
ನವದೆಹಲಿ(ಡಿ.03): ಮಸಾಲಾ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ MDH ಸಂಸ್ಥೆಯ ಮಾಲೀಕ ಮಹಾಶಯ್ ಧರಂಪಾಲ್ ಗುಲಾಟಿ(98) ಗುರುವಾರದಂದು ದೆಹಲಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ದೆಹಲಿಯ ಮಾತಾ ಚಂದನ್‌ದೇವಿ ಆಸ್ಪತ್ರೆಯಲ್ಲಿ ಡಿಸೆಂಬರ್ 3ರಂದು ಬೆಳಗ್ಗೆ ಆರು ಗಂಟೆಗೆ ಅವರು ನಿಧರಾಗಿದ್ದಾರೆ.
ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದರು MDH ತಾತ
ಮಹಾಶಯ್ ಧರಂಪಾಲ್ ಗುಲಾಟಿ 1923ರ ಮಾರ್ಚ್ 27 ರಂದು ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದ್ದರು. ಇಲ್ಲಿಂದಲೇ ಅವರು ಈ ಮಸಾಲೆ ಉದ್ಯಮ ಆರಂಭಿಸಿದ್ದರು. ಕಂಪನಿ ಅಲ್ಲಿನ ನಗರಲ್ಲಿದ್ದ ಒಂದು ಪುಟ್ಟ ಅಂಗಡಿಯಿಂದ ಆರಂಭವಾಗಿದ್ದು, ಇದನ್ನು ಅವರ ತಂದೆ ಪಾಕಿಸ್ತಾನ, ಭಾರತ ವಿಭಜನೆಗೂ ಮೊದಲು ಆರಂಭಿಸಿದ್ದರು. ಆದರೆ 1947ರ ವಿಭಜನೆ ವೇಳೆ ಅವರ ಕುಟುಂಬ ಭಾರತಕ್ಕೆ ಬಂತು.
ಹೃದಯದಲ್ಲಿಲ್ಲ ಖಾರ: ಸುಷ್ಮಾ ಅಗಲಿಕೆಗೆ ಪುಟ್ಟ ಕಂದನಂತೆ ಅತ್ತ MDH ತಾತ!
ದೆಹಲಿಯ ಕರೋಲ್‌ಭಾಗ್‌ನಲ್ಲಿ ಮಸಾಲೆ ಅಂಗಡಿ ಆರಂಭ
ದೆಹಲಿಗೆ ಬಂದಿದ್ದ ಗುಲಾಟಿಯವರು ಇಲ್ಲಿನ ಕರೋಲ್‌ಭಾಗ್‌ನಲ್ಲಿ ಪುಟ್ಟ ಮಸಾಲೆ ಅಂಗಡಿಯನ್ನು ತೆರೆದಿದ್ದರು. 1953ರಲ್ಲಿ ಅವರು ಚಾಂದಿನಿ ಚೌಕ್‌ನಲ್ಲಿ ಮತ್ತೊಂದು ಶಾಪ್ ಬಾಡಿಗೆಗೆ ಪಡೆದುಕೊಂಡರು. 1959 ರಲ್ಲಿ ಮತ್ತೆ ಅವರು ಮಹಾಶಿವ್ ದಿ ಹಟ್ಟಿ ತೆರೆಯಲು ಕೀರ್ತಿ ನಗರದಲ್ಲಿ ಜಮೀನು ಖರೀದಿಸಿದರು. ಇದಾದ ಬಳಿಕ ಅವರ ಉದ್ಯಮ ಮುಂದುವರೆಯುತ್ತಲೇ ಹೋಯ್ತು.
ಪದ್ಮವಿಭೂಷಣ ಗೌರವ
ವ್ಯಾಪಾರ ಮತ್ತು ಕೈಗಾರಿಕೆ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡಿದ ಮಹಾಶಯ್ ಧರಂಪಾಲ್ ಗುಲಾಟಿಯವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ ವರ್ಷ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ