ನವದೆಹಲಿ(ಜೂ. 19) ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ನಡೆಯುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಮಾತ್ರ ತರೇವಾರಿ ಹೇಳಿಕೆ ನೀಡುತ್ತಲೇ ಇದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡುವುದಕ್ಕೆ ಪ್ರಸಿದ್ಧರಾಗಿರುವ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಈ ಬಾರಿ ಭಾರತೀಯ ಸೇನೆಯ ಬಗ್ಗೆಯೇ ಮಾತನಾಡಿದ್ದಾರೆ.
'ನಮ್ಮ ಸೈನಿಕರಿಗೆ ಹೋರಾಡಲು ಅವಕಾಶವೇ ಸಿಗಲಿಲ್ಲ' ಎಂಬ ಹೇಳಿಕೆ ನೀಡಿದ್ದು ಟೀಕೆ ಎದುರಿಸುತ್ತಿದ್ದಾರೆ. ಮುಂದುವರಿದು ಚೀನಾದ ಕಡೆಯ ಯಾವ ಸೈನಿಕರು ಮೃತರಾಗಿಲ್ಲ, ಅವರಿಗೆ ಗಾಯಗಳು ಆಗಿಲ್ಲ ಎಂದಿದ್ದಾರೆ.
ಚೀನಾ ಸೊಕ್ಕು ಮುರಿಯಲು 52 ಅಸ್ತ್ರಗಳು
ಸೈನಿಕರು ದೊಣ್ಣೆಗಳನ್ನು ಯಾಕೆ ತೆಗೆದುಕೊಂಡು ಹೋದರು? ಸೈನಿಕರೇನು ಆರ್ ಎಸ್ ಎಸ್ ಕಾರ್ಯಕರ್ತರೆ? ಕೇಂದ್ರ ಸರ್ಕಾರ ಆರ್ ಎಸ್ ಎಸ್ ಕಾರ್ಯಕರ್ತರ ಕೈಯಲ್ಲಿ ಕೋಲು ಹಿಡಿಸಿ ಗಡಿ ರಕ್ಷಣೆಗೆ ಕಳುಹಿಸಬೇಕು ಎಂದಿದ್ದಾರೆ.
ಪ್ರಚೋದನಕಾರಿ ಪೋಸ್ಟ್ ಹಾಕುವುದರಲ್ಲಿ ನಿಸ್ಸೀಮರಾಗಿರುವ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಮಾಜಿ ಕಾರ್ಯಕಾರಿ ನಿರ್ದೇಶಕ ಆಕಾರ್ ಪಟೇಲ್ ಟ್ವೀಟ್ ಮಾಡಿದ್ದು ದೊಡ್ಡ ಸುದ್ದಿಯಾಯಿತು.
ನಮ್ಮ ನಿಜವಾದ ವೈರಿ ಬಿಜೆಪಿ, ಚೀನಾ ಕೇವಲ ಒಂದು ಎದುರಾಳಿ ಅಷ್ಟೇ ಎಂದು ಬರೆದುಕೊಂಡಿದ್ದರು. ಇದಕ್ಕೆ ಕಟುವಾದ ಉತ್ತರ ನೀಡಿದ್ದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ದೇಶದ ಒಳಗಿನ ಇಂಥ ವಿಷಪೂರಿತ ಹಾವುಗಳು ಗಡಿಯಲ್ಲಿ ತೊಂದರೆ ಕೊಡುತ್ತಿರುವವರಿಗಿಂತಲೂ ಅಪಾಯಕಾರಿ ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ