ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಜಿತ್ ಪವಾರ್ ಬಣದ ಎನ್‌ಸಿಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿ 10 ಗ್ಯಾರಂಟಿಗಳನ್ನು ಘೋಷಿಸಿದೆ. ಮಹಿಳೆಯರಿಗೆ ಮಾಸಾಶನ ಹೆಚ್ಚಳ, ರೈತರಿಗೆ ಸಾಲ ಮನ್ನಾ, ಉದ್ಯೋಗ ಸೃಷ್ಟಿ ಭರವಸೆಗಳಲ್ಲಿ ಸೇರಿವೆ.
ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಅಜಿತ್ ಪವಾರ್ ಬಣದ ಎನ್‌ಸಿಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, 10 ಗ್ಯಾರಂಟಿ ಗಳನ್ನು ಘೋಷಿಸಿದೆ. ಈ ಪ್ರಣಾಳಿಕೆಯನ್ನು ಬಾರಾಮತಿಯಲ್ಲಿ ಅಜಿತ್ ಪವಾರ್, ಮುಂಬೈನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ತತ್ಕರೆ, ಗೊಂಡಿಯಾದಲ್ಲಿ ಕಾರ್ಯಾಧ್ಯಕ್ಷಪ್ರಫುಲ್ ಪಟೇಲ್ ಪ್ರತ್ಯೇಕವಾಗಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ರಾಜ್ಯದ 2.3 ಕೋಟಿ ಮಹಿಳೆಯರಿಗೆ ಮಾಸಾಶನವನ್ನು ಹಾಲಿ 1500 ರು.ನಿಂದ 2100 ರು.ಗೆ ಏರಿಕೆ ಮಾಡುವುದು ಪ್ರಮುಖ ಭರವಸೆಯಾಗಿದೆ.
10 ಗ್ಯಾರಂಟಿಗಳು
1. ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್ ಯೋಜನೆಯಡಿ ರಾಜ್ಯದ 2.3 ಕೋಟಿ ಮಹಿಳೆಯರಿಗೆ ಮಾಸಾಶನ ಹಾಲಿ 1500 ರು.ನಿಂದ 2100 ರು.ಗೆ ಏರಿಕೆ ಮಾಡುವುದು
2.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಧಿಯನ್ನು ಸಂಯೋಜಿಸಿ, ರೈತ (ಶೇತ್ಕರಿ) ಸಮ್ಮಾನ್ ನಿಧಿಯ ಮೊತ್ತ 12,000 ರೂ.ಗಳಿಂದ 15,000 ರೂ.ಗೆ ಏರಿಕೆ
3.ಅರ್ಹ ರೈತರ ಸಾಲ ಮನ್ನಾ ಹಾಗೂ ಭತ್ತ ಬೆಳೆಗಾರರಿಗೆ ಪ್ರತಿ ಎಕರೆಗೆ 25,000 ರು. ಬೋನಸ್ ನೀಡುವ ಭರವಸೆ
4.ಕನಿಷ್ಠ ಬೆಂಬಲ ಬೆಲೆಯ ಅಡಿ ಮಾರಾಟವಾಗುವ ಬೆಳೆಗಳಿಗೆ ಶೇ.20ರಷ್ಟು ಹೆಚ್ಚುವರಿ ಸಬ್ಸಿಡಿ ಎಂಬ ಘೋಷಣೆ
5.ಗ್ರಾಮೀಣ ಕೃಷಿ ಮೂಲಸೌಕರ್ಯ ಬಲವರ್ಧನೆಗೆ 45,000 ಪಕ್ಕಾ ರಸ್ತೆಗಳ ಅಭಿವೃದ್ಧಿಗೆ ಮುಂದಿನ 5 ವರ್ಷದಲ್ಲಿ ಕ್ರಮ
6.ರಾಜ್ಯಾದ್ಯಂತ 25 ಲಕ್ಷ ಉದ್ಯೋಗ ಸೃಷ್ಟಿಗೆ ಕ್ರಮ
7.ವೃತ್ತಿಪರ ತರಬೇತಿ ಮೂಲಕ 10 ಲಕ್ಷ ವಿದ್ಯಾರ್ಥಿಗಳಿಗೆ 10,000 ರು. ಸ್ಟೈಫಂಡ್, ಈ ಮೂಲಕ ಶಿಕ್ಷಣಕ್ಕೆ ಆದ್ಯತೆ
8.ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಮಾಸಿಕ 15,000 ರು. ವೇತನ, ಹಲವು ವರ್ಷದ ಬೇಡಿಕೆ ಈಡೇರಿಕೆ
9ವಿದ್ಯುತ್ ಬಿಲ್ ಶೇ.30ರಷ್ಟು ಕಡಿಮೆ ಮಾಡಿ, ವಿದ್ಯುತ್ ಹಾಗೂ ನವೀಕರಿಸಬಹುದಾದ ಶಕ್ತಿ ಮೂಲಗಳಿಗೆ ಆದ್ಯತೆ
10.ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಕ್ರಮ
undefined
ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ವಿರೋಧವಿಲ್ಲ, ಸರಿಯಾಗಿ ಅನುಷ್ಠಾನ ಮಾಡಿ: ಸುದರ್ಶನ್ ಎಂ.
ಗಡಿಯಾರ ಚಿಹ್ನೆ ಬಳಕೆಗೆ ಸುಪ್ರೀಂ ಷರತ್ತು
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗಡಿಯಾರ ಚಿಹ್ನೆ ಬಳಕೆಗೆ ಎನ್‌ಸಿಪಿಯ ಅಜಿತ್ ಪವಾರ್ ಬಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಷರತ್ತು ವಿಧಿಸಿದೆ. ‘ಗಡಿಯಾರ ಚಿಹ್ನೆಯ ಬಳಕೆ ಬಗ್ಗೆ ಇನ್ನೂ ಕೋರ್ಟ್ ಅಂತಿಮ ನಿರ್ಣಯ ಕೈಗೊಂಡಿಲ್ಲ. ಇದಿನ್ನೂ ನ್ಯಾಯಾಂಗ ಪರಾಮರ್ಶೆಯ ವಿಷಯ ಎಂದು ಮರಾಠಿ ದಿನಪತ್ರಿಕೆಗಳು ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ 36 ಗಂಟೆಗಳ ಒಳಗೆ ಜಾಹೀರಾತು ಪ್ರಕಟಿಸಿ’ ಎಂದು ಕೋರ್ಟ್ ಸೂಚಿಸಿದೆ. ಗಡಿಯಾರ ಚಿಹ್ನೆ ತಮಗೆ ಬೇಕು ಎಂದು ಶರದ್ ಪವಾರ್ ಅವರ ಎನ್‌ಸಿಪಿ ಬಣ ಅರ್ಜಿ ಹಾಕಿದ್ದು, ಹೀಗಾಗಿ ಕೋರ್ಟ್ ಈ ಆದೇಶ ನೀಡಿದೆ.
ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ತಿಂಗಳಿಗೆ ₹3000: ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಗ್ಯಾರಂಟಿ
माझं मत लाडक्या बहीण योजनेला,
माझं मत रोजगाराला,
माझं मत विकासाला,
माझं मत हक्काच्या पक्षाला,
माझं मत घड्याळाला..!
चला गड्यांनो , मतदान करू, घड्याळाला विजय मिळवून देऊ..! pic.twitter.com/poAThyYXlr
राष्ट्रवादी काँग्रेस पक्षाचे घोषणापत्र आज सादर केले. सर्व समाज घटकांच्या सर्वांगीण विकासाचं हे घोषणापत्र भावी विकासाची नांदी आहे. विकासाचं चाक माझ्या बारामती मतदारसंघात आणखीन वेगानं कसं फिरवता येईल, त्याचा हा लेखाजोखा मी समोर मांडला आहे. pic.twitter.com/VMLGGFCAww
— Ajit Pawar (@AjitPawarSpeaks)