ಪಾಕಿಸ್ತಾನಕ್ಕೆ ಸೇನಾ ರಹಸ್ಯ ಮಾಹಿತಿ ನೀಡುತ್ತಿದ್ದ ಭಾರತ ರಾಯಭಾರ ಕಚೇರಿ ಸಿಬ್ಬಂದಿ ಅರೆಸ್ಟ್!

By Suvarna NewsFirst Published Feb 4, 2024, 3:57 PM IST
Highlights

ಭಾರತೀಯ ಸೇನೆಯ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನ ಸೇನೆಯ ಸೀಕ್ರೆಟ್ ಎಜೆಂಟ್ ಐಎಸ್ಐಗೆ ನೀಡುತ್ತಿದ್ದ ಭಾರತದ ರಾಯಭಾರ ಕಚೇರಿ ಸಿಬ್ಬಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧನದ ಬೆನ್ನಲ್ಲೇ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ.
 

ಲಖನೌ(ಫೆ.04) ಭಾರತದ ರಾಯಭಾರ ಕಚೇರಿಯಲ್ಲಿ ಉದ್ಯೋಗಿ. ಆದರೆ ಪಾಕಿಸ್ತಾನ ಸೇನೆಯ ಸೀಕ್ರೆಟ್ ಎಜೆಂಟ್ ಐಎಸ್‌ಐಗಾಗಿ ಕೆಲಸ. ಭಾರತೀಯ ಸೇನೆ, ಸರ್ಕಾರದ ಕೆಲ ರಹಸ್ಯ ಮಾಹಿತಿಗಳನ್ನು ಈತ ಈಗಾಗಲೇ ಪಾಕಿಸ್ತಾನ ಸೇನೆಗೆ ನೀಡಿದ್ದಾನೆ. ಈ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಹಾಗೂ ಗುಪ್ತಚರ ಇಲಾಖೆ ಆರೋಪಿ ಸತ್ಯಂದ್ರ ಸಿವಾಲ್ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ರಷ್ಯಾ ರಾಜಧಾನಿ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಪ್(MTS) ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿರುವ ಸತ್ಯೇಂದ್ರ ಸಿವಾಲ್, ಮೂಲತಹ ಉತ್ತರ ಪ್ರದೇಶದ ಹಪುರ್ ಜಿಲ್ಲೆಯವನಾಗಿದ್ದು, ಉತ್ತಮ ವೇತವನ್ನೂ ಪಡೆಯುತ್ತಿದ್ದ. 2021ರಿಂದ ಸತ್ಯೇಂದ್ರ ಸಿವಾಲ್ ಭಾರತದ ರಾಯಭಾರ ಕಚೇರಿಯಲ್ಲಿರುವ ಭದ್ರತಾ ವಿಭಾಗದ IBSAನಲ್ಲಿ ಕೆಲಸ ಮಾಡುತ್ತಿದ್ದ.

Latest Videos

ಒಂದೇ ವರ್ಷದಲ್ಲಿ ಮೂರು ಬಾರಿ ಎನ್‌ಐಎ ದಾಳಿ: ಬಳ್ಳಾರಿಯನ್ನೇ ಸೆಂಟರ್ ಮಾಡಿಕೊಂಡ್ರಾ ಉಗ್ರರು?!

ಭಾರತದ ಕೆಲ ರಹಸ್ಯ ಮಾಹಿತಿಗಳು ಸೋರಿಕೆಯಾಗುತ್ತಿರುವ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿತ್ತು. ಪಾಕಿಸ್ತಾನ ಸೇನೆಯ ಐಎಸ್‌ಐ ಎಜೆಂಟ್ ಭಾರತದ ಉದ್ಯೋಗಿಗಳಿಗೆ ಆಮಿಷ ಒಡ್ಡಿ ರಹಸ್ಯ ಮಾಹಿತಿಗಳನ್ನು ಪಡೆಯುತ್ತಿರುವ ಮಾಹಿತಿ ಪಡೆದ ಗುಪ್ತಚರ ಇಲಾಖೆ ಮತ್ತಷ್ಟು ರಹಸ್ಯ ತನಿಖೆ ನಡೆಸಿತ್ತು. ಈ ವೇಳೆ ಸತ್ಯೇಂದ್ರ ಸಿವಾಲ್ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹದಳವನ್ನು ಸಂಪರ್ಕಿಸಿದ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆಗೆ ಪ್ಲಾನ್ ರೂಪಿಸಿತ್ತು.

ಸತ್ಯೇಂದ್ರ ಸಿವಾಲ್ ಪಾಕಿಸ್ತಾನದ ಐಎಸ್‌ಐ ಎಜೆಂಟ್ ಆಮಿಷಕ್ಕೆ ಬಲಿಯಾಗಿ ಭಾರತದ ಹಲವು ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದ. ಭಾರತೀಯ ಸೇನೆ, ಭಾರತದ ಶಸ್ತ್ರಾಸ್ತ್ರ, ಭಾರತದ ರಾಯಭಾರ ಕಚೇರಿ ಹಾಗೂ ಭದ್ರತೆ ಸೇರಿದಂತೆ ಹಲವು ಮಾಹಿತಿಗಳನ್ನು ಪಾಕಿಸ್ತಾನ ಸೇನೆ ಜೊತೆ ಹಂಚಿಕೊಂಡಿದ್ದ. ಇತ್ತ ಕೆಲ ಮಹತ್ವದ ದಾಖಲೆಯನ್ನು ಪಾಕಿಸ್ತಾನ ಸೇನೆಗೆ ರವಾನಿಸಲು ಸಜ್ಜಾಗಿದ್ದಾರೆ.

 

ಕರ್ನಾಟಕ ಸೇರಿ ದೇಶವ್ಯಾಪಿ ದಾಳಿಗೆ ಸಂಚು: 7 ಶಂಕಿತ ಐಸಿಸ್‌ ಉಗ್ರರ ವಿರುದ್ಧ ಚಾರ್ಜ್‌ಶೀಟ್‌

ಗುಪ್ತಚರ ಇಲಾಖೆ ಹಾಗೂ ಉತ್ತರ ಪ್ರದೇಶ ಪೊಲೀಸ್ ಕಾರ್ಯಾಚರಣೆ ನಡೆಸಿ ಸತ್ಯೇಂದ್ರ ಸಿವಾಲ್ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಉತ್ತರ ಪ್ರದೇಶ ಎಟಿಎಸ್ ಪೊಲೀಸರು, ಪಾಕಿಸ್ತಾನ ಐಎಸ್‌ಐ ಎಜೆಂಟ್ ಭಾರತೀಯ ಸಿಬ್ಬಂದಿಗಳನ್ನು ಟಾರ್ಗೆಟ್ ಮಾಡುತ್ತಿದೆ. ಹಣ, ಇತರ ಆಮಿಷಗಳನ್ನು ನೀಡುತ್ತಿದೆ. ಕೆಲವರನ್ನು ಹನಿಟ್ರಾಪ್‌ಗೆ ಸಿಲುಕಿಸಲಾಗುತ್ತಿದೆ. ಹೀಗಾಗಿ ಭಾರತೀಯ ಸಿಬ್ಬಂದಿಗಳು ಅತೀವ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.
 

click me!