ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾರನ್ನು Money Shh ಎಂದ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌

By BK AshwinFirst Published Aug 20, 2022, 3:13 PM IST
Highlights

ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ದೆಹಲಿ ಸಿಎಂ ಹಾಗೂ ಡಿಸಿಎಂ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಕೇಂದ್ರ ಸಚಿವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಎಎಪಿ ಸಚಿವ ಮನೀಶ್‌ ಸಿಸೋಡಿಯಾ ವಿರುದ್ಧ ಕೇಂದ್ರ ಸಚಿವ ಅನುರಾಗ್ ಠಾಕೂರ್ ನವದೆಹಲಿಯಲ್ಲಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ. ಅರವಿಂದ್ ಕೇಜ್ರಿವಾಲ್‌ ಅವರನ್ನು ರಾಷ್ಟ್ರ ರಾಜಧಾನಿಯಲ್ಲಿನ "ಮದ್ಯ ಹಗರಣ"ದ "ಕಿಂಗ್‌ಪಿನ್" ಎಂದು ಅನುರಾಗ್ ಠಾಕೂರ್ ಬಣ್ಣಿಸಿದ್ದಾರೆ. ಹಾಗೂ, ಸಚಿವ ಮನೀಶ್‌ ಸಿಸೋಡಿಯಾ ಅವರನ್ನು ‘’Money Shh’’ಹಾಗೂ ಮದ್ಯ ಹಗರಣದ ಆರೋಪಿ ನಂ. 1 ಎಂದು ಕೇಂದ್ರ ಸಚಿವರು ಬಣ್ಣಿಸಿದ್ದಾರೆ. 

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನುರಾಗ್ ಠಾಕೂರ್, ಎಎಪಿಯ ನಿಜ ಬಣ್ಣ ಬಯಲಾಗಿದೆ. ಈ ಹಿನ್ನೆಲೆ,  ಇತರ ವಿಷಯಗಳನ್ನು ಎತ್ತುವ ಮೂಲಕ ಅಬಕಾರಿ ಹಗರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸಬಾರದು ಎಂದೂ ಅನುರಾಗ್‌ ಠಾಕೂರ್‌ ಟೀಕಿಸಿದ್ದಾರೆ. ಹಾಗೂ, ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ತರಾಟೆಗೆ ತೆಗೆದುಕೊಂಡ ಅನುರಾಗ್‌ ಠಾಕೂರ್, Manish ಅವರನ್ನು 'Money Shh'' ಎಂದು ಕರೆದಿದ್ದು, ಅವರು ಹಣ ಸಂಪಾದಿಸುತ್ತಾರೆ ಮತ್ತು ಮೌನ ವಹಿಸುತ್ತಾರೆ ಎಂದೂ ಆರೋಪಿಸಿದರು. ಅಲ್ಲದೆ, ಅವರ ಹೆಸರಿನ ಸ್ಪೆಲ್ಲಿಂಗ್ ಅನ್ನು ಸಹ ಬದಲಿಸಿರಬಹುದು ಎಂದೂ ಕೇಂದ್ರ ಸಚಿವರು ವ್ಯಂಗ್ಯವಾಡಿದ್ದಾರೆ. 

ದೆಹಲಿ ಅಬಕಾರಿ ಹಗರಣ, 15 ಆರೋಪಿಗಳ ಪೈಕಿ ಉಪ ಮುಖ್ಯಮಂತ್ರಿ ಸಿಸೋಡಿಯಾ ನಂ.1!

| "Manish Sisodia might have now changed the spelling of his name too. Now it is - M O N E Y SHH," says Union Minister Anurag Thakur

CBI officials raided the residence & office of Delhi Deputy CM Manish Sisodia for 14 hours in the Excise policy case, yesterday, August 20. pic.twitter.com/NNFf6xQr88

— ANI (@ANI)

ಅಲ್ಲದೆ, ಮನೀಶ್ ಜೀ, ನಿಮ್ಮ ಮದ್ಯ ನೀತಿ ಸರಿಯಾಗಿದ್ದರೆ, ನೀವು ಅದನ್ನು ಏಕೆ ಹಿಂತೆಗೆದುಕೊಂಡಿದ್ದೀರಿ..? ಮದ್ಯ ಉದ್ಯಮಿಗಳ ಮೇಲೆ ಮೃದು ನಿಲುವು ತೋರುವುದೇಕೆ..? ನಾನು ಅರವಿಂದ್ ಕೇಜ್ರಿವಾಲ್ ಅವರಿಗೆ ರಾಷ್ಟ್ರದ ಮುಂದೆ ಬಂದು 24 ಗಂಟೆಯೊಳಗೆ ಉತ್ತರಿಸುವಂತೆ ಸವಾಲು ಹಾಕುತ್ತೇನೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸವಾಲು ಹಾಕಿದ್ದಾರೆ.
 
ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಕೆಂದ್ರ ಸಚಿವ ಅನುರಾಗ್‌ ಠಾಕೂರ್ ಅವರ ಪಕ್ಕದಲ್ಲಿ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಮತ್ತು ಲೋಕಸಭಾ ಸದಸ್ಯ ಮನೋಜ್ ತಿವಾರಿ ಇದ್ದರು. ದೆಹಲಿ ಅಬಕಾರಿ ನೀತಿಯ ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ದೆಹಲಿ ಉಪ ಮುಖ್ಯಮಮಂತ್ರಿ ಮನೀಶ್‌ ಸಿಸೋಡಿಯಾ ಮತ್ತು ಐಎಎಸ್ ಅಧಿಕಾರಿ ಅರವ ಗೋಪಿ ಕೃಷ್ಣ ಅವರ ನಿವಾಸ ಸೇರಿ 19 ಇತರ ಸ್ಥಳಗಳಲ್ಲಿ ಶುಕ್ರವಾರ ಶೋಧ ಕಾರ್ಯ ನಡೆಸಿದೆ. 

ದೆಹಲಿ ಅಬಕಾರಿ ಹಗರಣ, ಮನೀಷ್‌ ಸಿಸೋಡಿಯಾ ಮನೆ ಸೇರಿದಂತೆ 21 ಕಡೆ ಸಿಬಿಐ ದಾಳಿ!

ದೆಹಲಿಯ ಅಬಕಾರಿ ಹಗರಣ ಪ್ರಕರಣದಲ್ಲಿ ಮನೀಶ್‌ ಸಿಸೋಡಿಯಾ ಸೇರಿ 15 ಮಂದಿಯನ್ನು ಆರೋಪಿಗಳೆಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಶುಕ್ರವಾರ ಹೆಸರಿಸಿದೆ. ಅಲ್ಲದೆ, ಸಿಸೋಡಿಯಾ ಅವರ ಮನೆ ಮತ್ತು ದೆಹಲಿ-ಎನ್‌ಸಿಆರ್‌ನ ಇತರ 20 ಸ್ಥಳಗಳ ಮೇಲೆ ಕೇಂದ್ರೀಯ ಏಜೆನ್ಸಿ ನಡೆಸಿದ ದಾಳಿಗಳ ಮಧ್ಯೆ ಎಫ್‌ಐಆರ್ ದಾಖಲಾಗಿತ್ತು. ಅವರ ನಿವಾಸದ ಜತೆಗೆ ಉಪಮುಖ್ಯಮಂತ್ ಮನೀಶ್‌ ಸಿಸೋಡಿಯಾ ಅವರ ಕಾರಿನಲ್ಲೂ ಅಧಿಕಾರಿಗಳು ತಪಾಸಣೆ ನಡೆಸಿದರು.

“ಮದ್ಯ ಹಗರಣದ ನಂತರ ಮನೀಶ್ ಸಿಸೋಡಿಯಾ  ಅವರ ಮುಖದ ಬಣ್ಣ ಹೇಗೆ ಮಾಸಿ ಹೋಗಿದೆ ಎಂಬುದನ್ನು ಇಂದಿನ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ತೋರಿಸಿದೆ. ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎಂದೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ನವ ದೆಹಲಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮನೀಶ್‌ ಸಿಸೋಡಿಯಾ ಅವರು ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಟೀಕೆ ಮಾಡಿದ್ದಾರೆ.   

click me!