ಫೋನ್‌ನಲ್ಲಿ ಮಾತನಾಡುತ್ತಾ ಮ್ಯಾನ್‌ಹೋಲ್‌ ಒಳಗೆ ಬಿದ್ದ ಮಹಿಳೆ

By Anusha Kb  |  First Published Apr 24, 2022, 3:05 PM IST
  • ರಸ್ತೆ ಮಧ್ಯೆ ಇದ್ದ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ
  • ಫೋನ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಅವಘಡ
  • ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಪಾಟ್ನಾ: ಮಹಿಳೆಯೊಬ್ಬರು ತಮ್ಮ ಫೋನ್‌ನಲ್ಲಿ ಮಾತನಾಡುತ್ತಾ ಹೋಗುತ್ತಿರುವ ವೇಳೆ ರಸ್ತೆ ಮಧ್ಯೆ ಇದ್ದ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾರೆ. ಈ ಆಘಾತಕಾರಿ ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ (social media) ವೈರಲ್ ಆಗಿದೆ. ಬಿಹಾರದ (Bihar) ಪಾಟ್ನಾದಲ್ಲಿ (Patna) ವಾರ್ಡ್-56ರ ವ್ಯಾಪ್ತಿಯ ಮಲಿಯಾ ಮಹಾದೇವ್ ಜಲ್ಲಾ ರಸ್ತೆಯಲ್ಲಿ  (Malia Mahadev Jalla Road) ಶುಕ್ರವಾರ ಈ ಘಟನೆ ನಡೆದಿದೆ.

ಮಹಿಳೆ ತನ್ನ ಫೋನ್‌ನಲ್ಲಿ ಮಾತನಾಡುತ್ತಾ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ, ಅದೇ ರಸ್ತೆಯಲ್ಲಿ ವಾಹನಗಳು ಜನರೊಂದಿಗೆ ಚಲಿಸುತ್ತಿವೆ. ಮಹಿಳೆಯ ಮುಂದೆ ಒಂದು ಆಟೋ ರಿಕ್ಷಾ ಹೋಗಿದೆ. ಆ ಆಟೋದ ಹಿಂದೆಯೇ ಬೇರೆಲ್ಲೋ ನೋಡುತ್ತಾ ಫೋನ್‌ನಲ್ಲಿ ಮಾತನಾಡುತ್ತಾ ಮಹಿಳೆ ಹೋಗಿದ್ದು, ಮ್ಯಾನ್‌ಹೋಲ್ ಗಮನಿಸದೇ ಅದರೊಳಗೆ ಬಿದ್ದಿದ್ದಾಳೆ. 

Tap to resize

Latest Videos

ಮೊಬೈಲ್ ಬಳಸ್ತಾ ಮಗು ಸಮೇತ ಫುಟ್‌ಪಾತ್‌ನಲ್ಲಿದ್ದ ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆ
ಕೂಡಲೇ ಸಮೀಪದಲ್ಲಿ ನಡೆದಾಡುತ್ತಿದ್ದ ಜನರು ಆಕೆಯನ್ನು ರಕ್ಷಿಸಲು ಧಾವಿಸಿ ಬಂದಿದ್ದಾರೆ ಮತ್ತು ಆಕೆಯ ಸುತ್ತಲೂ ಗುಂಪು ಜಮಾಯಿಸಿದೆ. ಕೆಲವರು ಅವಳತ್ತ ಕೈ ಚಾಚಿ ಅವಳನ್ನು ಮೇಲಕ್ಕೆ ಎಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಮಹಿಳೆಯನ್ನು ಮೇಲೆಳೆದ ನಂತರ ಅಲ್ಲಿದ್ದವರು ಮ್ಯಾನ್‌ಹೋಲ್ ಅನ್ನು ದೊಡ್ಡ ಹೆಂಚಿನ ತುಂಡಿನಿಂದ ಮುಚ್ಚಿದ್ದು, ಇನ್ನೊಮ್ಮೆ ಇಂತಹ ಅನಾಹುತ ಆಗದಂತೆ ಮುಂಜಾಗೃತೆ ವಹಿಸಿದರು.

ವರದಿಗಳ ಪ್ರಕಾರ ಒಳಚರಂಡಿ ಕಾಮಗಾರಿಗಾಗಿ ಮ್ಯಾನ್‌ಹೋಲ್‌ ತೆರೆಯಲಾಗಿತ್ತು. ಆದರೆ ಕಾಮಗಾರಿ ಮುಗಿದ ನಂತರ ಮುಚ್ಚದೇ ಬೇಜಾವಾಬ್ದಾರಿ ತೋರಿದ್ದರಿಂದ ಈ ಅನಾಹುತ ಸಂಭವಿಸಿದೆ. ಸ್ಥಳೀಯರು ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪುರಸಭೆ (municipality) ಯಾವುದೇ ಕ್ರಮ ಕೈಗೊಂಡಿಲ್ಲ.

Watch: A woman falls into an open manhole in Patna on Friday. This comes a day after a toddler died after falling into a borewell in the capital. pic.twitter.com/PHvCYYMWKF

— TOI Patna (@TOIPatna)

 

ಈ ಘಟನೆಯನ್ನು  ವರದಿ ಮಾಡಿದ ಮಿರರ್ ನೌ ವರದಿಗಾರ, ಪಾಟ್ನಾದ ಅನೇಕ ಬೀದಿಗಳಲ್ಲಿ ಈ ಪರಿಸ್ಥಿತಿ ಇದೆ ಎಂದು ಹೇಳಿದ್ದಾರೆ. ನಗರದಲ್ಲಿ ತೆರೆದ ಮ್ಯಾನ್‌ಹೋಲ್‌ಗಳು ಮಾಮೂಲಿಯಾಗಿವೆ. ರಾತ್ರಿಯ ಸಮಯದಲ್ಲಿ ಮ್ಯಾನ್‌ಹೋಲ್‌ (manhole) ನೋಡಲು ಕಷ್ಟವಾಗಿರುವುದರಿಂದ ಮತ್ತು ಜನರನ್ನು ಎಚ್ಚರಿಸಲು ಬ್ಯಾರಿಕೇಡ್‌ಗಳಿಲ್ಲದ ಕಾರಣ  ಪರಿಸ್ಥಿತಿ ಹದಗೆಡುತ್ತದೆ. ದಾರಿಹೋಕರು ಸುಲಭವಾಗಿ ಇದರೊಳಗೆ ಬೀಳಬಹುದು.

Manhole Tragedy in Mysuru : ಉಸಿರುಗಟ್ಟಿ ಪೌರಕಾಮಿರ್ಕ ಸಾವು : ಪರಿಹಾರಕ್ಕೆ ಒತ್ತಾಯ
ಕೆಲ ದಿನಗಳ ಹಿಂದೆ ಚರಂಡಿ ಮೇಲಿನ ಸಿಮೆಂಟ್ ಸ್ಲಾಬ್‌ ಕುಸಿದು ಐವರು ಚರಂಡಿಯೊಳಗೆ ಬಿದ್ದ ಘಟನೆ ರಾಜಸ್ಥಾನದ ಜೈಸಲ್ಮೇರ್‌ನ ಬಾಬಾ ಬಾವಡಿ (Baba bavadi) ಪ್ರದೇಶದಲ್ಲಿ  ನಡೆದಿತ್ತು, ಘಟನೆಯಲ್ಲಿ ಐವರು ಪುರುಷರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.  ರಾಜಸ್ಥಾನದ (Rajasthan) ಜೈಸಲ್ಮೇರ್‌ನಲ್ಲಿ (Jaisalmer) ಈ ತಿಂಗಳ ಆರಂಭದಲ್ಲಿ ನಡೆದ ಘಟನೆ ಇದಾಗಿದೆ. ಆ ಸಂದರ್ಭದಲ್ಲಿ ಸ್ಥಳೀಯ ಸಿಸಿಟಿವಿಯಲ್ಲಿ(Cctv) ಸೆರೆಯಾಗಿದ್ದ ಈ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಸಮಯದಂತೆ ಈ ಘಟನೆ ಏಪ್ರಿಲ್ 7 ರಂದು ರಾತ್ರಿ 9.30 ರ ಸುಮಾರಿಗೆ ಸಂಭವಿಸಿದೆ. ಬೈಕ್ ರಿಪೇರಿ ಅಂಗಡಿಯಂತೆ ಕಾಣುವ ಸ್ಥಳದಲ್ಲಿ ನಾಲ್ಕು ಪುರುಷರು ನಿಂತು ಹರಟೆ ಹೊಡೆಯುತ್ತಿರುವುದನ್ನು ಕಾಣಬಹುದು. ಒಬ್ಬ ವ್ಯಕ್ತಿ ವಾಹನವನ್ನು ರಿಪೇರಿ ಮಾಡುತ್ತಾ ನೆಲದ ಮೇಲೆ ಕುಳಿತಿದ್ದಾನೆ. ಉಳಿದವರು ಆತನ ಮುಂದೆ ನಿಂತು ಹರಟೆ ಹೊಡೆಯುತ್ತಿದ್ದಾರೆ. ಈ ವೇಳೆ ಇದ್ದಕ್ಕಿದ್ದಂತೆ ಅವರು ನಿಂತಿದ್ದ ಕಾಂಕ್ರೀಟ್ ಸ್ಲಾಬ್‌ಗಳು ಕುಸಿದಿದ್ದು, ಎಲ್ಲರೂ ಚರಂಡಿಯೊಳಗೆ ಬಿದ್ದಿದ್ದಾರೆ. ರಿಪೇರಿ ಮಾಡುತ್ತಿದ್ದ ಬೈಕ್ ಅವರ ಮೇಲೆ ಬಿದ್ದಿದೆ.

click me!