ಇಂಡಿಯಾ ಒಕ್ಕೂಟಕ್ಕೆ ಬಿಗ್ ಶಾಕ್, ಮೈತ್ರಿಯಲ್ಲಿ ಮುಂದುವರಿಯಲ್ಲ ಎಂದ ಆಮ್ ಆದ್ಮಿ ಪಾರ್ಟಿ!

By Chethan Kumar  |  First Published Jun 6, 2024, 8:51 PM IST

ಇಂಡಿಯಾ ಒಕ್ಕೂಟದ ಭರ್ಜರಿ ಪ್ರದರ್ಶನ ಸಂಭ್ರಮದಲ್ಲಿರುವ ನಾಯಕರಿಗೆ ಆಘಾತ ಎದುರಾಗಿದೆ. ಇಂಡಿಯಾ ಒಕ್ಕೂಟ ಮೈತ್ರಿಯಿಂದ ಆಮ್ ಆದ್ಮಿ ಪಾರ್ಟಿ ಹೊರಬಂದಿದೆ. 2025ರ ವಿಧಾನಸಭಾ ಚುನಾವಣೆಗೆ ಏಕಾಂಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದೆ.
 


ನವದೆಹಲಿ(ಜೂ.06) ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ ಅದ್ಭುತ ಪ್ರದರ್ಶನ ನೀಡಿದೆ. ಇದೇ ಕಾರಣದಿಂದ ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ಮಿತ್ರ ಪಕ್ಷಗಳ ನೆರವಿನಿಂದ ಎನ್‌ಡಿಎ ಸರ್ಕಾರ ರಚಿಸುವ ತಯಾರಿಯಲ್ಲಿದೆ. ಇತ್ತ ರಾಹುಲ್ ಗಾಂಧಿ ಷೇರು ಮಾರುಕಟ್ಟೆ ಕುರಿತು ಹೊಸ ಬಾಂಬ್ ಸಿಡಿಸಿ ಕೋಲಾಹಲ ಸೃಷ್ಟಿಸಿದ್ದಾರೆ. ಈ  ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇಂಡಿಯಾ ಮೈತ್ರಿ ಒಕ್ಕೂಟದಿಂದ ಆಮ್ ಆದ್ಮಿ ಪಾರ್ಟಿ ಹೊರಬಂದಿದೆ. ಈ ಕುರಿತು ಆಪ್ ಸಚಿವ ಗೋಪಾಲ್ ರೈ ಘೋಷಣೆ ಮಾಡಿದ್ದಾರೆ. 2025ರ ವಿಧಾನಸಭಾ ಚುನಾವಣೆಗೆ ಆಪ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲ ಎಂದಿದ್ದಾರೆ. ಲೋಕಸಭೆಗಾಗಿ ಮಾಡಿರುವ ಮೈತ್ರಿ ವಿಧಾನಸಭೆ ಚುನಾವಣೆಗೆ ಮುಂದುವರಿಯುವುದಿಲ್ಲ ಎಂದಿದ್ದಾರೆ. 

ಲೋಕಸಭಾ ಚುನಾವಣೆಗಾಗಿ ವಿಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆಮ್ ಆದ್ಮಿ ಪಾರ್ಟಿ ಕೂಡ ಇಂಡಿಯಾ ಮೈತ್ರಿ ಪಾಲುದಾರರಾಗಿ ಬೆಂಬಲ ನೀಡಿದೆ. ಇಂಡಿಯಾ ಮೈತ್ರಿ ಲೋಕಸಭಾ ಚುನಾವಣೆಗಾಗಿ  ಮಾಡಿದ ಮೈತ್ರಿ. ಲೋಕಸಭಾ ಚುನಾವಣೆ ಹೋರಾಟದ ದೃಷ್ಟಿಯಿಂದ ಆಪ್ ಇಂಡಿಯಾ ಮೈತ್ರಿಗೆ ಸಂಪೂರ್ಣ ಬೆಂಬಲ ನೀಡಿ ಪಾಲುದಾರರಾಗಿತ್ತು. ಇದೀಗ ಲೋಕಸಭೆ ಚುನಾವಣೆ ಮುಗಿದಿದೆ. ಹೀಗಾಗಿ ಇನ್ನು ಆಪ್‌ಗೆ ಮೈತ್ರಿ ಅವಶ್ಯಕತೆ ಇಲ್ಲ ಎಂದು ಗೋಪಾಲ್ ರೈ ಹೇಳಿದ್ದಾರೆ.

Latest Videos

undefined

ಅತ್ತೂ ಕರೆದರೂ ಆಪ್ ಕೈಹಿಡಿಯದ ಮತದಾರ, ದೆಹಲಿಯ 7 ಸ್ಥಾನದಲ್ಲಿ ಬಿಜೆಪಿ ಮುನ್ನಡೆ!

2025ರಲ್ಲಿ ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ದೆಹಲಿ ಚುನಾವಣೆಗೆ ಆಪ್ ಯಾವುದೇ ಮೈತ್ರಿ ಇಲ್ಲ. ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಗೋಪಾಲ್ ರೈ ಸ್ಪಷ್ಟಪಡಿಸಿದ್ದರೆ.  ಲೋಕಸಭಾ ಚುನಾವಣೆಗಾಗಿ ಮಾಡಿರುವ ಮೈತ್ರಿ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಾಗಿದೆ. ಇದು ವಿಧಾನಸಭೆ ಚನಾವಣೆಗೆ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೆ.

ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹಾಗೂ ಆಪ್ ಮೈತ್ರಿ ಮೂಲಕ ಸ್ಪರ್ಧಿಸಿತ್ತು. ಆಧರೆ ದೆಹಲಿ ಜನ ಬಿಜೆಪಿಗೆ ಮತ ನೀಡಿದ್ದಾರೆ. ಎಲ್ಲಾ 7 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಆಮ್ ಆದ್ಮಿ ಪಾರ್ಟಿ ಈ ಚುನಾವಣೆಯಲ್ಲಿ ದೆಹಲಿ, ಪಂಜಾಬ್, ಹರ್ಯಾಣ, ಗುಜರಾತ್ ಹಾಗೂ ಅಸ್ಸಾಂನಲ್ಲಿ ಆಪ್ ಸ್ಪರ್ಧಿಸಿತ್ತು. ಒಟ್ಟು 22 ಸ್ಥಾನಗಳಲ್ಲಿ ಆಪ್ ಸ್ಪರ್ಧೆ ಮಾಡಿತ್ತು. ಆದರೆ 3 ಸ್ಥಾನ ಮಾತ್ರ ಗೆದ್ದುಕೊಂಡಿದೆ.

ತಂದೆ-ತಾಯಿ ಆಶೀರ್ವಾದ ಪಡೆದು, ಗಾಂಧಿ ಸಮಾಧಿಗೆ ನಮನ ಸಲ್ಲಿಸಿ ತಿಹಾರ್ ಜೈಲಿಗೆ ಹಿಂದಿರುಗಿದ ಅರವಿಂದ್ ಕೇಜ್ರಿವಾಲ್

ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಬಳಿಕ ನಡೆದ ಮೊದಲ ಲೋಕಸಭೆ ಚುನಾವಣೆಯಲ್ಲಿ ಆಪ್ 3 ಸ್ಥಾನ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 
 

click me!