ತಲೆಗೆ ತೀವ್ರಗಾಯಗೊಂಡ ಕಾರಣ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಡವಟ್ಟು ಮಾಡಲಾಗಿದೆ. ಮಹಿಳೆಯ ತಲೆಗೆ ಗಾಯಕ್ಕೆ ಬ್ಯಾಂಡೇಜ್ ಮಾಡುವಾಗ ಕಾಂಡೋಮ್ ಪ್ಯಾಕ್ ಇಟ್ಟು ಬ್ಯಾಂಡೇಜ್ ಮಾಡಲಾಗಿದೆ. ಇದೀಗ ಬ್ಯಾಂಡೇಜ್ ಮಾಡಿದ ವಾರ್ಡ್ ಬಾಯ್ ಅಮಾನತುಗೊಂಡಿದ್ದಾರೆ.
ಇಂದೋರ್(ಆ.20): ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದ ಮಹಿಳೆಯ ಆರೋಗ್ಯ ಚೇತರಿಕೆ ಕಂಡಿಲ್ಲ. ತಲೆಗೆ ಆಗಿರುವ ಗಾಯದಿಂದ ಬ್ಯಾಂಡೇಜ್ ಹಾಕಿದ್ದರೂ ರಕ್ತ ಸ್ರಾವವಾಗುತ್ತಿತ್ತು. ಮಹಿಳೆ ತೀವ್ರ ಅಸ್ವಸ್ಥಗೊಳ್ಳುತ್ತಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಮಹಿಳೆಯ ತಲೆಗೆ ಹಾಕಿದ್ದ ಬ್ಯಾಂಡೇಜ್ ಬಿಚ್ಚಿ ಹೊಸದಾಗಿ ಡ್ರೆಸ್ಸಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಪ್ರಾಥಮಿ ಆರೋಗ್ಯ ಕೇಂದ್ರದಲ್ಲಿ ಹಾಕಿದ್ದ ಬ್ಯಾಂಡೇಜ್ ಬಿಚ್ಚಿದ್ದಾರೆ. ಈ ವೇಳೆ ವೈದ್ಯರು ಹಾಗೂ ನರ್ಸ್‌ಗಳಿಗೆ ಅಚ್ಚರಿ ಹಾಗೂ ಮುಜುಗರವಾಗಿದೆ. ಕಾರಣ ಮಹಿಳೆಯ ಬ್ಯಾಂಡೇಜ್ ಒಳಗೆ ಕಾಂಡೋಮ್ ಪ್ಯಾಕೆಟ್ ಪತ್ತೆಯಾಗಿದೆ. ಈ ಘಟನೆ ನಡೆದಿರುವುದು ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ. ಕಾಂಡೋಮ್ ಪ್ಯಾಕೆಟ್ ಇಟ್ಟು ಬಳಿಕ ಬಳಿ ಕಾಟನ್ ಬಟ್ಟೆಯಿಂದ ಬ್ಯಾಂಡೇಜ್ ಮಾಡಲಾಗಿದೆ. ಇದೇ ಕಾರಣದಿಂದ ಮಹಿಳೆಯ ತಲೆಯ ಗಾಯದಿಂದ ರಕ್ತ ಸ್ರಾವ ನಿಂತಿರಲಿಲ್ಲ. ಇಷ್ಟೇ ಅಲ್ಲ ಇದು ಮತ್ತಷ್ಟು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಎಲ್ಲಾ ಲಕ್ಷಣಗಳಿತ್ತು. ಆದರೆ ಸೂಕ್ತ ಸಮಯದಲ್ಲಿ ಜಿಲ್ಲಾಸ್ಪತ್ರೆ ವೈದ್ಯರು ಗಮನಿಸಿ ಚಿಕಿತ್ಸೆ ನೀಡಿದ್ದಾರೆ.
ರೇಶ್ಮಾ ಭಾಯಿ ಅನ್ನೋ ಮಹಿಳೆ ತಲೆಗೆ ಗಾಯವಾಗಿ ರಕ್ತ ಸ್ರಾವ ಆರಂಭಗೊಂಡಿದೆ. ಇದರಿಂದ ಪೂರ್ಸಾದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಧಮೇಂದ್ರ ರಜಪೂತ್ ಬ್ಯಾಂಡೇಜ್ ಮಾಡಲು ವಾರ್ಡ್ ಬಾಯ್ ಅನಂತ್ ರಾಮ್‌ಗೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ಮಹಿಳೆಯ ಆರೋಗ್ಯವನ್ನು ಪರೀಕ್ಷಿಸಲು ಹೋಗಿಲ್ಲ. ಗಾಯಗೊಂಡಿರುವ ಜಾಗದಲ್ಲಿ ಹತ್ತಿ ಪ್ಯಾಡ್ ಮೇಲೆ ಕಾರ್ಡ್ ಬೋರ್ಡ್ ರೀತಿಯ ಗಟ್ಟಿ ವಸ್ತುವನ್ನಿಟ್ಟು ಬ್ಯಾಂಡೇಜ್ ಮಾಡಲು ಸೂಚಿಸಿದ್ದಾರೆ. ವಾರ್ಡ್ ಬಾಯ್ ಗಟ್ಟಿಯಾದ ವಸ್ತು ಎಂದಾಗ ನೆನೆಪಿಗೆ ಬಂದಿದ್ದು, ಕಾಂಡೋಮ್ ಪ್ಯಾಕೆಟ್, ಸುರಕ್ಷತೆಯ ಲೈಂಗಿಕತೆಗೆ ಕಾರಣಕ್ಕೆ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಕಾಂಡೋಮ್ ಇಡಲಾಗುತ್ತದೆ. ಈ ವಾರ್ಡ್ ಬಾಯ್ ಈ ಕಾಂಡೋಮ್ ಪ್ಯಾಕೆಟ್ ತೆಗೆದು ಮಹಿಳೆಯ ಗಾಯಗೊಂಡಿರುವ ಜಾಗದಲ್ಲಿಟ್ಟು ಬ್ಯಾಂಡೇಜ್ ಮಾಡಿದ್ದಾನೆ.
ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ್ ಸ್ಥಿತಿ ಗಂಭೀರ; ವದಂತಿ ಹಬ್ಬಿಸಬೇಡಿ ಎಂದು ಪತ್ನಿ ಮನವಿ
ಮಹಿಳೆಯ ಬ್ಯಾಂಡೇಜ್ ಮಾಡಿ ಬಳಿಕ ಎರಡು ಮಾತ್ರೆ ನೀಡಿದ್ದಾರೆ. ಆದರೆ ಮಹಿಳೆಯ ಗಾಯದಿಂದ ರಕ್ತಸ್ರಾವ ಮಾತ್ರ ಕಡಿಮೆಯಾಗಿಲ್ಲ. ಇತ್ತ ಮಹಿಳೆ ಕೂಡ ತೀವ್ರ ಅಸ್ವಸ್ಥಗೊಂಡಿದ್ದಾರೆ. ಇದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುಂತೆ ಸೂಚಿಸಿದ್ದಾರೆ. ಇದರಂತೆ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಗಾಯದ ಮೇಲೆ ಕಾಂಡೋಮ್ ಪ್ಯಾಕೆಟ್ ಇಟ್ಟು ಬ್ಯಾಂಡೇಜ್ ಮಾಡಿರುವುದು ಬೆಳಕಿಗೆ ಬಂದಿದೆ.
ಮಹಿಳೆಗೆ ಹೊಸದಾಗಿ ಬ್ಯಾಂಡೇಜ್ ಮಾಡಲಾಗಿದೆ. ಸೂಕ್ತ ಚಿಕಿತ್ಸೆಯಿಂದ ಮಹಿಳೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇತ್ತ ನಿರ್ಲಕ್ಷ್ಯ ತೋರಿದ್ದಲ್ಲದೆ ಕಾಂಡೋಮ್ ಪ್ಯಾಕೆಟ್ ಇಟ್ಟು ಬ್ಯಾಂಡೇಜ್ ಮಾಡಿದ ವಾರ್ಡ್ ಬಾಯ್ ಅನಂತ್ ರಾಮ್‌ನನ್ನು ಅಮಾನತು ಮಾಡಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ರಾಕೇಶ್ ಮಿಶ್ರಾ ಹೇಳಿದ್ದಾರೆ. ಈ ಕುರಿತಿ ವರದಿ ಕೇಳಿದ್ದೇವೆ. ತನಿಖೆ ನಡೆಸಲಾಗುತ್ತದೆ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಮೊರೆನಾ ಜಿಲ್ಲಾಧಿಕಾರಿ ಎನ್ ಭಾರ್ಗವ್ ಹೇಳಿದ್ದಾರೆ.
ಕೋವಿಡ್ ಸೋಂಕಿನಿಂದ ಆಸ್ಪತ್ರೆ ದಾಖಲಾಗುವವರ ಸಂಖ್ಯೆ ಏರಿಕೆ, ಭಾರತದಲ್ಲಿ ಮತ್ತೆ ಆತಂಕ!