ತಿರುಪತಿ: ಖಾಸಗಿ ಆಂಬುಲೆನ್ಸ್ ಅತೀ ಹೆಚ್ಚು ಶುಲ್ಕ ಕೇಳಿದ ಹಿನ್ನೆಲೆ ಮತ್ತೊಂದೆಡೆ ದೊರಕದ ಸರ್ಕಾರಿ ಆಂಬುಲೆನ್ಸ್ ಇದರಿಂದ ಕಂಗೆಟ್ಟ ತಂದೆಯೋರ್ವ ತನ್ನ 10 ವರ್ಷದ ಮಗನ ಮೃತದೇಹವನ್ನು ಬೈಕ್‌ನಲ್ಲಿ ತೆಗೆದುಕೊಂಡು ಹೋದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಎಸ್‌ವಿಆರ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿಂದ 90 ಕಿಲೋ ಮೀಟರ್ ದೂರದಲ್ಲಿರುವ ತನ್ನ ಗ್ರಾಮಕ್ಕೆ ತಂದೆ ಮಗನ ಶವವನ್ನು ಹೆಗಲಿನಲ್ಲಿ ಇಟ್ಟುಕೊಂಡು ಬೈಕ್‌ನಲ್ಲಿ ಸಾಗಿಸಿದ್ದಾರೆ.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ರಾಜ್ಯಾದ್ಯಂತ ಜನರು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತವು ಕ್ರಮ ಕೈಗೊಂಡು ಸಂಪೂರ್ಣ ಘಟನೆಯ ತನಿಖೆಗೆ ಆದೇಶಿಸಿದೆ. ವರದಿಯ ಪ್ರಕಾರ, ಆಂಧ್ರಪ್ರದೇಶದ (Andhra Pradesh) ಅನ್ನಮಯ್ಯ (Annamaiah) ಜಿಲ್ಲೆಯ ರಾಜಂಪೇಟ್ ಮಂಡಲದ (Rajampet mandal)ಚಿಟ್ವೇಲ್ ಗ್ರಾಮದ 10 ವರ್ಷದ ಬಾಲಕ ಜೇಸೇವಾ (Jeseva) ಕೆಲವು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಎಸ್‌ವಿಆರ್ ರುಯಿಯಾ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (SVR Ruia Government General Hospita) ಚಿಕಿತ್ಸೆ ಪಡೆಯುತ್ತಿದ್ದನು. ಆದರೆ, ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.
Traffic violation ಆ್ಯಂಬುಲೆನ್ಸ್‌ಗೆ ದಾರಿ ಬಿಡದ ಪ್ರಕರಣ, ಮಂಗಳೂರು ಕಾರು ಚಾಲಕ ಆರೆಸ್ಟ್!
ಅಪ್ರಾಪ್ತ ಬಾಲಕನ ಸಾವಿನ ನಂತರ ಆಸ್ಪತ್ರೆಯ ಅಧಿಕಾರಿಗಳು ಮಂಗಳವಾರ ನಸುಕಿನ ಜಾವ 2 ಗಂಟೆ ಸುಮಾರಿಗೆ ಮೃತದೇಹವನ್ನು ಆತನ ತಂದೆಗೆ ಹಸ್ತಾಂತರಿಸಿದ್ದರು. ತನ್ನ ಮಗನ ಅಕಾಲಿಕ ಮರಣದಿಂದ ದುಃಖಿಸುತ್ತಿದ್ದ ಬಾಲಕನ ತಂದೆ, ಅವನ ಮೃತದೇಹವನ್ನು ಮನೆಗೆ ಕೊಂಡೊಯ್ಯಲು ಸರ್ಕಾರಿ ಆಂಬ್ಯುಲೆನ್ಸ್‌ಗಾಗಿ ಒಂದೆರಡು ಗಂಟೆಗಳ ಕಾಲ ಕಾದಿದ್ದಾರೆ. ಆದರೆ ಆಂಬುಲೆನ್ಸ್ ಬಂದಿಲ್ಲ ಎಂದು ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ.
ಸರಕಾರಿ ಪ್ರಾಯೋಜಿತ ಆಂಬ್ಯುಲೆನ್ಸ್ ಬಾರದೆ ಇದ್ದಾಗ ಮೃತ ಬಾಲಕನ ತಂದೆ ಎಸ್ ವಿಆರ್ ರುಯಿಯಾ ಸರಕಾರಿ ಜನರಲ್ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಿದ್ದ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರನ್ನು ಸಂಪರ್ಕಿಸಿದರು. ಅವರು, ತಿರುಪತಿಯಿಂದ ಕೇವಲ 90 ಕಿಮೀ ದೂರದಲ್ಲಿರುವ ಚಿಟ್ವೇಲ್‌ಗೆ ಜೇಸವನ ಮೃತದೇಹವನ್ನು ಸಾಗಿಸಲು 10,000 ರೂ ಬಾಡಿಗೆ ನೀಡುವಂತೆ ಒತ್ತಾಯಿಸಿದರು.
Hubballi: ಕುಡುಕ ಚಾಲಕನ ಅವಾಂತರ, ಫ್ಲೈಓವರ್‌ನಿಂದ ಕೆಳಗೆ ಬಿದ್ದ ಆ್ಯಂಬುಲೆನ್ಸ್..!
ಆದರೆ ಬಾಲಕನ ತಂದೆ ಕಡು ಬಡವರಾಗಿದ್ದು, ಅಷ್ಟು ಬಾಡಿಗೆ ಕಟ್ಟಲು ಸಾಧ್ಯವಿಲ್ಲ ಎಂದು ಆಂಬ್ಯುಲೆನ್ಸ್ ನಿರ್ವಾಹಕರಿಗೆ ಬಾಲಕನ ತಂದೆ ತಿಳಿಸಿದ್ದಾರೆ. ಗ್ರಾಮದ ಮಾವಿನ ತೋಟವೊಂದರಲ್ಲಿ ಕೃಷಿ ಕಾರ್ಮಿಕನಾಗಿ ಕೆಲಸ ಮಾಡುವ ಜೇಸವನ ತಂದೆ ಸ್ವಲ್ಪ ಮಾನವೀಯತೆ ತೋರಿಸಿ ಪ್ರಯಾಣ ದರವನ್ನು ಕಡಿಮೆ ಮಾಡುವಂತೆ ಖಾಸಗಿ ಆಂಬುಲೆನ್ಸ್ ನಿರ್ವಾಹಕರಿಗೆ ಮನವಿ ಮಾಡಿದರು, ಆದರೆ ಖಾಸಗಿ ಆಂಬ್ಯುಲೆನ್ಸ್ ನಿರ್ವಾಹಕರು ಅದನ್ನು ನಿರಾಕರಿಸಿದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಂತರ ಬಾಲಕನ ತಂದೆಯ ಪರಿಚಿತರೊಬ್ಬರು ಅಲ್ಲಿಗೆ ಬಂದು ಉಚಿತವಾಗಿ ಬಾಲಕನ ಶವವನ್ನು ತಮ್ಮ ಆಂಬುಲೆನ್ಸ್ ಮೂಲಕ ಹುಟ್ಟೂರಿಗೆ ಸಾಗಿಸಲು ಮುಂದೆ ಬಂದರು. ಆದರೆ ಅಲ್ಲಿದ್ದ ಖಾಸಗಿ ಆಂಬುಲೆನ್ಸ್ ನಿರ್ವಾಹಕರು ಅವರೊಂದಿಗೆ ಗಲಾಟೆ ಮಾಡಲು ಶುರು ಮಾಡಿದರು. ಇಲ್ಲಿಗೆ ಬರುವ ರೋಗಿಗಳು ಇಲ್ಲಿರುವ ಆಂಬುಲೆನ್ಸ್ ಅನ್ನೇ ಬಳಸಬೇಕು ಅಥವಾ ಆಸ್ಪತ್ರೆ ಜೊತೆ ಒಪ್ಪಂದವಾಗಿರುವ ವಾಹನಗಳನ್ನು ಮಾತ್ರ ಬಳಸಬೇಕು ಎಂದು ಗಲಾಟೆ ಮಾಡಲು ಶುರು ಮಾಡಿದರು. ಖಾಸಗಿ ಆಂಬುಲೆನ್ಸ್ ಚಾಲಕರ ಗಲಾಟೆ ಜೋರಾದ ಹಿನ್ನೆಲೆ ಬಾಲಕನ ತಂದೆಯ ಪರಿಚಿತರು ತಮ್ಮ ಜೀವ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಹೊರ ನಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ