ಪ್ರದೀಪ್ ಈಶ್ವರ್ ರೀತಿ ಸವಾಲು, ಆದರೆ ಕೊಟ್ಟ ಮಾತಿನಂತೆ ನಡೆದುಕೊಂಡ ಆಂಧ್ರ ಮಾಜಿ ಸಚಿವ!

By Chethan Kumar  |  First Published Jun 6, 2024, 10:40 PM IST

ಪವನ್ ಕಲ್ಯಾಣ್ ಗೆದ್ದರೆ, ಆತನ ಪಕ್ಷ ಗೆದ್ದರೆ ನನ್ನ ಹೆಸರೇ ಬದಲಾಯಿಸುತ್ತೇನೆ ಎಂದು ಮಾಜಿ ಸಚಿವ ಸವಾಲು ಹಾಕಿದ್ದರು. ಫಲಿತಾಂಶದ ಬಳಿಕ ಭಾರಿ ಟೀಕೆ, ಟ್ರೋಲ್ ಎದುರಿಸಿದ ಸಚಿವ ಇದೀಗ ತಮ್ಮ ಹೆಸರು ಬದಲಾಯಿಸಲು ಮುಂದಾಗಿದ್ದಾರೆ.
 


ವಿಶಾಖಪಟ್ಟಣಂ(ಜೂ.06) ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿಯ ಸಂಸದ ಡಾ.ಕೆ ಸುಧಾಕರ್ ಒಂದೇ ಒಂದು ಮತ ಹೆಚ್ಚು ಪಡೆದರೆ ರಾಜೀನಾಮಮೆ ನೀಡುತ್ತೇನೆ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದರು. ಆದರೆ ಕೆ ಸುಧಾಕರ್ ಭಾರಿ ಅಂತರದ ಗೆಲುವಿನ ಬಳಿಕ ಪ್ರದೀಪ್ ಈಶ್ವರ್ ಭಾರಿ ಟ್ರೋಲ್ ಆಗಿದ್ದಾರೆ. ರಾಜೀನಾಮೆ ಯಾವಾಗ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ಇದೇ ರೀತಿ ಆಂಧ್ರ ಪ್ರದೇಶದಲ್ಲಿ ವೈಎಸ್ಆರ್‌ಸಿಪಿ  ನಾಯಕ, ಮಾಜಿ ಸಚಿವ ಮುದ್ರಗಡಾ ಪದ್ಮನಾಭಮ್ ಸವಾಲು ಹಾಕಿ ಇದೀಗ ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಮುಂದಾಗಿದ್ದಾರೆ. ತಮ್ಮ ಹೆಸರು ಬದಲಿಲು ಕಾನೂನು ಪ್ರಕ್ರಿಯೆ ಆರಂಭಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಪವನ್ ಕಲ್ಯಾಣ್ ಹಾಗೂ ಪವನ್ ಅವರ ಜನಸೇನಾ ಪಕ್ಷ ಗೆದ್ದರೆ ನನ್ನ ಹೆಸರು ಬದಲಿಸುತ್ತೇನೆ. ಪವನ್ ಕಲ್ಯಾಣ್‌ಗೆ ಸಿನಿಮಾ ಮಾಡಿದಷ್ಟು ಸುಲಭವಲ್ಲ ರಾಜಕೀಯ. ಇಲ್ಲಿ ನಿಜವಾದ ಅಭಿವದ್ಧಿ, ನಿಜವಾದ ಜನಪರ ಕಾಳಜಿ ಬೇಕು ಎಂದು ಸವಾಲು ಹಾಕಿದ್ದರು. ಆದರೆ ಆಂಧ್ರ ಪ್ರದೇಶ ಲೋಕಸಭೆ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಹೊಸ ದಾಖಲೆ ಬರೆದಿದ್ದಾರೆ. ಪವನ್ ಕಲ್ಯಾಣ್ ಸೇರಿದಂತೆ ಸ್ಪರ್ಧಿಸಿದ್ದ 21 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಜನಸೇನಾ ಸರ್ಕಾರ ರಚನೆಯಾಗುತ್ತಿದೆ.

Latest Videos

undefined

ಆಂಧ್ರದಲ್ಲಿ ವೋಟಿಂಗ್ ದಿನವೇ ಮತದಾರನ ಕೆನ್ನೆಗೆ ಬಾರಿಸಿದ ಶಾಸಕನಿಗೆ ಸೋಲು

ಪವನ್ ಕಲ್ಯಾಣ್ ಹಾಗೂ ಜನಸೇನಾ ಪಕ್ಷದ ಅಭೂತಪೂರ್ವ ಗೆಲುವಿನಿಂದ ಸವಾಲು ಹಾಕಿದ ಮಾಜಿ ಸಚಿವ ಮುದ್ರಗಡಾ ಪದ್ಮನಾಭಮ್‌ಗೆ ತೀವ್ರ ಸಂಕಷ್ಟ ಎದುರಾಗಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ಪದ್ಮನಾಭಮ್ ವಿರುದ್ಧ ಟೀಕೆಗಳು, ಟ್ರೋಲ್ ಶುರುವಾಗಿದೆ. ಹೆಸರು ಬದಲಿಸಲು ಸಚಿಸಿದ್ದಾರೆ. ಇಷ್ಟೇ ಅಲ್ಲ ಹಲವರು ಹೊಸ ಹೆಸರನ್ನೂ ಸೂಚಿಸಿದ್ದಾರೆ. ತೀವ್ರ ಟೀಕೆ, ಹಾಗೂ ಟ್ರೋಲ್ ಬೆನ್ನಲ್ಲೇ ಮಾಜಿ ಸಚಿವ ಮುದ್ರಗಡಾ ಹೆಸರು ಬದಲಿಸಲು ಮುಂದಾಗಿದ್ದಾರೆ.

ನನ್ನ ಆಲೋಚನೆ, ಊಹೆ ತಪ್ಪಾಗಿದೆ. ವೈಎಸ್ಆರ್‌ಸಿಪಿ ಅತೀ ಹೆಚ್ಚು ಅಂತರದಿಂದ ಗೆಲ್ಲುವ ವಿಶ್ವಾಸವಿತ್ತು. ಅಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೆವು. ಆದರೆ ಲೆಕ್ಕಾಚಾರ ಉಲ್ಟಾ ಆಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಹೆಸರು ಬದಲಿಸುತ್ತೇನೆ. ನನ್ನ ಹೆಸರನ್ನು ಪದ್ಮನಾಭ ರೆಡ್ಡಿ ಎಂದು ಮರುನಾಮಕರಣ ಮಾಡುತ್ತೇನೆ. ಇದಕ್ಕಾಗಿ ಎಲ್ಲಾ ದಾಖಲೆ ಪತ್ರ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಹೆಸರು ಬದಲಾವಣೆಯ ಅಧಿಕೃತ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮುದ್ರಗಡಾ ಪದ್ಮನಾಭಮ್ ಹೇಳಿದ್ದಾರೆ.

ಖಾತೆ ಹಂಚಿಕೆಗೆ ಲಕ್ಷ್ಮಣ ರೇಖೆ ಎಳೆದ ಬಿಜೆಪಿ; ಯಾರಿಗೆ, ಯಾವ ಮಂತ್ರಿಗಿರಿ?

ವೈಎಸ್‌ಆರ್‌ಸಿಪಿ ಪಕ್ಷಕ್ಕೆ ನನ್ನ ಬೆಂಬಲ, ಜಗನ್ ಮೋಹನ್ ರೆಡ್ಡಿಯನ್ನೇ ಬೆಂಬಲಿಸುತ್ತೇನೆ. ಇದರಲ್ಲಿ ನನಗೆ ಯಾವುದೇ  ಹಿಂಜರಿಕೆ ಇಲ್ಲ. ಮುಂದಿನ ದಿನಗಳಲ್ಲೂ ಮತ್ತಷ್ಟು ಉತ್ತಮ ಕೆಲಸದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುದ್ರಗಡ ವಿಶ್ವಾಸ ವ್ಯಕ್ತಪಡಿಸಿದ್ದರೆ.
 

click me!