ಎಲೆಮರೆಯ ಪ್ರತಿಭೆ: ಟ್ರಕ್‌ ಚಾಲಕನ ಸುಮಧುರ ಕಂಠಕ್ಕೆ ನೆಟ್ಟಿಗರು ಫಿದಾ

Published : Apr 26, 2022, 06:15 PM IST
ಎಲೆಮರೆಯ ಪ್ರತಿಭೆ: ಟ್ರಕ್‌ ಚಾಲಕನ ಸುಮಧುರ ಕಂಠಕ್ಕೆ ನೆಟ್ಟಿಗರು ಫಿದಾ

ಸಾರಾಂಶ

ಮುಝೆ ಇಷ್ಕ್ ಹೈ ತುಜಿ ಸೇ ಹಾಡು ಹಾಡಿದ ಟ್ರಕ್‌ ಚಾಲಕ ಸುಮಧುರು ಕಂಠಕ್ಕೆ ನೆಟ್ಟಿಗರು ಫಿದಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಮನೋರಂಜನೆ ನೀಡುವ ಹಲವು ವಿಡಿಯೋಗಳು ಪ್ರತಿದಿನ ವೈರಲ್ ಆಗುತ್ತಿರುತ್ತವೆ. ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರತಿಭೆಗೆ ವೇದಿಕೆ ಸಿಕ್ಕಿಲ್ಲ ಎಂದು ಯಾರೂ ಅಳಬೇಕಿಲ್ಲ. ಪ್ರತಿಭೆ ಇದ್ದರೆ ಸಾಕು ಸಾಮಾಜಿಕ ಜಾಲತಾಣಗಳು ವೇದಿಕೆ ಒದಗಿಸುತ್ತವೆ. ಸಾಮಾಜಿಕ ಜಾಲತಾಣಗಳ ಶಕ್ತಿ ಈ ಮಟ್ಟಕ್ಕೆ ಬೆಳೆದಿದ್ದು, ಹಲವು ಪ್ರತಿಭೆಗಳು ಹೀಗೆ ಹೊರ ಬಂದು ಇಂದು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹಾಗೆಯೇ ಈಗ ಟ್ರಕ್‌ ಡ್ರೈವರ್ ಒಬ್ಬರ ಪ್ರತಿಭೆ ಸಾಮಾಜಿಕ ಜಾಲತಾಣದ ಮೂಲಕ ಹೊರ ಪ್ರಪಂಚಕ್ಕೆ ತಿಳಿದಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಮೊಹಮ್ಮದ್ ರಫಿ ಅವರು ಹಾಡಿದ ಹಾಡೊಂದನ್ನು ಟ್ರಕ್‌ ಚಾಲಕರೊಬ್ಬರು ಸೊಗಸಾಗಿ ಹಾಡಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಚಾಲಕನ ಕಂಠಸಿರಿಗೆ ಜನ ಬೆರಗಾಗಿದ್ದಾರೆ.  ಈ ವೀಡಿಯೊವನ್ನು ವಿವೇಕ್ ವರ್ಮಾ (Vivek Verma) ಎಂಬುವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ವಿವೇಕ್ ಸ್ವತಃ ಗಾಯಕರಾಗಿದ್ದಾರೆ. ಕಮಲೇಶ್ ಅಂಕಲ್‌ ಅವರು ತಮ್ಮ ಇಡೀ ಜೀವನದಲ್ಲಿ ಟ್ರಕ್ ಓಡಿಸಿರಬಹುದು. ಆದರೆ ಅವರು ಹೃದಯದಿಂದ ಮತ್ತು ಆತ್ಮದಿಂದ ಹಾರ್ಡ್ ಕೋರ್ ಸಂಗೀತಗಾರ ಎಂದು ವಿವೇಕ್‌ ವರ್ಮಾ ಬರೆದಿದ್ದಾರೆ.

ಹ್ಯಾರಿ ಪಾಟರ್ ಥೀಮ್‌ ಸಾಂಗ್‌ ಹಾಡುವ ಪುಟ್ಟ ಹಕ್ಕಿ: ವಿಡಿಯೋ ವೈರಲ್‌

ಹಲವು ಬಾರಿ ವಿವೇಕ್ ವರ್ಮಾ ಅವರು ಒತ್ತಾಯ ಮಾಡಿದ ಮೇಲೆ ಅಂಕಲ್‌ ಕಮಲೇಶ್‌ ಈ ಹಾಡನ್ನು ಹಾಡಿದರು ಎಂದು ಅವರು ಕಾಮೆಂಟ್‌ನಲ್ಲಿ ನಂತರ ಬರೆದಿದ್ದಾರೆ. ಅವರ  ಹಾಡುಗಾರಿಕೆ ನಮಗೆಲ್ಲರಿಗೂ ಇಷ್ಟವಾಗಿದೆ ಮತ್ತು ಅದಕ್ಕಾಗಿಯೇ  ಈ ವೀಡಿಯೊವನ್ನು ನಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಮತ್ತು ಅವಕಾಶ ಸಿಕ್ಕರೆ ಶೀಘ್ರದಲ್ಲೇ ಅವರೊಂದಿಗೆ ಹಾಡನ್ನು ರೆಕಾರ್ಡ್ ಮಾಡುವುದಾಗಿಯೂ ವಿವೇಕ್ ವರ್ಮಾ ಬರೆದಿದ್ದಾರೆ.

 

ಮೊಹಮ್ಮದ್ ರಫಿ (mohammed rafi) ಅವರ ಪ್ರಸಿದ್ಧ ಗೀತೆ 'ಮುಝೆ ಇಷ್ಕ್ ಹೈ ತುಜಿ ಸೇ' ಹಾಡನ್ನು ಚಾಲಕ ಕಮಲೇಶ್ (Kamalesh)ಹೇಗೆ ಹಾಡುತ್ತಿದ್ದಾರೆ ಎಂಬುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ವಯಸ್ಸಿನಲ್ಲಿ, ಜನರು ಅವರ ಉತ್ಸಾಹವನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಅವರ ಗಾಯನವನ್ನು ಹೊಗಳಿದ್ದಾರೆ. ವೀಡಿಯೊ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಜಾಲತಾಣ (Social Media) ಬಳಕೆದಾರರು, ಅಂಕಲ್ ಹಾಡನ್ನು ಕೇಳಿದಾಗ ನನ್ನ ಮುಖದಲ್ಲಿ ನಗು ಇತ್ತು. ಎಂತಹ ಸುಂದರ ಧ್ವನಿ ಎಂದು ಬರೆದಿದ್ದಾರೆ. 

ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು: ಮದಿರೆ ಮತ್ತಲ್ಲಿ ಮಹಿಳೆ ಡ್ಯಾನ್ಸ್:‌ ವಿಡಿಯೋ ವೈರಲ್
ವರ್ಷದ ಹಿಂದೆ ರಾತ್ರೋ ರಾತ್ರಿ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ರಾನು ಮಂಡಲ್ ಕೆಲ ಕಾಲ ಮಾಯವಾಗಿದ್ದರು. ಇದೀಗ ಹೊಸ ಅವತಾರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕಚ್ಚಾ ಬಾದಾಮ್ ಹಾಡು ಹಾಡೋಕೆ, ಮದುಮಗಳ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಂಗ್ಯಾಕಮ್ಮಾ ಈ ವೇಷ ಎಂದು ಕೆಲವರು ಕಾಲೆಳೆದರೆ, ಇನ್ನು ಕೆಲವರು ಕಚ್ಚಾ ಬಾದಾಮ್ ಹಾಡನ್ನೇ ಗಬ್ಬೆಬ್ಬಿಸಿದೆಯಲ್ಲಮ್ಮೋ ಎಂದು ಕಾಲೆಳೆದಿದ್ದಾರೆ. 

ಲತಾ ಮಂಗೇಶ್ಕರ್ ಹಾಡನ್ನು ಕೊಲ್ಕತ್ತಾ ರೈಲ್ವೇ ಸ್ಟೇಷನ್ ನಲ್ಲಿ ಹಾಡುತ್ತಿದ್ದ ಸೋನು ಮಂಡಲ್ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾ ಸ್ಟಾರ್ ಆದರು. ಇವರ ಧ್ವನಿಯಲ್ಲಿ ಲತಾ ಜೀ ಹಾಡಿರುವ ಏಕ್ ಪ್ಯಾರ್ ಕ ನಗ್ಮಾ ಹೈ ಹಾಡು ಇವರ ಬದುಕಿನ ನಗ್ಮಾವನ್ನೇ ಬದಲಿಸಿತು.  ಸೋನುನಲ್ಲಿರುವ ಪ್ರತಿಭೆಯನ್ನು ಗುರುತಿಸಿದ ಹಿಮೇಶ್ ರೇಶಮಿಯಾ ತಮ್ಮ ಸಿನಿಮಾದಲ್ಲಿ ತೆರಿ ಮೇರಿ ಕಹಾನಿ ಹಾಡು ಹೇಳಲು ಅವಕಾಶ ಕೊಟ್ಟರು. ಇದಾದ ನಂತರ ಅವಕಾಶಗಳು ರಾನು ರನ್ನು ಹುಡುಕಿಕೊಂಡು ಬಂದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana;
ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​