2 ವರ್ಷ ಬಳಿಕ ಭಾರತದ ಅಕ್ಕಿ ಖರೀದಿಸಿದ ಚೀನಾ!| ಗಡಿ ಬಿಕ್ಕಟ್ಟಿನ ಮಧ್ಯೆಯೇ ಭಾರತದ ಜೊತೆ ವ್ಯವಹಾರ
ನವದೆಹಲಿ(ಡಿ.03): ಉಭಯ ದೇಶಗಳ ಗಡಿ ಬಿಕ್ಕಟ್ಟು ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇರುವ ಹಂತದಲ್ಲಿಯೇ ಭಾರತದಿಂದ 2 ವರ್ಷಗಳ ಬಳಿಕ ಬಾಸುಮತಿ ಅಕ್ಕಿಯನ್ನು ಹೊರತುಪಡಿಸಿದ 5000 ಟನ್ ನುಚ್ಚು ಅಕ್ಕಿಯನ್ನು ಚೀನಾ ಆಮದು ಮಾಡಿಕೊಳ್ಳಲಿದೆ.
ಗಲ್ವಾನ್ ಸಂಘರ್ಷ, ಚೀನಾ ರೂಪಿಸಿದ್ದ ಷಡ್ಯಂತ್ರ: ಡ್ರ್ಯಾಗನ್ ಬಣ್ಣ ಬಯಲು ಮಾಡಿದ ದೊಡ್ಡಣ್ಣ!
undefined
ವಿಶ್ವದಲ್ಲೇ ಅತಿ ಹೆಚ್ಚು ಅಕ್ಕಿ ಆಮದು ಮಾಡಿಕೊಳ್ಳುವ ಚೀನಾದಲ್ಲೀಗ ಅಕ್ಕಿಯ ಕೊರತೆ ಉಂಟಾಗಿದೆ. ಚೀನಾದಲ್ಲಿ ನುಚ್ಚು ಅಕ್ಕಿಯಿಂದ ನ್ಯೂಡಲ್ ಹಾಗೂ ವೈನ್ ಅನ್ನು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಥಾಯ್ಲೆಂಡ್, ವಿಯೆಟ್ನಾಮ್, ಮಾನ್ಮಾರ್ ಮತ್ತು ಪಾಕಿಸ್ತಾನದಿಂದ ಚೀನಾ ಅಕ್ಕಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ, ಈ ದೇಶಗಳಿಗೆ ಹೋಲಿಸಿದರೆ ಭಾರತ ಅತಿ ಕಡಿಮೆ ದರಕ್ಕೆ ಅಕ್ಕಿಯನ್ನು ಮಾರುತ್ತಿದೆ. ಹೀಗಾಗಿ ಭಾರತದ ಅಕ್ಕಿಗೆ ಚೀನಾ ಬೇಡಿಕೆ ಇಟ್ಟಿದೆ.
ಕೊಟ್ಟ ನಿವೇಶನ ಕಸಿದ ನಗರಸಭೆ : ಬೀದಿಗೆ ಬಂತು ಮಾಜಿ ಸೈನಿಕನ ಕುಟುಂಬ!
2006ರಲ್ಲಿ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಚೀನಾ ತನ್ನ ದೇಶದ ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ, 2018ರಲ್ಲಿ ಭಾರತದಿಂದ 974 ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿದ್ದ ಚೀನಾ ಕಳಪೆ ಗುಣಮಟ್ಟದ ಕಾರಣ ನೀಡಿ ಭಾರತದಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತ್ತು. 2 ವರ್ಷದ ಬಳಿಕ ಮತ್ತೊಮ್ಮೆ ಅಕ್ಕಿ ಆಮದು ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.