ಟ್ರಾಫಿಕ್‌ಗೆ ಸಿಲುಕಿ 4 ಗಂಟೆ ಪರದಾಟ: ಮೋದಿ ಜೊತೆಗಿನ ಡಿನ್ನರ್ ಮಿಸ್ ಮಾಡಿದ ಅಮೆರಿಕನ್ ಉದ್ಯಮಿ!

Published : Feb 19, 2026, 10:54 PM IST
Delhi traffic jam

ಸಾರಾಂಶ

ಪ್ರಧಾನಿ ಮೋದಿ ಆಯೋಜಿಸಿದ್ದ ಔತಣಕೂಟಕ್ಕೆ ಆಹ್ವಾನಿತರಾಗಿದ್ದ ಅಮೆರಿಕದ ಉದ್ಯಮಿ ಸಾರಾ ಹೂಕರ್, ದೆಹಲಿಯ ಭೀಕರ ಟ್ರಾಫಿಕ್‌ನಿಂದಾಗಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡರು. ನಾಲ್ಕು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿ, ಅಂತಿಮವಾಗಿ ಹೋಟೆಲ್‌ನಲ್ಲಿ ರೂಮ್ ಸರ್ವಿಸ್ ಮೂಲಕ ಊಟ ಮಾಡಿದ್ದಾರೆ.

ನವದೆಹಲಿ (ಫೆ.19): ಭಾರತದ ರಾಜಧಾನಿ ದೆಹಲಿಯ ಟ್ರಾಫಿಕ್ ಸಮಸ್ಯೆ ಎಷ್ಟು ಭೀಕರವಾಗಿದೆ ಎಂದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಔತಣಕೂಟಕ್ಕೆ ಆಮಂತ್ರಣ ಪಡೆದಿದ್ದ ಅಮೆರಿಕದ ಪ್ರಖ್ಯಾತ ಮಹಿಳಾ ಉದ್ಯಮಿಯೊಬ್ಬರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪೇಚಿಗೆ ಸಿಲುಕಿದ್ದಾರೆ.

ಅಡಾಪ್ಟೇಶನ್ ಲ್ಯಾಬ್ಸ್‌ನ (Adaption Labs) ಸಹ-ಸಂಸ್ಥಾಪಕಿ ಮತ್ತು ಸಿಇಒ ಸಾರಾ ಹೂಕರ್ ಅವರು ದೆಹಲಿಯ ಭಾರತ್ ಮಂಟಪದಲ್ಲಿ ನಡೆದ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್'ನಲ್ಲಿ ಭಾಗವಹಿಸಿದ್ದರು. ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಗಣ್ಯರಿಗಾಗಿ ಏರ್ಪಡಿಸಿದ್ದ ಗಾಲಾ ಡಿನ್ನರ್‌ಗೆ ಸಾರಾ ಅವರಿಗೆ ವಿಶೇಷ ಆಮಂತ್ರಣವಿತ್ತು.

ಟ್ರಾಫಿಕ್‌ನಲ್ಲಿ 4 ಗಂಟೆ ಸಿಲುಕಿದ್ದ ಉದ್ಯಮಿ

ಸಮ್ಮಿಟ್ ಮುಗಿಸಿ ಹೋಟೆಲ್‌ಗೆ ಮರಳಿದ್ದ ಸಾರಾ, ರಾತ್ರಿಯ ಔತಣಕೂಟಕ್ಕಾಗಿ ಜೀನ್ಸ್ ಬದಲಿಸಿ ಫಾರ್ಮಲ್ ಉಡುಪು ಧರಿಸಿ ಹೊರಟಿದ್ದರು. ಬಳಿಕ ಹೋಟೆಲ್‌ನಿಂದ ಕಾರ್ಯಕ್ರಮದ ಸ್ಥಳಕ್ಕೆ ಮರಳಲು ಕಾರು ಏರಿದ್ದರು. ಆದರೆ ದೆಹಲಿಯ ರಸ್ತೆಯಲ್ಲಿ ಬರೋಬ್ಬರಿ 4 ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರು. ಎಷ್ಟು ಪ್ರಯತ್ನಿಸಿದರೂ ಸಮಯಕ್ಕೆ ಸರಿಯಾಗಿ ವೇದಿಕೆ ತಲುಪಲು ಸಾಧ್ಯವಾಗದಿದ್ದಾಗ, ಅನಿವಾರ್ಯವಾಗಿ ಅವರು ಕಾರ್ಯಕ್ರಮಕ್ಕೆ ಹೋಗುವ ನಿರ್ಧಾರ ಕೈಬಿಟ್ಟು ಹೋಟೆಲ್‌ಗೆ ಮರಳಿದರು.

ರೂಮ್ ಸರ್ವಿಸ್ ಊಟದ ಫೋಟೋ ವೈರಲ್!

ಸಾರಾ ಹೂಕರ್ ಅವರು ಈ ಕಹಿ ಅನುಭವವನ್ನು ತಮ್ಮ 'X' ಖಾತೆಯಲ್ಲಿ ಹಂಚಿಕೊಂಡಿದ್ದಾರೆ. "ಪ್ರಧಾನಿಯವರ ಜೊತೆಗಿನ ಔತಣಕೂಟಕ್ಕೆ ಆಮಂತ್ರಣವಿತ್ತು. ಆದರೆ ಬಟ್ಟೆ ಬದಲಿಸಿ ಬರುವಷ್ಟರಲ್ಲಿ ಭೀಕರ ಟ್ರಾಫಿಕ್‌ನಲ್ಲಿ ಸಿಲುಕಿದೆ. ಆ ಗೌರವದ ಕ್ಷಣವನ್ನು ಮಿಸ್ ಮಾಡಿಕೊಂಡೆ. ಕೊನೆಗೆ ರಾತ್ರಿ 11 ಗಂಟೆಗೆ ಹೋಟೆಲ್‌ನಲ್ಲಿ ರೂಮ್ ಸರ್ವಿಸ್ ಮೂಲಕ ತರಿಸಿಕೊಂಡ ಊಟ ಸವಿಯಬೇಕಾಯಿತು" ಎಂದು ಬರೆದುಕೊಂಡಿದ್ದಾರೆ. ಅವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ದೆಹಲಿಯ ಟ್ರಾಫಿಕ್ ವ್ಯವಸ್ಥೆಯ ಬಗ್ಗೆ ನೆಟ್ಟಿಗರು ಟೀಕಿಸುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಶದಲ್ಲಿರುವ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಬಿಡುಗಡೆ ಮಾಡಿದ ಯುಜಿಸಿ: 12 ರಾಜ್ಯಗಳಲ್ಲಿ ವಂಚನೆ ಜಾಲ
ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್‌ ವಿಡಿಯೋ ವೈರಲ್!