ಸೈಕಲ್‌ನ್ನು ಒಂದು ಸಲಕ್ಕೆ ಒಬ್ಬರು ತುಳಿಯುತ್ತಾ ಸಾಗುವುದನ್ನು ನೀವು ನೋಡಿರಬಹುದು. ಆದರೆ ಇಬ್ಬರು ತುಳಿಯುವುದನ್ನು ಯಾವಾತ್ತಾದರು ನೋಡಿದ್ದೀರಾ ಇಲ್ಲ ಎಂದಾದರೆ ಇಲ್ಲಿ ಅಂತಹ ಒಂದು ವಿಡಿಯೋ ಇದೆ. ಇದನ್ನು ಉದ್ಯಮಿ ಆನಂದ್ ಮಹೀಂದ್ರಾ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದ ಹಿನ್ನೆಲೆಯಲ್ಲಿ ಬಾಲಿವುಡ್ ಕ್ಲಾಸಿಕ್ ಸಿನಿಮಾ ಶೋಲೆಯ ಪ್ರಸಿದ್ಧ ಹಾಡು 'ಯೇ ದೋಸ್ತಿ ಹಮ್ ನಹಿ ತೋಡೆಂಗೆ' ಕೇಳಿ ಬರುತ್ತಿದೆ. ಇಬ್ಬರು ಮಕ್ಕಳು ರಸ್ತೆಯ ಮೇಲೆ ಒಂದು ಸೈಕಲ್ ಅನ್ನು ಒಟ್ಟಿಗೆ ತುಳಿಯುತ್ತಾ ಸವಾರಿ ಮಾಡುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಬಿಲಿಯನೇರ್ ಉದ್ಯಮಿ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸದಾ ಆಕ್ಟಿವ್ ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ಫೋಟೋ ವಿಡಿಯೋಗಳನ್ನು ಅವರು ಶೇರ್ ಮಾಡುತ್ತಲೇ ಇರುತ್ತಾರೆ. ಹಾಗೆಯೇ ಇಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷರು ಇಬ್ಬರು ದೇಸಿ ಹುಡುಗರು ಒಟ್ಟಿಗೆ ಬೈಸಿಕಲ್ ಸವಾರಿ ಮಾಡುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
Even Harvard Business School would not have a better video to communicate the virtues of collaboration & teamwork! pic.twitter.com/ALBRYRCFN0
— anand mahindra (@anandmahindra)ಜಗತ್ತಿನಲ್ಲೇ ಅತೀ ಹೆಚ್ಚು ದ್ವಿಚಕ್ರ ವಾಹನವನ್ನು ಭಾರತ ಬಳಸೋದು ಯಾಕೆ ಅಂತಾ ಗೊತ್ತಾಯ್ತಲ್ಲ ಅಂದ್ರು ಆನಂದ್ ಮಹೀಂದ್ರಾ!
ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಸಹ ಸಹಯೋಗ ಮತ್ತು ಟೀಮ್‌ವರ್ಕ್‌ನ ಸದ್ಗುಣಗಳನ್ನು ಸಂವಹನ ಮಾಡಲು ಇಂತಹ ಉತ್ತಮ ವೀಡಿಯೊವನ್ನು ಹೊಂದಿರುವುದಿಲ್ಲ ಎಂದು ಬರೆದು ಆನಂದ್ ಉದ್ಯಮಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮೂಲತಃ ದಿ ಬೆಟರ್ ಇಂಡಿಯಾ ಹಂಚಿಕೊಂಡಿರುವ ಈ ವೀಡಿಯೊವನ್ನು ನಾಲ್ಕು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಬಾಲಿವುಡ್ ಕ್ಲಾಸಿಕ್ ಶೋಲೆಯ ಪ್ರಸಿದ್ಧ ಹಾಡು 'ಯೇ ದೋಸ್ತಿ ಹಮ್ ನಹಿ ತೋಡೆಂಗೆ' ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದಾರೆಎ. ಇತ್ತ ಇಬ್ಬರು ಮಕ್ಕಳು ಒಬ್ಬ ಸೈಕಲ್‌ನ ಬಲಭಾಗದ ಪೆಡಲ್ ಹಾಗೂ ಇನ್ನೊಬ್ಬ ಸೈಕಲ್‌ನ ಎಡಭಾಗದ ಪೆಡಲ್‌ನ್ನು ಮೆಟ್ಟುತ್ತಾ ಸವಾರಿ ಮಾಡುತ್ತಾರೆ.
ಒಂದೇ ಫೋಟೋದಲ್ಲಿ ಐದು ತಲೆಮಾರು: ಆನಂದ್ ಮಹೀಂದ್ರಾ ಏನಂದ್ರು ನೋಡಿ
ಕೆಲ ದಿನಗಳ ಹಿಂದೆ ಆನಂದ್ ಮಹೀಂದ್ರಾ ಪುಟ್ಟ ಬಾಲಕ ಶ್ರಮಪಟ್ಟು ಮೀನು ಹಿಡಿಯುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋದಲ್ಲಿ ಕಾಣಿಸುವಂತೆ ಬಾಲಕ ನದಿ ಅಥವಾ ಕೆರೆಯ ಬಳಿ ತೆರಳಿ ಮೀನು ಹಿಡಿಯುವ ಸ್ವಯಂ ನಿರ್ಮಿತ ಉಪಕರಣವನ್ನು ಕಿನಾರೆಯ ಬಳಿ ಇಟ್ಟು ಅದಕ್ಕೆ ಗುದ್ದಲಿಯಿಂದ ಹೊಡೆದು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತಾನೆ. ನಂತರ ಮೀನು ಹಿಡಿಯುವುದಕ್ಕಾಗಿ ಮನೆಯಿಂದ ಪಾತ್ರೆಯೊಂದರಲ್ಲಿ ತೆಗೆದುಕೊಂಡು ಬಂದಂತಹ ಆಹಾರವನ್ನು ಮೀನು ಹಿಡಿಯುವ ಗಾಳದ ತುದಿಗೆ ಸಿಕ್ಕಿಸುತ್ತಾನೆ. ನಂತರ ಗಾಳವನ್ನು ತುಂಬಾ ವೇಗವಾಗಿ ನೀರಿನತ್ತ ಎಸೆಯುತ್ತಾನೆ. ಹೀಗೆ ಎಸೆದ ಕೆಲ ಸೆಕೆಂಡುಗಳಲ್ಲಿ ಬಾಲಕ ಗಾಳವನ್ನು ಶ್ರಮಪಟ್ಟು ಹಿಡಿದು ಎಳೆಯುತ್ತಾನೆ. ಈ ವೇಳೆ ಗಾಳದಲ್ಲಿ ಎರಡು ದೊಡ್ಡದಾದ ಮೀನುಗಳು ಸಿಲುಕಿಕೊಳ್ಳುತ್ತದೆ. ನಂತರ ಗಾಳದಿಂದ ಮೀನನ್ನು ತೆಗೆಯುವ ಬಾಲಕ ತನ್ನ ಚೀಲಕ್ಕೆ ಮೀನನ್ನು ತುಂಬಿಸುತ್ತಾನೆ.
ಈ ವಿಡಿಯೋ ನೋಡುವುದಕ್ಕೆ ಸರಳವಾಗಿ ಕಾಣಬಹುದು. ಆದರೆ ಅದರ ಹಿಂದೆ ಯಶಸ್ಸಿನತ್ತ ಸಾಗಲು ಏನು ಬೇಕು ಎಂಬ ಬಗ್ಗೆ ಒಂದು ಆಳವಾದ ಸಂದೇಶವಿದೆ. ಈ ವಿಡಿಯೋ ನನ್ನ ಇನ್‌ಬಾಕ್ಸ್‌ಗೆ ಬಂದಿದೆ. ಹೆಚ್ಚುತ್ತಿರುವ ಸಂಕೀರ್ಣ ಜಗತ್ತಿನಲ್ಲಿ ಇದೊಂದು ವಿಚಿತ್ರವಾಗಿದೆ. ದೃಢಸಂಕಲ್ಪ + ಜಾಣ್ಮೆ + ತಾಳ್ಮೆ = ಯಶಸ್ಸು ಅಂದರೆ ದೃಢಸಂಕಲ್ಪ , ಜಾಣ್ಮೆ , ತಾಳ್ಮೆ ಯಶಸ್ಸು ಜೊತೆ ಗೂಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಈ ವಿಡಿಯೋದ ಸಂದೇಶವಾಗಿದೆ ಎಂದು ಬರೆದುಕೊಂಡು ಆನಂದ್ ಮಹೀಂದ್ರಾ ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ.