ಆಂಧ್ರಪ್ರದೇಶ: ಚಲಿಸುವ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯೊಬ್ಬಳನ್ನು ಕೂರಿಸಿಕೊಂಡು ರೊಮ್ಯಾನ್ಸ್ ಮಾಡುತ್ತಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಘಟನೆ ನಡೆದಿತ್ತು. ಯುವ ಜೋಡಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೇ ಜೀವವನ್ನು ಅಪಾಯಕ್ಕಿಟ್ಟು ಸಾರ್ವಜನಿಕ ರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿದ ಈ ಜೋಡಿಯ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಹೀಗೆ ನಡುರಸ್ತೆಯಲ್ಲಿ ರೊಮ್ಯಾನ್ಸ್ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಜೋಡಿಯನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣದಲ್ಲಿರುವ (Visakhapatnam ) ಸ್ಟೀಲ್ ಪ್ಲಾಂಟ್ (steel plant) ರಸ್ತೆಯಲ್ಲಿ ಈ ವಿಡಿಯೋ ಸೆರೆ ಆಗಿತ್ತು. ಈ ಬೈಕ್ ಹಿಂದೆ ಕಾರಿನಲ್ಲಿದ್ದವರು ಈ ಯುವಜೋಡಿಯ ಪಬ್ಲಿಕ್ ರೊಮ್ಯಾನ್ಸ್ ಅನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು. ವಿಡಿಯೋದಲ್ಲಿ ಹುಡುಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿದ್ದರೆ ಯುವಕ ಆಕೆಯನ್ನೇ ತಬ್ಬಿಕೊಂಡೆ ಬೈಕ್ ಚಾಲನೆ ಮಾಡುತ್ತಿದ್ದ. ಹೀಗೆ ಸ್ವಲ್ಪವೂ ಅಂಜಿಕೆ ಇಲ್ಲದೇ ಸಾವಿನ ಭಯವೂ ಇಲ್ಲದೇ ಚಲಿಸುವ ಬೈಕ್‌ನಲ್ಲಿ ರೊಮ್ಯಾನ್ಸ್ (Romance) ಮಾಡಿದ ಈ ಜೋಡಿಯನ್ನು 19 ವರ್ಷ ಪ್ರಾಯದ ಶೈಲಜಾ (Shilaja) ಹಾಗೂ 22 ವರ್ಷ ಪ್ರಾಯದ ಅಜಯ್ ಕುಮಾರ್ (Ajay kumar) ಎಂದು ಗುರುತಿಸಲಾಗಿದೆ. ಇವರ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆದ ನಡುರಸ್ತೆಯಲ್ಲಿ ಇವರ ಸರಸದ ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ತಡಮಾಡದೇ ಈ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನು ಮಾಯೆಯೋ.. 19ರ ತರುಣಿ ಮದ್ವೆ ಆಗಿ ರೊಮ್ಯಾನ್ಸ್‌ಗೆ ವಯಸ್ಸು ಮುಖ್ಯವಲ್ಲ ಎಂದ 70ರ ತಾತ
ಪೊಲೀಸರ ಪ್ರಕಾರ ಈ ಜೋಡಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಾಹನ ಕಾಯ್ದೆಯಡಿ (Motor Vehicle Act) ಪ್ರಕರಣ ದಾಖಲಿಸಲಾಗಿದೆ. ಬೈಕ್‌ನ್ನು ಸ್ಟೀಲ್ ಪ್ಲಾಂಟ್ (steel plant road) ಠಾಣೆಯ ಪೊಲೀಸರು ಸೀಜ್ ಮಾಡಿದ್ದು, ಮೋಟಾರ್ ಕಾಯ್ದೆಯ ಸೆಕ್ಷನ್ 336, 279, 132 ಹಾಗೂ 129ರಡಿ ಪ್ರಕರಣ ದಾಖಲಿಸಲಾಗಿದೆ. ಇವರಿಬ್ಬರ ಪೋಷಕರಿಗೆ ನೋಟಿಸ್ ನೀಡಲಾಗಿದ್ದು, ಇಬ್ಬರ ಪೋಷಕರನ್ನು ಠಾಣೆಗೆ ಕರೆಸಿ ಅವರಿಗೆ ಮನವರಿಕೆ ಮಾಡಲಾಗಿದೆ. ಟ್ರಾಫಿಕ್ ನಿಯಮವನ್ನು ಪಾಲಿಸುವುದು ದೇಶದ ಪ್ರತಿಯೊಬ್ಬ ನಾಗರಿಕ ಕರ್ತವ್ಯ. ಯಾರೂ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಾರೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ವಾಹನವನ್ನು ಸೀಜ್ ಮಾಡಲಾಗುವುದು ಎಂದು ನಗರ ಪೊಲೀಸ್ ಕಮೀಷನರ್ ಸಿ ಹೆಚ್ ಶ್ರೀಕಾಂತ್ (CH Srikanth) ಹೇಳಿದ್ದಾರೆ.
ಪಾಕಿಸ್ತಾನಿ ನಟನೊಂದಿಗೆ ಅಮೀಷಾ ಪಟೇಲ್ ರೊಮ್ಯಾನ್ಸ್, ವಿಡಿಯೋ ವೈರಲ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ