Attack On Owaisi: ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ!

By Contributor AsianetFirst Published Feb 3, 2022, 6:55 PM IST
Highlights

ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ
ನಾಲ್ಕು ಸುತ್ತಿನ ಗುಂಡಿ ದಾಳಿ ಎಂದ ಓವೈಸಿ
ಉತ್ತರ ಪ್ರದೇಶದಿಂದ ದೆಹಲಿಗೆ ಕಾರಿನಲ್ಲಿ ಹೋಗುವಾಗ ಘಟನೆ

ನವದೆಹಲಿ (ಫೆ. 3): ಉತ್ತರ ಪ್ರದೇಶದ ಮೀರತ್‌ನಲ್ಲಿ (Meerut) ಚುನಾವಣಾ ಪ್ರಚಾರ ( campaigning) ಮುಗಿಸಿ ದೆಹಲಿಗೆ (Delhi )ವಾಪಸಾಗುತ್ತಿದ್ದ ವೇಳೆ ತಮ್ಮ ಕಾರಿನ (Car) ಮೇಲೆ ಗುಂಡಿನ ದಾಳಿ (Shots Fire) ನಡೆಸಲಾಗಿದೆ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ (AIMIM chief Asaduddin Owaisi) ಆರೋಪಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ತಿಳಿಸಿದ್ದು, ಕಾರಿನ ಟೈರ್ ಗಳು ಪಂಕ್ಚರ್ ಆಗಿವೆ ಎಂದು ತಿಳಿಸಿದ್ದಾರೆ. "ದೇವರ ದಯೆಯಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ" ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.

ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ನಲ್ಲಿರುವ (Hapur in western Uttar Pradesh) ದೆಹಲಿ ಬಳಿಯ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಶೂಟರ್‌ಗಳು ಶಸ್ತ್ರಾಸ್ತ್ರಗಳನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೈದರಾಬಾದ್ ಸಂಸದರು ತಿಳಿಸಿದ್ದಾರೆ. "ಮೀರತ್‌ನ ಕಿಥೌರ್‌ನಲ್ಲಿ ಚುನಾವಣಾ ಕಾರ್ಯಕ್ರಮದ ನಂತರ ನಾನು ದೆಹಲಿಗೆ ಹೊರಟಿದ್ದೆ. ಛಜರ್ಸಿ ಟೋಲ್ ಪ್ಲಾಜಾ ಬಳಿ ಇಬ್ಬರು ನನ್ನ ವಾಹನದ ಮೇಲೆ ಮೂರರಿಂದ ನಾಲ್ಕು ಸುತ್ತಿನ ಬುಲೆಟ್‌ಗಳನ್ನು ಹಾರಿಸಿದರು; ಒಟ್ಟು 3-4 ಜನರಿದ್ದರು,"  ಎಂದು ಓವೈಸಿ ಹೇಳಿದ್ದಾರೆ.

ಈ ದಾಳಿಯಲ್ಲಿ ನನ್ನ ಕಾರಿನ ಟೈರ್ ಪಂಕ್ಚರ್ ಆಗಿದ್ದು, ಇನ್ನೊಂದು ಕಾರಿನಲ್ಲಿ ನಾನು ಪ್ರಯಾಣ ಮುಂದುವರಿಸಿದೆ ಎಂದು ಓವೈಸಿ ತಿಳಿಸಿದ್ದಾರೆ. ಟೋಲ್ ಪ್ಲಾಜಾದಿಂದ ಓವೈಸಿ ಅವರು ಟ್ವೀಟ್ ಮಾಡಿದ ಚಿತ್ರಗಳಲ್ಲಿ ಅವರ ಬಿಳಿ ಎಸ್ ಯುವಿ ಕಾರಿನ ಕೆಳ ಭಾಗದಲ್ಲಿ ಎರಡು ಬುಲೆಟ್ ರಂಧ್ರಗಳನ್ನು ತೋರಿಸಿದೆ, ಹಾಗೂ ಈ ಬುಲೆಟ್ ಗಳು ಸ್ಥಳದಲ್ಲೇ ಇವೆ. ಮೂರನೇ ಬುಲೆಟ್ ಟೈರ್‌ಗೆ ತಗುಲಿದೆ ಎನ್ನಲಾಗಿದೆ.
 

कुछ देर पहले छिजारसी टोल गेट पर मेरी गाड़ी पर गोलियाँ चलाई गयी। 4 राउंड फ़ायर हुए। 3-4 लोग थे, सब के सब भाग गए और हथियार वहीं छोड़ गए। मेरी गाड़ी पंक्चर हो गयी, लेकिन मैं दूसरी गाड़ी में बैठ कर वहाँ से निकल गया। हम सब महफ़ूज़ हैं। अलहमदु’लिलाह। pic.twitter.com/Q55qJbYRih

— Asaduddin Owaisi (@asadowaisi)


UP Elections: ನಾಮಪತ್ರ ಸಲ್ಲಿಸಲು ಹೊರಟಿದ್ದ ಯೋಗಿ ಸಂಪುಟ ಸಚಿವ ಸಿದ್ಧಾರ್ಥನಾಥ್ ಸಿಂಗ್ ಮೇಲೆ ದಾಳಿ!
ಶೂಟರ್ ಗಳ ಬಂಧನ: ಘಟನೆಯ ಬಳಿಕ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಓವೈಸಿ, ಪೊಲೀಸರು ಶೂಟರ್‌ಗಳಲ್ಲಿ ಒಬ್ಬನನ್ನು ಬಂಧಿಸಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. "ನಮ್ಮ ಮೇಲೆ ದಾಳಿ ಮಾಡುವವರು ಪ್ರತಿದಿನ ನಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸುತ್ತೇನೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಶಸ್ತಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಚುನಾವಣಾ ಆಯೋಗವನ್ನು ಕೋರುತ್ತೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿಯಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

UP Elections: ಸಿಎಂ ಯೋಗಿ ಆದಿತ್ಯನಾಥ್ ಪರ ನಿಂತಿದೆ ಮುಸ್ಲಿಂ ಸಮುದಾಯ!
ಸಂಸದರು ಮತ್ತೊಂದು ಕಾರಿನಲ್ಲಿ ಸ್ಥಳದಿಂದ ತೆರಳಿದರು. ಫೆಬ್ರವರಿ 10 ರಿಂದ ಪ್ರಾರಂಭವಾಗುವ ಉತ್ತರ ಪ್ರದೇಶ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಎಐಎಂಐಎಂ ನಾಯಕ ಮೀರತ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ಭಾರತದ ರಾಜಕಾರಣದ ದಿಕ್ಕನ್ನು ಬದಲಿಸುವ ದೇಶದ ಅತೀದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಮತದಾನ ಫೆಬ್ರವರಿ 10 ರಂದು ನಡೆಯಲಿದೆ.

Latest Videos

 

click me!