
ನವದೆಹಲಿ(ಜೂ.19): ಕೊರೋನಾ ವೈರಸ್ ಕಾರಣ ಮಾರ್ಚ್ 24 ರಿಂದ ಭಾರತ ಲಾಕ್‌ಡೌನ್‌ಗೆ ಜಾರಿತ್ತು. ಆರ್ಥಿಕತೆ ಮಕಾಡೆ ಮಲಗಿದರೂ, ಕೊರೋನಾ ಮಾತ್ರ ಇನ್ನೂ ಅಬ್ಬರಿಸುತ್ತಲೇ ಇದೆ. ಬರೋಬ್ಬರಿ 4 ಹಂತದದ ಲಾಕ್‌ಡೌನ್ ಅನುಭವನ್ನು ಭಾರತೀಯರೆಲ್ಲರು ಪಡೆದಿದ್ದಾರೆ. ಒಂದು ಹಂತದ ಪ್ರಯೋಗಳೆಲ್ಲಾ ಮುಗಿದ ಬಳಿಕ ಲಾಕ್‌ಡೌನ್ ಸಡಿಲಗೊಳಿಸಲಾಯಿತು. ಇದೀಗ ಅನ್‌ಲಾಕ್ 1 ಕಳೆದು, ಅನ್‌ಲಾಕ್ 2ನತ್ತ ಭಾರತ ದಾಪುಗಾಲಿಡುತ್ತಿದೆ. ಅನ್‌ಲಾಕ್ 2ನಲ್ಲಿ ಕೊರೋನಾಗಿಂತ ಆರ್ಥಿಕ ಮೇಲಕ್ಕೆತ್ತುವ ಯೋಜನೆಗಳಿಗೆ ಮಹತ್ವ ನೀಡಲಾಗುತ್ತದೆ.
ಕೊರೋನಾ ಸೋಂಕಿತ ದೆಹಲಿ ಆರೋಗ್ಯ ಸಚಿವರ ಸ್ಥಿತಿ ಗಂಭೀರ; ಪ್ಲಾಸ್ಮಾ ಥೆರಪಿಗೆ ಮ್ಯಾಕ್ಸ್ ಆಸ್ಪತ್ರೆಗೆ ಶಿಫ್ಟ್!
ಕೊರೋನಾ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ಮುಂದುವರಿಯಲಿದೆ. ಇದರೊಂದಿಗೆ ನಿರ್ಬಂಧ ಹೇರಲಾಗಿದ್ದ ಕ್ಷೇತ್ರಗಳ ನಿಯಮ ಸಡಿಲಿಕೆ ಮಾಡಿ, ಎಲ್ಲಾ ವಲಯಗಳು ಕಾರ್ಯನಿರ್ವಹಿಸುವಂತೆ ಮಾಡಲಾಗುತ್ತದೆ. ಆದರೆ ಕಡ್ಡಾಯ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು. ಜೂನ್ 30ರ ಬಳಿಕ ಅನ್‌ಲಾಕ್ 2.0 ದಲ್ಲಿ ಯಾವೆಲ್ಲಾ ಅಂಶಗಳು ಒಳಗೊಂಡಿದೆ ಅನ್ನೋ ವಿವರ ಇಲ್ಲಿದೆ.
ಜ್ವರ, ಕೆಮ್ಮಿಗೆ ಸಿಗ್ತಿಲ್ಲ ಸರಿಯಾದ ಚಿಕಿತ್ಸೆ: ರೋಗಿಗಳ ಪರದಾಟ..!...
ಇತ್ತೀಚೆಗೆ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಈ ಕುರಿತು ವಿಡಿಯೋ ಕಾನ್ಫರೆನ್ಸ್ ಮಾಡಿದ್ದರು. ಈ ವೇಳೆ ಪ್ರತಿ ರಾಜ್ಯದ ಅಭಿಪ್ರಾಯ ಕೇಳಲಾಗಿದೆ. ಇಷ್ಟೇ ಅಲ್ಲ ಪ್ರತಿ ರಾಜ್ಯದ ಕೊರೋನಾ ವೈರಸ್ ವರದಿ ತರಿಸಿಕೊಂಡಿದ್ದಾರೆ. ಇನ್ನು ಮಹಾನಗರಗಳು, ನಗರ ಹಾಗೂ ಪಟ್ಟಣಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲು ಪ್ರಧಾನಿಗಳು ಸೂಚಿಸಿದ್ದಾರೆ.
ಜೂನ್ 30ರ ಬಳಿಕ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರದ ಸೇವೆಗಳು ಮುಂದುವರಿಯಲಿದೆ. ಇದರ ಜೊತೆಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಿದೆ. ಇದರ ಜೊತಗೆ ಸಾರ್ವಜನಿಕರು ಹೆಚ್ಚು ಜವಾಬ್ದಾರಿಯುತವಾಗಿ ವರ್ಚಿಸಬೇಕಿದೆ. ಕಾರಣ ಅನ್‌ಲಾಕ್ 2.0ನಲ್ಲಿ ಸಾರ್ವಜನಿಕರೇ ತಮ್ಮ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ