆ 5.66 ಲಕ್ಷ ಖರ್ಚು ಮಾಡಿದ್ದೇವೆ ಎಂದು ವಧುವಿನ ಮನೆಯವರು ತಿಳಿಸಿದ್ದಾರೆ. ನಂತರ ವರನ ಕಡೆಯವರು ಅವರ ಬೇಡಿಕೆಗೆ ಸಮ್ಮತಿಸಿ ವಧುವಿನ ತಂದೆಗೆ (Father) ಹಣವನ್ನು ಹಿಂದಿರುಗಿಸಿದ್ದಾರೆ.

ಮಟನ್ ಊಟವಿಲ್ಲವೆಂದು ಮದುವೆ ಮುರಿದು, ಬೇರೊಬ್ಬಾಕೆಗೆ ತಾಳಿ ಕಟ್ಟಿದ 'ಮದುಮಗ'!

ಪರಿಣಾಮ ವರ (Groom) ಹಾಗೂ ಆತನ ಸಂಬಂಧಿಗಳು ವಧು ಇಲ್ಲದೇ ತಮ್ಮೂರಿಗೆ ತೆರಳುವಂತಾಯಿತು. ವಧುವಿನ ಚಿಕ್ಕಪ್ಪ ಮಾತನಾಡಿ, ವರನ ಮನೆಯವರು ಬೋಳು ಎಂಬ ವಿಷಯವನ್ನು ಮುಚ್ಚಿಡಬಾರದಿತ್ತು. ಆಗ ನಾವು ವಧುವನ್ನು ಮಾನಸಿಕವಾಗಿ ಸಿದ್ಧಪಡಿಸಬಹುದಿತ್ತು ಮತ್ತು ಅವಳು ಆಘಾತಕ್ಕೊಳಗಾಗುತ್ತಿರಲಿಲ್ಲ. ಮದುವೆಯು ಸುಳ್ಳಿನ ಮೇಲೆ ಉಳಿಯುತ್ತದೆ ಎಂದು ನಾವು ನಿರೀಕ್ಷಿಸಬಾರದು ಎಂದು ಹೇಳಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಧು ತಾನು ಮದುವೆಗೆ ಸಿದ್ಧವಾಗಿಲ್ಲ ಮತ್ತು ಎರಡು ಪಕ್ಷಗಳ ನಡುವೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ಪರಿಯಾರ್ ಪೊಲೀಸ್ ಔಟ್-ಪೋಸ್ಟ್ ಉಸ್ತುವಾರಿ ರಾಮ್‌ಜೀತ್ ಯಾದವ್ (Ramjeet Yadav) ಸುದ್ದಿಗಾರರಿಗೆ ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?