
ಭಾರತದ AI ಇಂಪ್ಯಾಕ್ಟ್ ಸಮ್ಮಿಟ್ 2026 ರಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೋಡಾಗ್ ವಿವಾದ ಸೃಷ್ಟಿಸಿದ್ದು ಕಳೆದೆರಡ್ಮೂರು ದಿನಗಳಿಂದ ಇಂಟರ್ನೆಟ್‌ನಲ್ಲಿ ಅದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಸಮಿಟ್‌ನಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾ ಮೂಲದ Unitree Go2 ಎಂಬ ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿತ್ತು. ವಿಶ್ವವಿದ್ಯಾಲಯದ ಪ್ರತಿನಿಧಿ ನೇಹಾ ಸಿಂಗ್ ಎಂಬವರು ಈ ರೋಬೋಟ್ ಅನ್ನು ತಮ್ಮ ಸಂಸ್ಥೆಯಲ್ಲೇ ಅಭಿವೃದ್ಧಿಪಡಿಸಿದ ಸ್ವಂತ ಆವಿಷ್ಕಾರ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಯಿತು.
ಸಾಮಾಜಿಕ ಜಾಲತಾಣಗಳಲ್ಲಿ ತಾಂತ್ರಿಕ ತಜ್ಞರು ಇದನ್ನು ಚೀನಾದ ಕಂಪನಿಯ ಉತ್ಪನ್ನವೆಂದು ಗುರುತಿಸಿದ ನಂತರ, ವಿಶ್ವವಿದ್ಯಾಲಯವು ತೀವ್ರ ಟೀಕೆ ಗುರಿಯಾಯ್ತು, ಮತ್ತು ಕೇಂದ್ರ ಸರ್ಕಾರವು ರಾಜಕೀಯ ಒತ್ತಡಕ್ಕೆ ಒಳಗಾಯಿತು. ಅದರ ಬೆನ್ನಲ್ಲೇ ವಿವಿಯ ಸ್ಟಾಲ್‌ಅನ್ನು ಖಾಲಿ ಮಾಡಿಸಲಾಯ್ತು. ವಿವಾದ ತಾರಕಕ್ಕೇರಿದ ನಂತರ ವಿಶ್ವವಿದ್ಯಾಲಯವು ಅಧಿಕೃತವಾಗಿ ಕ್ಷಮೆಯಾಚಿಸಿತು.
ಆ ರೋಬೋಟ್ ಅನ್ನು ಕೇವಲ ಶೈಕ್ಷಣಿಕ ಪ್ರಾತ್ಯಕ್ಷಿಕೆಗಾಗಿ (educational demonstration) ಬಳಸಲಾಗಿದೆಯೇ ಹೊರತು, ಅದನ್ನು ನಾವು ತಯಾರಿಸಿದ್ದೇವೆ ಎಂದು ಹೇಳಿಕೊಳ್ಳುವ ಉದ್ದೇಶವಿರಲಿಲ್ಲ ಎಂದು ತಿಳಿಸಿತು.ಮಾಹಿತಿ ಕೊರತೆಯಿಂದಾಗಿ ವಿಶ್ವವಿದ್ಯಾಲಯದ ಪ್ರತಿನಿಧಿಯು ಅಂತಹ ಹೇಳಿಕೆ ನೀಡಿದ್ದಾರೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿತು.
ಈಗ ಅದರ ಬೆನ್ನಲ್ಲೇ ಈಗ ಗಲ್ಗೋಟಿಯಾಸ್ ವಿವಿಯು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ನೆಟಿಜನ್‌ಗಳು ವಿವಿಯನ್ನು ಟ್ರೋಲ್ ಮಾಡುವ ಯಾವುದೇ ಚಾನ್ಸನ್ನು ಮಿಸ್ ಮಾಡ್ತಿಲ್ಲ! ಈಗ ಗಲ್ಗೋಟಿಯಾಸ್ ವಿವಿಯ ಫೆಸ್ಟ್‌ನ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ತುಂಡುಡುಗೆ ತೊಟ್ಟು ಹಿಂದಿ ಸಿನಿಮಾ ಸಾಂಗ್‌ಗೆ ಡ್ಯಾನ್ಸ್ ಮಾಡುತ್ತಿದ್ದಾಳೆ. ವಿವಿಯು ಎಐ ಅಲ್ಲ, ತನ್ನ ಫೆಸ್ಟ್‌ಗೆ ಫೇಮಸ್ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಒಕ್ಕಣೆ ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ