ಭಾರತ ದೂಷಿಸುತ್ತಿರುವ ವಿಶ್ವ ಮಾಧ್ಯಮಗಳ ವಿರುದ್ಧ ಮಾಥ್ಯೂ ಹೇಡರ್ ಗರಂ
ಕೊರೋನಾ ಹೋರಾಟ ಬೆಂಬಲಿಸಿ ಭಾವನಾತ್ಮಕ ಪತ್ರ ಬರೆದ ಆಸೀಸ್ ಕ್ರಿಕೆಟಿಗ
ಶೀಘ್ರದಲ್ಲೇ ಭಾರತ ಕೊರೋನಾ ಯುದ್ಧದಲ್ಲಿ ಗೆಲುವು ಸಾಧಿಸಲಿದೆ
ನವದೆಹಲಿ(ಮೇ.16): ಭಾರತದಲ್ಲಿ ಎದ್ದಿರವ 2ನೇ ಕೊರೋನಾ ಅಲೆಯನ್ನು ದೇಶ ಸಮರ್ಥವಾಗಿ ಎದುರಿಸುತ್ತಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಸಮಸ್ಯೆಗಳು ನೂರೆಂಟು. ಆದರೆ ಹೋರಾಟ ನಿರಂತರವಾಗಿ ಸಾಗುತ್ತಿದೆ. ಇದೇ ಅವಕಾಶವನ್ನು ಬಳಸಿಕೊಂಡ ಹಲವು ಭಾರತದ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡುತ್ತಿದ್ದಾರೆ. ಇದಕ್ಕೆ ವಿಶ್ವ ಮಾಧ್ಯಮಗಳು ಕೈಜೋಡಿಸಿದೆ ಅನ್ನೋ ಮಾತುಗಳು ಇದೀಗ ಬಲಗೊಳ್ಳುತ್ತಿದೆ. ಹೀಗೆ ಭಾರತವನ್ನು ಅವಮಾನಿಸುತ್ತಿರುವ ವಿಶ್ವ ಮಾಧ್ಯಮಕ್ಕೆ ಆಸ್ಟ್ರೇಲಿಯಾ ಕ್ರಿಕೆಟಿಗ ಮಾಥ್ಯೂ ಹೇಡನ್ ಚಾಟಿ ಬೀಸಿದ್ದಾರೆ. ಹೇಡನ್ ಪತ್ರವನ್ನು ಮಹೀಂದ್ರ ಕಂಪನಿ ಚೇರ್ಮೆನ್ ಆನಂದ್ ಮಹೀಂದ್ರ ಹಂಚಿಕೊಂಡಿದ್ದಾರೆ. ಹೇಡನ್ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ಧನ್ಯವಾದ ಎಂದು ಮಹೀಂದ್ರ ಹೇಳಿದ್ದಾರೆ.
Extracts from a heartfelt blog on India by A cricketer whose heart is even bigger than his towering physical stature. Thank you for the empathy and your affection... pic.twitter.com/h671mKYJkG
— anand mahindra (@anandmahindra)Oxygen On wheels: ಮಹೀಂದ್ರಾ ಕಂಪನಿಯಿಂದ ಆಕ್ಸಿಜನ್ ಪೂರೈಕೆ
ಭಾರತದ ಕೊರೋನಾ ಪರಿಸ್ಥಿತಿ ಹಾಗೂ ಕೊರೋನಾ ಹೋರಾಟ ಬೆಂಬಲಿಸಿ ಹೇಡನ್ ಭಾವನಾತ್ಮಕ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಹೇಡನ್ 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತ ಕೊರೋನಾ ಎದಿರಿಸುತ್ತರುವ ರೀತಿ, ಭಾರತೀಯರ ಪ್ರೀತಿ ಕುರಿತು ಉಲ್ಲೇಖಿಸಿದ್ದಾರೆ. ಪಾಶ್ಚಿಮಾತ್ಯ ಮಾಧ್ಯಮಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಅವಾಮಾನಿಸುವ ಪ್ರಯತ್ನ ಮಾಡುತ್ತಿದೆ ಎಂದು ಹೇಡನ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಹೇಡನ್ ಪತ್ರದ ವಿವರ:
ಕೊರೋನಾ 2ನೇ ಅಲೆಯಿಂದ ಭಾರತ ಸಂಕಷ್ಟದಲ್ಲಿದೆ. ಸಾಂಕ್ರಾಮಿಕ ರೋಗದ ವಿರುದ್ಧ ನಿರಂತರ ಹೋರಾಟ ಮಾಡುತ್ತಿದೆ. ಆದರೆ ಇದೇ ಸಂದರ್ಭವನ್ನು ಬಳಸಿಕೊಂಡ ಪಾಶ್ಚಿಮಾತ್ಯ ಮಾಧ್ಯಮಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಅವಮಾನಿಸಲು, ಅತ್ಯಂತ ಕೆಟ್ಟದಾಗಿ ಚಿತ್ರಿಸುವ ಪ್ರಯತ್ನ ಮಾಡುತ್ತಿದೆ. 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಯೋಜನೆ ಅನುಷ್ಠಾನ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳನ್ನು ಮೆಟ್ಟಿ ನಿಂತು ಭಾರತದ ಆಡಳಿತ ವರ್ಗ, ಅಧಿಕಾರಿಗಳು, ನಾಯಕರು ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಇವರ ಬಗ್ಗೆ ನನಗೆ ಗೌರವವಿದೆ. ಕ್ರಿಕೆಟ್, ಐಪಿಎಲ್ ಸೇರಿದಂತೆ ಕಳೆದ ಒಂದು ದಶಕಕದಿಂದ ನಿರಂತರವಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ವೈವಿದ್ಯ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಆಳ ಇಳಿದರಷ್ಟೆ ತಿಳಿಯುತ್ತಿದೆ. ತಮಿಳುನಾಡನ್ನು ನನ್ನ ಆಧ್ಯಾತ್ಮದ ನೆಲೆ ಎಂದು ಪರಿಗಣಿಸುತ್ತೇನೆ.
ಒಂದು ವಾರದಲ್ಲಿ 11 ಕೋಟಿ ರೂ ದೇಣಿಗೆ ಸಂಗ್ರಹಿಸಿದ ವಿರುಷ್ಕಾ ಜೋಡಿ..!
ಪ್ರತಿ ಬಾರಿ ಭಾರತಕ್ಕೆ ಭೇಟಿ ನೀಡಿದಾಗ ಅಷ್ಟೇ ಆತ್ಮೀಯದಿಂದ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಜನರು ಅಪಾರ ಪ್ರೀತಿ ತೋರಿಸಿದ್ದಾರೆ. ಐಪಿಎಲ್ ಟೂರ್ನಿಯಂದ ಭಾರತದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದೇನೆ. ನನ್ನ ದೇಶದ ಹಲವರು ಐಪಿಎಲ್ ಟೂರ್ನಿ ಆಡುತ್ತಿದ್ದಾರೆ. ಕ್ರಿಕೆಟ್ ಕಾರಣ ನಾನು ಭಾರತವನ್ನು ಹತ್ತಿರದಿಂದ ನೋಡಿದ್ದೇನೆ. ಅಲ್ಲಿನ ಆಚಾರ ವಿಚಾರಗಳ, ವ್ಯವಸ್ಥೆಗಳ ಕುರಿತು ಅರಿತುಕೊಂಡಿದ್ದೇನೆ. ಆದರೆ ಸದ್ಯ ಭಾರತ ಸಾಂಕ್ರಾಮಿಕ ಪಿಡುಗಿನ ನಡುವೆ ಸಿಲುಕಿದೆ.
ಈ ಸಂಕಷ್ಟದ ಸಮಯದಲ್ಲಿ ಭಾರತದ ಎದುರಿಸುತ್ತಿರುವ ಸವಾಲುಗಳ ಕುರಿತು ಅರ್ಥ ಮಾಡಿಕೊಳ್ಳದೆ ತಮ್ಮ ಮೂಗಿನ ನೇರಕ್ಕೆ ವಿಚಾರ ಹಂಚುತ್ತಿದೆ. ಅಲ್ಲಿನ ಸವಾಲುಗಳನ್ನು ಅರ್ಥ ಮಾಡಿಕೊಳ್ಳುವ ಯಾವ ಪ್ರಯತ್ನವನ್ನು ಯಾವ ಪಾಶ್ಚಿಮಾತ್ಯ ಮಾಧ್ಯಮಗಳು ಮಾಡುತ್ತಿಲ್ಲ. ಆದರೆ ಭಾರತವನ್ನೇ ಅರ್ಥ ಮಾಡಿಕೊಳ್ಳದ ವಿದೇಶಿ ಮಾಧ್ಯಮಗಳು ಭಾರತದ ವಿರುದ್ಧ ಪಿತೂರಿ ಮಾಡುತ್ತಿದೆ. ಇದನ್ನು ನೋಡುವಾಗಿ ನನಗೆ ಹೇಳಬೇಕು ಎಂದೆನಿಸಿತು.
ಸೆಕೆಂಡ್ ಡೋಸ್‌ಗೂ ಇಲ್ಲ ಲಸಿಕೆ : ಎಲ್ಲಾ ಕಡೆ ನೋ ಸ್ಟಾಕ್ ಬೋರ್ಡ್
ನಾನು ಉತ್ತಮ ಡೇಟಾ ಸಂಗ್ರಹಕಾರ ಅಲ್ಲ, ಆದರೆ ನನಗೆ ಲಭ್ಯವಿರವ ಮಾಹಿತಿ ಪ್ರಕಾರ ಭಾರತ ಈಗಾಗಲೇ 160 ಮಿಲಿಯನ್ ಮಂದಿಗೆ ಮಂದಿಗೆ ಲಸಿಕೆ ನೀಡಿದೆ. ಇದು ಆಸ್ಟ್ರೇಲಿಯಾ ಜನಸಂಖ್ಯೆಗಿಂತ 5 ಪಟ್ಟು ಹೆಚ್ಚು. ಪ್ರತಿ 1.3 ಮಿಲಿಯನ್ ಮಂದಿಯ ಕೊರೋನಾ ಟೆಸ್ಟ್ ಮಾಡಿಸುತ್ತಿದೆ. ಇಲ್ಲಿ ನಾನು ಹೇಳಬಯಸುತ್ತಿರುವುದು ಸಂಖ್ಯೆ ಅಲ್ಲ, ಭಾರತ ಪ್ರತಿ ದಿನ ಎದುರಿಸುತ್ತಿರು ಸವಾಲು.
ಭಾರತದ ಕುರಿತು ಒಂದು ಪದ ಅಂದರೆ ನನ್ನ ನೆನಪಿಗೆ ಬರುವುದು ಇನ್‌ಕ್ರೆಡಿಬಲ್ . ಇದು ಭಾರತದ ಪ್ರವಾಸೋದ್ಯದ ಟ್ಯಾಗ್‌ಲೈನ್ ಕೂಡ ಆಗಿದೆ. ಆದರೆ ಆಸೀಸ್ ಪ್ರಧಾನ ಮಂತ್ರಿ ಇತ್ತೀಚೆಗೆ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ್ದರು. ಇದು ಪ್ರಾಚೀನ ನಾಗರೀಕತೆಯನ್ನು ಪ್ರದರ್ಶಿಸುತ್ತದೆ.
ಭಾರತ ಅತ್ಯಂತ ಶ್ರೇಷ್ಠ ನಾಗರೀಕತೆಯನ್ನು ಹೊಂದಿದೆ. ಸಾಂಸ್ಕೃತಿಕ, ಪ್ರಾದೇಶಿಕ, ವಿವಿದ ಭಾಷೆಗಳ, ವಿವಿಧ ರಾಜ್ಯಗಳ ದೇಶ ಭಾರತ. ಇದರ ಜೊತೆಗೆ ಆಡಳಿತಾತ್ಮಕ ಸವಾಲುಗಳನ್ನು ಹೊಂದಿರುವ ದೇಶ. ಹೀಗಾಗಿ ಭಾರತದ ವಿರುದ್ಧ ಪ್ರತಿಕ್ರಿಯೆ, ಟೀಕೆ ಮಾಡುವಾಗ ಇವೆಲ್ಲವನ್ನು ಅರಿತಕೊಳ್ಳುವುದು ಉತ್ತಮ.
ಹೇಡನ್ ಸುದೀರ್ಘ ಪತ್ರಕ್ಕೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆನಂದ್ ಮಹೀಂದ್ರ ಹೇಡನ್ ಪತ್ರವನ್ನು ತಮ್ಮ ಟ್ವಿಟರ್ ಖಾತೆ ಮೂಲಕ ಹಂಚಿಕೊಂಡು ಧನ್ಯವಾದ ಹೇಳಿದ್ದಾರೆ.