ಹೆಂಡ್ತಿ ಕೋಪಗೊಂಡಾಗ ಏನು ಮಾಡಬೇಕು? ಪುರುಷರಿಗೆ AIMIM ನಾಯಕ ಅಸಾದುದ್ದೀನ್ ಒವೈಸಿ ಟಿಪ್ಸ್!

Published : Feb 04, 2024, 07:06 PM IST
ಹೆಂಡ್ತಿ ಕೋಪಗೊಂಡಾಗ ಏನು ಮಾಡಬೇಕು? ಪುರುಷರಿಗೆ AIMIM ನಾಯಕ ಅಸಾದುದ್ದೀನ್ ಒವೈಸಿ ಟಿಪ್ಸ್!

ಸಾರಾಂಶ

AIMIM ನಾಯಕ ಅಸಾದುದ್ದೀನ್ ಒವೈಸಿ ಭಾಷಣದಲ್ಲಿ ಪ್ರಖರ ಮಾತುಗಳು, ಪ್ರಚೋದನಕಾರಿ, ವಿವಾದಗಳೇ ಹೆಚ್ಚು. ಇಸ್ಲಾಮ್ ಪರ ಸದಾ ಧ್ವನಿ ಎತ್ತುವ ಒವೈಸಿ ಇದೀಗ ಸಂಬಂಧ, ವೈವಾಹಿಕ ಜೀವನ ಕುರಿತು ಆಡಿದ ಮಾತುಗಳು ಬಾರಿ ವೈರಲ್ ಆಗಿದೆ. ಅದರಲ್ಲಿ ಹೆಂಡತಿ ಕೋಪ ಮಾಡಿಕೊಂಡಾಗ, ಏನು ಮಾಡಬೇಕು ಅನ್ನೋ ಸಲಹೆಯನ್ನು ಪುರುಷರಿಗೆ ನೀಡಿದ್ದಾರೆ.  

ಹೈದರಾಬಾದ್(ಫೆ.04) AIMIM ಪಕ್ಷದ ಮುಖಂಡ ಅಸಾದುದ್ದೀನ್ ಒವೈಸಿ ಭಾಷಣಗಳು ಯಾವತ್ತೂ ವೈರಲ್ ಆಗುತ್ತದೆ. ಬಿಜೆಪಿ ವಿರುದ್ಧ ನೀಡಿದ ಹೇಳಿಕೆ, ಇಸ್ಲಾಮ್ ಪರವಾಗಿ ನೀಡಿದ ಹೇಳಿಕೆ, ಬಾಬ್ರಿ ಮಸೀದಿ ಪರ ಮಾಡಿದ ಭಾಷಣಗಳೂ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಇದೇ ಅಸಾದುದ್ದೀನ್ ಒವೈಸಿ ವೈವಾಹಿಕ ಜೀವನ, ಸಂಬಂಧ, ಪತಿ-ಪತ್ನಿ ನಡುವಿನ ಅನ್ಯೋನ್ಯತೆ ಸೇರಿದಂತೆ ಹಲವು ವಿಚಾರಗಳ ಕುರಿತು ಮಾತನಾಡಿ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಪತ್ನಿ ಕೋಪಗೊಂಡಾಗ, ಪುರಷರು ಏನು ಮಾಡಬೇಕು, ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಏನು ಅನ್ನೋದನ್ನು ಒವೈಸಿ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅಸಾದುದ್ದೀನ್ ಒವೈಸಿ ಪುರಷರಿಗೆ ಸುಖಿ ದಾಂಪತ್ಯ ಜೀವನದ ಸಲಹೆ ನೀಡಿದ್ದಾರೆ. ಪತ್ನಿಯರು ಕೋಪಗೊಂಡಾಗ, ನೀವು ಕೋಪಗೊಳ್ಳಬೇಡಿ. ಕೋಪದಿಂದ ಆಕೆ ಬಯುತ್ತಿರುವಾಗ ನೀವು ಏನು ಪ್ರತಿಕ್ರಿಯೆ ನೀಡಬೇಡಿ. ಆಕೆಯ ಕೋಪಕ್ಕೆ ಕೆರ ಕಾರಣಗಳಿರಬಹುದು, ಇಲ್ಲದೆ ಇರಬಹುದು. ಅಥವಾ ತಪ್ಪಾಗಿ ಅರ್ಥೈಸಿರಬಹುದು . ಪುರುಷರ ಸಮಾಧಾನದಿಂದ ಆಕೆಯ ಆಕ್ರೋಶದ ಮಾತುಗಳನ್ನು ಕೇಳಿಸಿಕೊಳ್ಳಿ. ಇದರಿಂದ ಅರ್ಧ ಸಮಸ್ಯೆ ಪರಿಹಾರವಾಗಲಿದೆ ಎಂದಿದ್ದಾರೆ.

ರಾಮ ಮಂದಿರ ಉದ್ಘಾಟನೆ ಬೆನ್ನಲ್ಲೇ ಮುಸ್ಲಿಂ ಸಮುದಾಯಕ್ಕೆ ಒವೈಸಿ ಮಹತ್ವದ ಕರೆ!

ಇಷ್ಟಕ್ಕೆ ಒವೈಸಿ ಟಿಪ್ಸ್ ಮುಗಿದಿಲ್ಲ. ಪತ್ನಿ ಕೋಪದಲ್ಲಿರುವಾಗ ಆಕೆಯನ್ನು ನಿಯಂತ್ರಿಸಲು ಹಲ್ಲೆ ಮಾಡುವುದು, ಗದರಿಸುವುದು ಮಾಡಬಾರದು. ಮಹಿಳೆಯರ ಮೇಲೆ ಕೈ ಎತ್ತುವುದು ಸರಿಯಲ್ಲ. ಪ್ರವಾದಿ ಮೊಹಮ್ಮದರು ಯಾವತ್ತೂ ಮಹಿಳೆಯರ ಮೇಲೆ ಕೈಎತ್ತಿಲ್ಲ, ಗೌರವದಿಂದ ಕಾಣಬೇಕು. ಕೋಪ, ಆಕ್ರೋಶಗಳನ್ನು ತಾಳ್ಮೆಯಿಂದ ಕೇಳಿ, ಪರಿಹಾರ ಕಂಡುಕೊಳ್ಳಬೇಕು ಎಂದು ಒವೈಸಿ ಸಲಹೆನೀಡಿದ್ದಾರೆ.

 

 

ಇಸ್ಲಾಂನಲ್ಲಿ ಮಹಿಳೆಯರು ನಿಮಗೆ ಅಡುಗೆ ಮಾಡಿ ಆಹಾರ ನೀಡಬೇಕು, ನಿಮ್ಮ ಬಟ್ಟೆಗಳನ್ನು ತೊಳೆಯಬೇಕು ಎಂದು ಹೇಳಿಲ್ಲ. ಖುರಾನ್‌ನಲ್ಲಿ ಎಲ್ಲಿಯೂ ಪತ್ನಿ, ಪತಿಯ ಬಟ್ಟೆ ತೊಳೆದು ಕೊಡಬೇಕು ಎಂದಿಲ್ಲ. ಪತಿಗೆ ಪತ್ನಿಯ ಆದಾಯದಲ್ಲಿ ಯಾವುದೇ ಹಕ್ಕಿಲ್ಲ. ಆದರೆ ಪತ್ನಿಗೆ ಪತಿಯ ಆದಾಯದಲ್ಲಿ ಎಲ್ಲಾ ಹಕ್ಕುಗಳಿವೆ ಎಂದು ಒವೈಸಿ ಹೇಳಿದ್ದಾರೆ.

'ಮುಸ್ಲಿಮರ ಘನತೆಯನ್ನು ಕಸಿಯುವುದು ಮಾತ್ರವೇ ಈಗಿನ ಗುರಿ..' ಮಥುರಾ ಸರ್ವೇಗೆ ಕಿಡಿಕಾರಿದ ಓವೈಸಿ!

ಹಲವು ಮುಸ್ಲಿಮರು ನನ್ನ ಪತ್ನಿ ಅಡುಗೆ ಮಾಡುತ್ತಿಲ್ಲ, ಬಟ್ಟೆ ಒಗೆಯುತ್ತಿಲ್ಲ ಅನ್ನೋ ದೂರುಗಳನ್ನು ಹೇಳುವುದನ್ನು ಕೇಳಿದ್ದೇನೆ. ಆದರೆ ಖರಾನ್‌ನಲ್ಲಿ ನಿಮ್ಮ ಪತ್ನಿ ಈ ಎಲ್ಲಾ ಕೆಲಸ ಮಾಡಬೇಕು ಎಂದು ಹೇಳಿಲ್ಲ. ಪತಿ ಹಾಗೂ ಪತ್ನಿ ಇಬ್ಬರೂ ಕೆಲಸ ಹಂಚಿಕೊಂಡು, ಪರಸ್ವರ ಗೌರವದಿಂದ ನಡೆದರೆ ಮಾತ್ರ ಸುಖವಾಗಿರಬಹುದು ಎಂದು ಒವೈಸಿ ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!