ಹಿಂದೂಗಳನ್ನು ಓಡಿಸಿ ಎಂದು ಅರಬ್‌ ದೇಶಗಳಿಗೆ ಅಲ್‌ಖೈದಾ ಕರೆ: ಪ್ರಧಾನಿ ಮೋದಿ, ನೂಪುರ್‌ ಗುರಿಯಾಗಿಸಿ ಲೇಖನ ಪ್ರಕಟ

Published : Dec 29, 2022, 12:35 PM ISTUpdated : Dec 29, 2022, 12:36 PM IST
ಹಿಂದೂಗಳನ್ನು ಓಡಿಸಿ ಎಂದು ಅರಬ್‌ ದೇಶಗಳಿಗೆ ಅಲ್‌ಖೈದಾ ಕರೆ: ಪ್ರಧಾನಿ ಮೋದಿ, ನೂಪುರ್‌ ಗುರಿಯಾಗಿಸಿ ಲೇಖನ ಪ್ರಕಟ

ಸಾರಾಂಶ

ಅಲ್‌ಖೈದಾ ತನ್ನ ನಿಯತಕಾಲಿಕೆ ‘’ಒನ್‌ ಉಮ್ಮಾಹ್‌’’ನ 5ನೇ ಮುದ್ರಣವನ್ನು ಹೊರತಂದಿದ್ದು, ಅದರಲ್ಲಿ ಈ ವಿಷಯಗಳನ್ನು ಪ್ರಕಟಿಸಿದೆ. ಇದರಲ್ಲಿರುವ ಒಂದು ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್‌ ಶರ್ಮಾರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಲಾಗಿದೆ.

ನವದೆಹಲಿ: ಬಿಜೆಪಿಯಿಂದ (BJP) ಅಮಾನತಾಗಿರುವ ವಕ್ತಾರೆ ನೂಪುರ್‌ ಶರ್ಮಾ (Nupur Sharma) ಅವರ ಪ್ರವಾದಿ (Prophet) ನಿಂದನೆ ಘಟನೆಯನ್ನು ಆಧಾರವಾಗಿಟ್ಟುಕೊಂಡು ಉಗ್ರ ಸಂಘಟನೆ ಅಲ್‌ಖೈದಾ (Al Aaida) ಭಾರತದ (India) ವಿರುದ್ಧ ಕಿಡಿಕಾರಿದೆ. ಮುಸ್ಲಿಂ ರಾಷ್ಟ್ರಗಳು (Muslim Countries) ಭಾರತೀಯ ವಸ್ತುಗಳನ್ನು ಬಹಿಷ್ಕರಿಸಬೇಕು (Boycott Indian Products). ಅರಬ್‌ ರಾಷ್ಟ್ರಗಳಿಂದ (Arab Countries) ಹಿಂದೂಗಳನ್ನು (Hindu) ಹೊರಹಾಕಬೇಕು ಎಂದು ಅಲ್‌ಖೈದಾ ಹೇಳಿದೆ. ಅಲ್‌ಖೈದಾ ತನ್ನ ನಿಯತಕಾಲಿಕೆ ‘’ಒನ್‌ ಉಮ್ಮಾಹ್‌’’ನ 5ನೇ ಮುದ್ರಣವನ್ನು ಹೊರತಂದಿದ್ದು, ಅದರಲ್ಲಿ ಈ ವಿಷಯಗಳನ್ನು ಪ್ರಕಟಿಸಿದೆ. ಇದರಲ್ಲಿರುವ ಒಂದು ಲೇಖನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೂಪುರ್‌ ಶರ್ಮಾರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಲಾಗಿದೆ. ಪ್ರವಾದಿ ನಿಂದನೆಯನ್ನು ಮಾಡಿರುವ ಭಾರತದ ವಿರುದ್ಧ ಇಸ್ಲಾಂ ದೇಶಗಳು ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕರೆ ನೀಡಿದೆ.

‘ಭಾರತದಲ್ಲಿರುವ ಹಿಂದೂ ಸರ್ಕಾರ ಮೌನ ತಾಳುವ ಮೂಲಕ ಮುಸ್ಲಿಮರು ಹಾಗೂ ಪ್ರವಾದಿಯ ನಿಂದನೆಯನ್ನು ಪ್ರೋತ್ಸಾಹಿಸುತ್ತಿದೆ. ಹಾಗಾಗಿ ಹಿಂದೂ ಸರ್ಕಾರದ ವಿರುದ್ಧ ನಮ್ಮ ಎಲ್ಲಾ ಗೌರವಾನ್ವಿತ ಮುಸ್ಲಿಂ ರಾಷ್ಟ್ರಗಳು ಒಗ್ಗಟ್ಟಾಗಬೇಕು. ಭಾರತದಲ್ಲಿರುವ ನಮ್ಮ ಸೋದರ ಸೋದರಿಯರಿಗೆ ಬೆಂಬಲವಾಗಿ ನಿಲ್ಲಬೇಕು. ನಾವು ಎಲ್ಲಾ ಮುಸ್ಲಿಮರಿಗೆ ಅದರಲ್ಲೂ ವ್ಯಾಪಾರಿಗಳಿಗೆ ಭಾರತದ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡುತ್ತೇವೆ. ಮುಸ್ಲಿಂ ದೇಶಗಳಲ್ಲಿರುವ ಹಿಂದೂ ನೌಕರರನ್ನು ಕೆಲಸದಿಂದ ತೆಗೆದುಹಾಕಬೇಕು ಮತ್ತು ಅವರನ್ನು ದೇಶದಿಂದ ಹೊರಹಾಕಬೇಕು ಎಂದು ಕೇಳಿಕೊಳ್ಳುತ್ತೇವೆ’ ಎಂದು ಅಲ್‌ಖೈದಾ ಲೇಖನದಲ್ಲಿ ಬರೆದಿದೆ.

ಇದನ್ನು ಓದಿ: Hijab Row ಹಿಜಾಬ್ ವಿವಾದಕ್ಕೆ ಉಗ್ರ ಸಂಘಟನೆ ಬಹಿರಂಗ ಎಂಟ್ರಿ, ಮಂಡ್ಯದ ಮುಸ್ಕಾನ್ ಬೆಂಬಲಕ್ಕೆ ಅಲ್ ಖೈದಾ!

ಮುಸಲ್ಮಾನ ಜಗತ್ತಿನ ಮೌನದಿಂದ ಉತ್ತೇಜಿಸಲ್ಪಟ್ಟು ಭಾರತದ ಹಿಂದೂ ಸರ್ಕಾರವು ಈ ಬಾರಿ ಮಿತಿಗಳನ್ನು ದಾಟಿದ್ದು ಮತ್ತು ಪ್ರವಾದಿಯನ್ನು ಅವಮಾನಿಸಿದೆ ಎಂದು ಅಲ್-ಖೈದಾದ ಲೇಖನವು ಹೇಳುತ್ತದೆ. ಅಲ್ಲದೆ, ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿರುವ ಮುಸ್ಲಿಮರ ಸಹಾಯವನ್ನೂ ಅಲ್-ಖೈದಾ ಕೋರಿದೆ. ಈ ಹಿಂದೂ ಸರ್ಕಾರದ ವಿರುದ್ಧ ಒಗ್ಗೂಡಿಸಲು ನಮ್ಮ ಉದಾತ್ತ ಉಮ್ಮಾಹ್‌ವನ್ನು ನಾವು ಆಹ್ವಾನಿಸುತ್ತೇವೆ ಮತ್ತು ಭಾರತದಲ್ಲಿನ ಅವರ ಸಹೋದರ ಸಹೋದರಿಯರಿಗೆ ಸಹಾಯ ಮಾಡೋಣ. ಆದ್ದರಿಂದ ಅಲ್ಲಾಹನ ಶತ್ರುಗಳು ನಮ್ಮ ಪ್ರವಾದಿ ವಿರುದ್ಧ ಇಂತಹ ಅತಿರೇಕದ ಅಪರಾಧವನ್ನು ಪುನರಾವರ್ತಿಸುವುದಿಲ್ಲ ಎಂದೂ ಅಲ್‌ಖೈದಾ ಪ್ರಕಟಿಸಿದ ಲೇಖನ ಹೇಳಿದೆ. 
 
ನಾವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸಲು, ಹಿಂದೂ ಉದ್ಯೋಗಿಗಳನ್ನು ವಜಾಗೊಳಿಸಲು ಮತ್ತು ಅವರನ್ನು ಮುಸ್ಲಿಂ ದೇಶಗಳಿಂದ ಹೊರಹಾಕಲು ಎಲ್ಲಾ ಮುಸ್ಲಿಮರನ್ನು, ನಿರ್ದಿಷ್ಟವಾಗಿ ಉದ್ಯಮಿಗಳನ್ನು ಆಹ್ವಾನಿಸುತ್ತೇವೆ ಎಂದೂ ಅಲ್-ಖೈದಾ ಮ್ಯಾಗಜೀನ್‌ ತಿಳಿಸಿದೆ. ಇನ್ನು, ಈ ಮ್ಯಾಗಜೀನ್‌ 9/11 ಅಪಹರಣಕಾರರ ಚಿತ್ರಗಳನ್ನು ಹೊಂದಿದ್ದು ಮತ್ತು ಅವರನ್ನು ಹೀರೋಗಳು ಎಂದು ಕರೆಯುತ್ತದೆ. 

ಇದನ್ನೂ ಓದಿ: Thrilling Chapter: ಅಲ್‌ ಖೈದಾದ ಮೈಸೂರಿನ ನಂಟು- ಅಬು ಜುಬೈದಾ

‘’ಒನ್‌ ಉಮ್ಮಾಹ್‌’’ ಮ್ಯಾಗಜೀನ್‌ ಸೊಮಾಲಿಯಾದಲ್ಲಿ ಅಲ್-ಖೈದಾ ಉಪಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಸೊಮಾಲಿಯಾ ಕುರಿತಾದ ಲೇಖನವು ಅಲ್-ಶಬಾಬ್‌ನ ಮಾಜಿ ಎಮಿರ್ ಅಹ್ಮದ್ ಅಬ್ದಿ ಗೋಡೇನ್‌ ಅಕಾ ಮುಖ್ತಾರ್ ಅಬು ಜುಬೈರ್ ಅವರನ್ನು ಒಳಗೊಂಡಿದೆ. ಸೆಪ್ಟೆಂಬರ್, 2014 ರಲ್ಲಿ ಸೊಮಾಲಿಯಾದಲ್ಲಿ ಯುಎಸ್ ಡ್ರೋನ್ ದಾಳಿಯಲ್ಲಿ ಅಹ್ಮದ್ ಅಬ್ದಿ ಗೋಡೇನ್‌ ಹತ್ಯೆಯಾಗಿದ್ದರು.
 
ಈ ಮಧ್ಯೆ, ಜವಾಹಿರಿ ಜೀವಂತವಾಗಿದ್ದಾನೆಯೇ ಅಥವಾ ಸತ್ತಿದ್ದಾನೆಯೇ ಎಂದು ಈ ಮ್ಯಾಗಜೀನ್‌ ಯಾವುದೇ ಸೂಚನೆಯನ್ನು ನೀಡುವುದಿಲ್ಲ. ಕಳೆದ ವಾರ SITE ಗುಪ್ತಚರ ಗುಂಪು ಅಲ್-ಖೈದಾ 35 ನಿಮಿಷಗಳ ರೆಕಾರ್ಡಿಂಗ್ ಅನ್ನು ಬಿಡುಗಡೆ ಮಾಡಿದೆ ಎಂದು ವರದಿ ಮಾಡಿತ್ತು. ಅಲ್ಲದೆ, ಆಗಸ್ಟ್ 2022 ರಲ್ಲಿ ಯುಎಸ್ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ನಂಬಲಾದ ತನ್ನ ನಾಯಕ ಅಯ್ಮನ್ ಅಲ್-ಜವಾಹಿರಿ ಅವರು ಈ ರೆಕಾರ್ಡಿಂಗ್‌ನಲ್ಲಿ ವಿವರಿಸಿದ್ದಾರೆ ಎಂದೂ ಭಯೋತ್ಪಾದಕ ಗುಂಪು ಹೇಳಿಕೊಂಡಿದೆ.

ಇದನ್ನೂ ಓದಿ: ಭಾರತದಲ್ಲಿ ಶೀಘ್ರ ದಾಳಿ: ಐಸಿಸ್‌ ಉಗ್ರರಿಂದ ಎಚ್ಚರಿಕೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು