ಲೈಸೆನ್ಸ್ ಎಕ್ಸ್‌ಫೈರಿ ಆಗಿದ್ರು 8 ಬಾರಿ ಹಾರಾಟ ನಡೆಸಿದ ಏರ್ ಇಂಡಿಯಾದ ವಿಮಾನ: ತನಿಖೆಗೆ ಡಿಜಿಸಿಎ ಆದೇಶ

Published : Dec 02, 2025, 05:20 PM IST
Air India

ಸಾರಾಂಶ

Air India safety lapse: ಲೈಸೆನ್ಸ್ ಅವಧಿ ಮೀರಿದ ನಂತರವೂ ಏರ್ ಇಂಡಿಯಾದ ಎ320 ವಿಮಾನವೊಂದು 8 ಬಾರಿ ಹಾರಾಟ ನಡೆಸಿ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ ಘಟನೆ ನಡೆದಿದೆ. ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

8 ಬಾರಿ ಹಾರಾಟ ನಡೆಸಿದ ಲೈಸೆನ್ಸ್ ಅವಧಿ ಮುಗಿದಿದ್ದ ವಿಮಾನ 

ಲೈಸೆನ್ಸ್ ಅವಧಿ ಮೀರಿದ ನಂತರವೂ ಏರ್ ಇಂಡಿಯಾದ ವಿಮಾನವೊಂದು 8 ಬಾರಿ ಹಾರಾಟ ನಡೆಸಿದೆ ಎಂದು ತಿಳಿದು ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವೂ ತನಿಖೆಗೆ ಆದೇಶಿಸಿದೆ. ಏರ್ ಇಂಡಿಯಾದ 164 ಆಸನಗಳ ಎ320 ವಿಮಾನವೂ ಅವಧಿ ಮುಗಿದ ವಾಯು ಯೋಗ್ಯತಾ ಪರವಾನಗಿಯೊಂದಿಗೆ 8 ಬಾರಿ ಹಾರಾಟ ನಡೆಸಿದೆ ಈ ಮೂಲಕ ಪ್ರಯಾಣಿಕರ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎಯೂ ವಿಚಾರಣೆ ಆರಂಭಿಸಿದೆ.

ನವೆಂಬರ್ 24 ಹಾಗೂ 25 ರಂದು ಈ ಎ320 ವಿಮಾನವೂ 8 ಬಾರಿ ಹಾರಾಟ ನಡೆಸಿತು. ನಂತರ ಎಂಜಿನಿಯರ್ ಈ ದೊಡ್ಡ ದೋಷವನ್ನು ಪತ್ತೆಹಚ್ಚಿದರು, ನಂತರ ವಿಮಾನವನ್ನು ಸೇವೆಯಿಂದ ಹಿಂತೆಗೆದುಕೊಳ್ಳಲಾಯಿತು ಎಂದು ಈ ವಿಷಯದ ಬಗ್ಗೆ ತಿಳಿದ ಜನರ ಹೇಳಿಕೆಯನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಡಿಜಿಸಿಎ ತನಿಖೆ ಆರಂಭ ಏರ್ ಇಂಡಿಯಾಗೆ ಭಾರಿ ದಂಡ ವಿಧಿಸುವ ಸಾಧ್ಯತೆ

ಈ ಘಟನೆ ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA)ದಿಂದ ತನಿಖೆಗೆ ಕಾರಣವಾಗಿದೆ. ಪ್ರತಿ ವಿಮಾನಗಳಿಗೂ ವಿಮಾನ ಯೋಗ್ಯತಾ ಪ್ರಮಾಣಪತ್ರವನ್ನು ಡಿಜಿಸಿಎ ನೀಡುತ್ತದೆ ಮತ್ತು ಪ್ರತಿ ವರ್ಷ ಅದನ್ನು ನವೀಕರಿಸಬೇಕು. ವಿಮಾನವು ಅದರ ಅಗತ್ಯವಿರುವ ನಿರ್ವಹಣಾ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ನಂತರ, ಹಾರಲು ಸುರಕ್ಷಿತವಾಗಿದೆ ಎಂದು ದೃಢಪಡಿಸಿದ ನಂತರವೇ ಇದನ್ನು ನೀಡಲಾಗುತ್ತದೆ. ಸರಿಯಾದ ಪರವಾನಗಿಗಳು ಮತ್ತು ಪ್ರಮಾಣಪತ್ರಗಳಿಲ್ಲದೆ ವಿಮಾನವನ್ನು ಹಾರಿಸುವುದು ಸುರಕ್ಷತಾ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ಹೀಗಾಗಿ ಏರ್ ಇಂಡಿಯಾ ಹಿರಿಯ ಅಧಿಕಾರಿಗಳ ವಿರುದ್ಧ ಸಂಭವನೀಯ ಕ್ರಮದ ಸಾಧ್ಯತೆಯ ಜೊತೆಗೆ ಭಾರೀ ದಂಡವನ್ನು ಎದುರಿಸಬೇಕಾಗುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ವರದಿಯಾಗಿದೆ. ಲೈಸೆನ್ಸ್ ಅವಧಿ ಮೀರಿದ ಪರವಾನಗಿಯೊಂದಿಗೆ ಹಾರಾಟ ನಡೆಸಿದ್ದರಿಂದ ಏರ್ ಇಂಡಿಯಾ ವಿಮೆಯ ಸಮಸ್ಯೆಗೂ ಸಿಲುಕಿದೆ ಎಂದು ವರದಿಯಾಗಿದೆ.

ಅಹ್ಮದಾಬಾದ್ ವಿಮಾನ ದುರಂತದ ನೆನಪಿನಲ್ಲಿರುವಾಗಲೇ ಏರ್ ಇಂಡಿಯಾದ ಮತ್ತೊಂದು ಎಡವಟ್ಟು:

ಜೂನ್ 12 ರಂದು ಅಹ್ಮದಾಬಾದ್‌ನಲ್ಲಿ ನಡೆದ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾದ ಡ್ರೀಮ್‌ಲೈನರ್ ಅಪಘಾತದ ನಂತರ , ವಿಮಾನಯಾನ ಸಂಸ್ಥೆಯು ವಿಶ್ವಾಸವನ್ನು ಮರಳಿ ಪಡೆಯಲು ಮತ್ತು ಪ್ರಯಾಣಿಕರಿಗೆ ಸುರಕ್ಷತೆಯೇ ತನ್ನ ಪ್ರಮುಖ ಆದ್ಯತೆ ಎಂದು ಭರವಸೆ ನೀಡಲು ಪ್ರಯತ್ನಿಸುತ್ತಿರುವಾಗಲೇ ಈ ಘಟನೆ ಬೆಳಕಿಗೆ ಬಂದಿದೆ. ಮಾನ್ಯವಾಗಿ ಇರಬೇಕಾದ ಪರವಾನಗಿ ಇಲ್ಲದೆ ವಿಮಾನವನ್ನು ಕಳುಹಿಸುವ ನಿರ್ಧಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.

ಏರ್ ಇಂಡಿಯಾದಲ್ಲಿ ಇದು ಆಗಬಾರದಿತ್ತು: ಅಧಿಕಾರಿ

ಡಿಜಿಸಿಎ ತನ್ನ ವಿಚಾರಣೆಯನ್ನು ಮುಂದುವರಿಸಿದ ಹಿನ್ನೆಲೆ ಪ್ರಸ್ತುತ A320 ಏರ್ ಬಸ್ ಕಾರ್ಯನಿರ್ವಹಿಸುತ್ತಿಲ್ಲ. ಅವಧಿ ಮೀರಿದ ಪರವಾನಗಿಯೊಂದಿಗೆ ವಿಮಾನವನ್ನು ನಿರ್ವಹಿಸಿದ್ದರಿಂದ ಅದರ ವಿಮೆಯನ್ನು ರದ್ದುಗೊಳಿಸಬಹುದಾದ್ದರಿಂದ, ಏರ್ ಇಂಡಿಯಾವು ತನ್ನ ಗುತ್ತಿಗೆದಾರರೊಂದಿಗೆ ಸಮಸ್ಯೆಗಳನ್ನು ಎದುರಿಸಬಹುದು. ವಿಮಾನ ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ಬಳಸುವ ಮೂಲಕ ವಿಮಾನಯಾನ ಸಂಸ್ಥೆಯು ವಿಮಾನ ಮತ್ತು ಅದರ ಪ್ರಯಾಣಿಕರಿಬ್ಬರನ್ನೂ ಅಪಾಯಕ್ಕೆ ಸಿಲುಕಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಏರ್ ಇಂಡಿಯಾದಂತಹ ಪ್ರಮುಖ ವಿಮಾನಯಾನ ಸಂಸ್ಥೆಯಲ್ಲಿ ಸಂಭವಿಸಬಾರದ ಗಂಭೀರ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದುಬೈನಿಂದ ಬರ್ತಿದ್ದ ವಿಮಾನದಲ್ಲಿ ಗಗನಸಖಿಗೆ ಕಿರುಕುಳ: ಕೇರಳದ ಸಾಫ್ಟ್‌ವೇರ್ ಇಂಜಿನಿಯರ್ ಅರೆಸ್ಟ್

ಡಿಜಿಸಿಎ ಅನಿರೀಕ್ಷಿತವಾಗಿ ತಪಾಸಣೆಗಳನ್ನು ನಡೆಸುತ್ತದೆ. ಆದರೆ ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳನ್ನು ಸುರಕ್ಷಿತ, ಅನುಮೋದಿತ ಸ್ಥಿತಿಯಲ್ಲಿಡುವ ಜವಾಬ್ದಾರಿಯನ್ನು ಹೊಂದಿದೆ. ವಿಷಯ ಬೆಳಕಿಗೆ ಬಂದ ಕೂಡಲೇ ಡಿಜಿಸಿಎಗೆ ವರದಿ ಮಾಡಲಾಗಿದೆ ಮತ್ತು ವಿಮಾನಯಾನ ಸಂಸ್ಥೆಯು ವಿವರವಾದ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಏರ್ ಇಂಡಿಯಾದ ಸುರಕ್ಷತಾ ನಿಯಮಗಳ ಬಗ್ಗೆ ಆತಂಕ

ಇಂದಿನ ಡಿಜಿಟಲ್ ವ್ಯವಸ್ಥೆಗಳೊಂದಿಗೆ, ಪರವಾನಗಿ ನವೀಕರಣ ಅಥವಾ ನಿರ್ವಹಣಾ ಪರಿಶೀಲನೆಗಳಂತಹ ದಿನನಿತ್ಯದ ಕೆಲಸಗಳನ್ನು ಕಡೆಗಣಿಸುವುದು ತುಂಬಾ ಕಷ್ಟ ಎಂದು ಹಿರಿಯ ವಿಮಾನ ಎಂಜಿನಿಯರ್‌ಗಳು ತಿಳಿಸಿದ್ದಾರೆ. ಏರ್ ಇಂಡಿಯಾ ತನ್ನದೇ ಆದ ನಿರಂತರ ವಾಯು ಯೋಗ್ಯತಾ ನಿರ್ವಹಣಾ ಸಂಸ್ಥೆ (CAMO)ಯನ್ನು ಹೊಂದಿದ್ದು, ಈ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ ಎಂದು ವರದಿ ತಿಳಿಸಿದೆ.

ಲೈಸೆನ್ಸ್ ಮುಗಿಯುವ ಮೂರು ತಿಂಗಳ ಮೊದಲು ನವೀಕರಣ ಪ್ರಕ್ರಿಯೆ

ವಿಮಾನಯಾನ ಸಂಸ್ಥೆಗಳು ಸಾಮಾನ್ಯವಾಗಿ ಗಡುವಿಗೆ ಕನಿಷ್ಠ ಮೂರು ತಿಂಗಳ ಮೊದಲು ನವೀಕರಣ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ ಎಂದು ಡಿಜಿಸಿಎ ಇನ್ಸ್‌ಪೆಕ್ಟರ್ ಒಬ್ಬರು ವಿವರಿಸಿದ್ದಾರೆ. ಇದರಿಂದಾಗಿ ಪ್ರಮಾಣಪತ್ರಗಳನ್ನು ಮುಂಚಿತವಾಗಿ ನವೀಕರಿಸಲಾಗುತ್ತದೆ. ಒಂದು ವಿಮಾನವು ತನ್ನ ದೈನಂದಿನ ವೇಳಾಪಟ್ಟಿಯನ್ನು ಮುಗಿಸಿ ರಾತ್ರಿಯಿಡೀ ನಿಲ್ಲಿಸಿದ ನಂತರ, ಎಂಜಿನಿಯರ್ ಎಲ್ಲಾ ದಾಖಲೆಗಳು ಮತ್ತು ಅನುಮೋದನೆಗಳನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ಅವಧಿ ಮೀರಿದ ಪರವಾನಗಿಯೊಂದಿಗೆ ಈ ವಿಮಾನ ಎಂಟು ಬಾರಿ ಹಾರಾಟ ನಡೆಸಿರುವುದು ಏರ್ ಇಂಡಿಯಾದ ಸುರಕ್ಷತಾ ಪದ್ಧತಿಗಳ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಹೇಳಿದ್ದಾರೆ.

ಅವಧಿ ಮೀರಿದ ವಿಮಾನದ ಬಿಡಿಭಾಗಗಳ ಬಳಸಿದ್ದ ಏರ್ ಇಂಡಿಯಾ

ಡಿಜಿಸಿಎ ಈ ತಪ್ಪನ್ನು ಲೆವೆಲ್ 1 ಹಂತದ ಉಲ್ಲಂಘನೆ ಎಂದು ಪರಿಗಣಿಸುವ ನಿರೀಕ್ಷೆಯಿದೆ. ಇದು ವಿಮಾನ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಅತ್ಯಂತ ಗಂಭೀರ ವರ್ಗವಾಗಿದೆ. ಇದು ಏರ್ ಇಂಡಿಯಾವನ್ನು ಕಾರ್ಯಾಚರಣೆಗಳಿಗೆ ತೊಂದರೆ ಉಂಟುಮಾಡುವ ಸುರಕ್ಷತಾ ಲೋಪಗಳ ಪಟ್ಟಿಗೆ ಸೇರಿಸುತ್ತದೆ. ಇದಕ್ಕೂ ಮೊದಲು, ಏರ್ ಇಂಡಿಯಾದ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಸೇರಿದಂತೆ ಉನ್ನತ ಕಾರ್ಯನಿರ್ವಾಹಕರು, ಏರ್ ಇಂಡಿಯಾದ ವಿಮಾನಗಳ ಕೆಲ ಪಾರ್ಟ್‌ಗಳನ್ನು ಕೆಲ ಅವಧಿ ಮೀರಿದ ಭಾಗಗಳೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕಾಗಿ ಶೋಕಾಸ್ ನೋಟಿಸ್‌ಗಳನ್ನು ಪಡೆದಿದ್ದರು. ಕೆಲವು ತಿಂಗಳ ಹಿಂದಷ್ಟೇ ಸಂಸ್ಥೆಯ ಲೆಕ್ಕಪರಿಶೋಧನೆಗಳನ್ನು ನೋಡಿಕೊಳ್ಳುವ ಏರ್ ಇಂಡಿಯಾದ ಎಂಜಿನಿಯರಿಂಗ್ ಗುಣಮಟ್ಟದ ವಿಭಾಗದ ಮುಖ್ಯಸ್ಥರನ್ನು ಸಹ ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿ ಜೊತೆ ನಿರಂತರ ರಿಲೇಷನ್‌ಶಿಪ್: ಮಹಿಳಾ ಶಿಕ್ಷಕಿ ಅರೆಸ್ಟ್

ಈ ಪುನರಾವರ್ತಿತ ಸಮಸ್ಯೆಗಳು ಏರ್ ಇಂಡಿಯಾವೂ ಟಾಟಾ ಸಮೂಹದ ಸುಪರ್ದಿಗೆ ಬಂದ ನಾಲ್ಕು ವರ್ಷಗಳ ನಂತರ ನಡೆದಿವೆ. ಏರ್ ಇಂಡಿಯಾದ ಎಂಜಿನಿಯರಿಂಗ್ ವ್ಯವಸ್ಥೆಗಳನ್ನು ಬಲಪಡಿಸಲು ಏರ್‌ಲೈನ್ ಈಗ ಕಂಪನಿಯ 25.1% ಪಾಲನ್ನು ಹೊಂದಿರುವ ಸಿಂಗಾಪುರ್ ಏರ್‌ಲೈನ್ಸ್‌ನ ಬೆಂಬಲವನ್ನು ಹೆಚ್ಚು ಅವಲಂಬಿಸಿದೆ ಎಂದು ಹಿರಿಯ ಏರ್ ಇಂಡಿಯಾ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಂಗಾಪುರ್ ಏರ್‌ಲೈನ್ಸ್ ಎಂಜಿನಿಯರಿಂಗ್ ಸೇವೆಗಳ ಹಿರಿಯ ಉಪಾಧ್ಯಕ್ಷ ಜೆರೆಮಿ ಯೂ ಅವರನ್ನು ಈಗಾಗಲೇ ಏರ್ ಇಂಡಿಯಾಕ್ಕೆ ನಿಯೋಜಿಸಲಾಗಿದೆ ಮತ್ತು ಹೆಚ್ಚಿನ ಎಸ್‌ಐಎ ತಜ್ಞರು ಸೇರುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ