
ನವದೆಹಲಿ (ಡಿ.02) ಭಾರತದ ಪ್ರಧಾನ ಮಂತ್ರಿಗಳ ಕಾರ್ಯಾಲಯದ ವಿಳಾಸ ಹೆಚ್ಚು ಹುಡುಕಬೇಕಿಲ್ಲ. ಕಾರಣ ಕಳೆದ 78 ವರ್ಷಗಳಿಂದ ಸೌತ್ ಬ್ಲಾಕ್‌ನಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇದೀಗ ಹೊಸ ಕಟ್ಟಡಕ್ಕೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸ್ಥಳಾಂತರಗೊಳ್ಳುತ್ತಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ಹೊಸದಾಗಿ ನಿರ್ಮಿಸಲಾದ ಹೊಸ ಕಟ್ಟಡಕ್ಕೆ ಪಿಎಂಒ ಶೀಘ್ರದಲ್ಲೇ ಶಿಫ್ಟ್ ಆಗಲಿದೆ. ಹೊಸ ಕಟ್ಟದ ಸೇವಾ ತೀರ್ಥ 1ರಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಕೆಲಸ ನಿರ್ವಹಿಸಲಿದೆ.
ವಾಯುಭವನದ ಪಕ್ಕದಲ್ಲೇ ನಿರ್ಮಾಣಗೊಂಡಿರುವ ಎಕ್ಯಿಕ್ಯೂಟೀವ್ ಕಾಂಕ್ಲೇವ್1 ಕಟ್ಟದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಇರಲಿದೆ. ಒಟ್ಟು ಮೂರು ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಸೇವಾ ತೀರ್ಥ 1ರಲ್ಲಿ ಪ್ರಧಾನಿಗಳ ಕಾರ್ಯಾಲಯ ಇರಲಿದೆ. ಇನ್ನು ಸೇವಾ ತೀರ್ಥ 2ರಲ್ಲಿ ಕ್ಯಾಬಿನೆಟ್ ಸೆಕ್ರಟರಿಯೇಟ್ ಹಾಗೂ ಸೇವಾ ತೀರ್ಥ3ರಲ್ಲಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ (ರಾಷ್ಟ್ರೀಯ ಭದ್ರತಾ ಸಲಹಾಗಾರ) ಅಜಿತ್ ದೋವಲ್ ಕಚೇರಿ ಇರಲಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಸರ್ಕಾರದ ಸೇವೆ, ಕಚೇರಿ, ಮಾರ್ಗ ಸೇರಿದಂತೆ ಹಲವು ಹೆಸರುಗಳನ್ನು ಮರುನಾಮಕರಣ ಮಾಡಿದೆ. ಪ್ರಮುಖವಾಗಿ ರಾಜಪಥವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಲಾಗಿತ್ತು. ಇದೀಗ ದೆಹಲಿಯ ರಾಜ್ಯಪಾಲರ ರಾಜ ಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ ಕಾರ್ಯಾಗಳನ್ನು ಸೇವಾ ತೀರ್ಥ ಸೇರಿದಂತೆ ಹಲವು ಹೆಸರುಗಳಿಂದ ಮರುನಾಮಕರಣ ಮಾಡಲಾಗಿದೆ. ಸೆಂಟ್ರಲ್ ಸೆಕ್ರಟರಿಯೇಟ್‌ನ್ನು ಕರ್ತವ್ಯ ಭವನ ಎಂದು ಮರುನಾಮಕರಣ ಮಾಡಲಾಗಿದೆ.
ಹಲವು ಸಚಿವಾಲಯಗಳ ಕಚೇರಿಗಳು ಈಗಾಗಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಮುಖವಾಗಿ ಶಾಸ್ತ್ರಿ ಭವನ, ನಿರ್ಮಾನ್ ಭವನ್, ಕೃಷಿ ಭವನ್ ಸೇರಿದಂತೆ ಹಲವು ಸಚಿವಾಲಯಗಳು ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೆಕ್ರಟರಿಯೇಟ್ ಕಟ್ಟಡವನ್ನು ಕರ್ತವ್ಯ ಭವನ ಎಂದು ಮರುನಾಮಕರಣ ಮಾಡುವ ಮೂಲಕ ಬ್ರಿಟಿಷರ ಕಾಲದ ವಸಾತುಶಾಹಿ ಆಡಳಿತದ ನೆರಳಿನಿಂದ ಹೊರಬರುವ ಪ್ರಯತ್ನ ಮಾಡಲಾಗಿದೆ.
ಸೆಂಟ್ರಲ್ ವಿಸ್ತಾ ಯೋಜನೆಯಿಂದ ಐತಿಹಾಸಿಕ ಸೌತ್ ಬ್ಲಾಕ್ ಹಾಗೂ ನಾರ್ತ್ ಬ್ಲಾಕ್ ಕಟ್ಟಡಗಳನ್ನು ಭಾರತ್ ಸಂಗ್ರಹಾಲಯವಾಗಿ ಮಾರ್ಪಡು ಮಾಡಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ