ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯ ರಕ್ಷಿಸಿದ ಕಸ್ಟಮ್ಸ್ ತಂಡ

Suvarna News   | Asianet News
Published : Feb 03, 2022, 06:32 PM IST
ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆಯ ರಕ್ಷಿಸಿದ ಕಸ್ಟಮ್ಸ್ ತಂಡ

ಸಾರಾಂಶ

ಚೆನ್ನೈ ಕಸ್ಟಮ್ಸ್ ಅಧಿಕಾರಿಗಳಿಂದ ಮಾನವೀಯ ಕಾರ್ಯ ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕಡಲಾಮೆ ಬಲೆಯನ್ನು ಕತ್ತರಿಸಿ ಆಮೆಯ ರಕ್ಷಿಸಿದ ಕಸ್ಟಮ್ಸ್ ಸಿಬ್ಬಂದಿ

ಚೆನ್ನೈ(ಫೆ.3): ಚೆನ್ನೈ ಕಸ್ಟಮ್ಸ್ ತಂಡವೊಂದು ಮೀನುಗಾರಿಕಾ ಬಲೆಯಲ್ಲಿ ಸಿಲುಕಿದ್ದ ಕಡಲಾಮೆಯನ್ನು ರಕ್ಷಣೆ ಮಾಡಿದೆ. ತಂಡ ರಕ್ಷಣೆ ಮಾಡಿದ ಆಮೆಯೂ ಆಲಿವ್ ರಿಡ್ಲಿ  ಆಮೆಯಾಗಿದ್ದು, ಈ  ಆಲಿವ್ ರಿಡ್ಲಿ ಆಮೆಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಯಲ್ಲಿವೆ.  

ಸಮುದ್ರದಲ್ಲಿರುವ ಅನೇಕ ಜೀವ ಸಂಕುಲಗಳು ಮಾಲಿನ್ಯ ಸಮಸ್ಯೆಯಿಂದಾಗಿ ಬದುಕಲು ಕಷ್ಟ ಪಡುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯ ಅಥವಾ ಮೀನುಗಾರಿಕೆ ಬಲೆಗಳಲ್ಲಿ ಸಿಲುಕಿ ಹೊರಳಾಡುವ ಸಮುದ್ರದ ಜೀವ ವೈವಿಧ್ಯಗಳ ವಿಡಿಯೋವನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರಬಹುದು. ಅಂತಹ ಒಂದು ವೀಡಿಯೊ ಇದಾಗಿದ್ದು, ಸಮುದ್ರ ಆಮೆಯೊಂದು ಸಮುದ್ರದಲ್ಲಿ ಮೀನುಗಾರಿಕಾ ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಹೆಣಗಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ. ಆಲಿವ್ ರಿಡ್ಲಿ ಆಮೆಯನ್ನು ಜನವರಿ 30 ರಂದು ಚೆನ್ನೈ ಕಸ್ಟಮ್ಸ್ ಇಲಾಖೆಯ ತಂಡವು ಮೀನಿನ ಬಲೆಯಿಂದ ರಕ್ಷಿಸಿ ಸಮುದ್ರಕ್ಕೆ ಬಿಟ್ಟಿದೆ. 

 

ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಸುಪ್ರಿಯಾ ಸಾಹು(Supriya Sahu) ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಮುದ್ರದ ಅಲೆಗಳ ನಡುವೆ ಬಲೆಯಲ್ಲಿ ಸಿಲುಕಿದ ಆಮೆ ಜೀವ ಉಳಿಸಿಕೊಳ್ಳಲು ಹೋರಾಡುತ್ತಿರುವ ದೃಶ್ಯವಿದೆ. ಈ ಆಮೆಯನ್ನು ಯಾರೋ ಕೋಲನ್ನು ಬಳಸಿ, ಗಸ್ತು ತಿರುಗುವ ದೋಣಿಯ ಮೇಲೆಳೆದು ತರುತ್ತಾರೆ. ನಂತರ, ವ್ಯಕ್ತಿಯೊಬ್ಬ ಆಮೆಗೆ ಸಿಕ್ಕಿ ಹಾಕಿಕೊಂಡಿರುವ ಮೀನುಗಾರಿಕಾ ಬಲೆಯನ್ನು ಕತ್ತರಿಸಿ ಬಳಿಕ ಆಮೆಯನ್ನು ಸಮುದ್ರಕ್ಕೆ ಬಿಡುತ್ತಾನೆ.

ತಮಿಳುನಾಡಿನ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಸುಪ್ರಿಯಾ ಸಾಹು ಅವರು ಈ ವಿಡಿಯೋ ಶೇರ್‌ ಮಾಡಿ  ಚೆನ್ನೈ ಕಸ್ಟಮ್ಸ್ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಚೆನ್ನೈ ಕಸ್ಟಮ್ಸ್ ತಂಡಕ್ಕೆ ಧನ್ಯವಾದಗಳು,  ಇದು ತುಂಬಾ ಹೃದಯಸ್ಪರ್ಶಿ ದೃಶ್ಯ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಈ ವಿಡಿಯೋವನ್ನು ನೋಡಿದ ಅನೇಕರು ಚೆನ್ನೈ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಕಾಮೆಂಟ್‌ಗಳ ವಿಭಾಗದಲ್ಲಿ ಕಸ್ಟಮ್ಸ್ ತಂಡಕ್ಕೆ ಪ್ರಶಂಸೆಗಳು ಹರಿದುಬಂದವು.

Uttara Kannada: ರಿಡ್ಲೇ ಕಡಲಾಮೆಗಳ ಸಂತಾನೋತ್ಪತ್ತಿ ಸಮಯ, ಅರಣ್ಯ ಇಲಾಖೆಯಿಂದ ರಕ್ಷಣಾ ಕಾರ್ಯ

ಈ ಆಲಿವ್ ರಿಡ್ಲಿ ಆಮೆಗಳನ್ನು ಅಳಿವಿನಂಚಿನಲ್ಲಿರುವ ಪ್ರಭೇದಗಳ ಪಟ್ಟಿಗೆ ಸೇರಿಸಲಾಗಿದೆ.  ಇಂಟರ್‌ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) (ಪ್ರಕೃತಿ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ಒಕ್ಕೂಟ) ಮತ್ತು ನೈಸರ್ಗಿಕ ಸಂಪನ್ಮೂಲಗಳ ಕೆಂಪು ಪಟ್ಟಿಯ ಪ್ರಕಾರ, ಈ ಆಮೆಗಳ  ಜಾಗತಿಕ ಜನಸಂಖ್ಯೆಯ ಪ್ರಮಾಣವು 30 ರಿಂದ 50 ಶೇಕಡಾದಷ್ಟು ಕಡಿಮೆಯಾಗಿದೆ. ಮೀನುಗಾರಿಕಾ ಬಲೆಯಲ್ಲಿ ಸಿಲುಕಿಕೊಳ್ಳುವುದು ಹಾಗೂ ಆಮೆ ಮಾಂಸ ಮತ್ತು ಮೊಟ್ಟೆಗಳ ಕಳ್ಳಸಾಗಣೆ ಈ ಆಮೆಗಳ ಜನಸಂಖ್ಯೆ ಕುಸಿತಕ್ಕೆ ಕಾರಣವೆಂದು ಅಮೆರಿಕಾದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ,  ವಾಣಿಜ್ಯ ಇಲಾಖೆಯು ಉಲ್ಲೇಖಿಸಿದೆ. 

Uttara Kannada: ಸಂತಾನಾಭಿವೃದ್ಧಿಗಾಗಿ ಬಂದಿದ್ದ ರಿಡ್ಲೆ ಆಮೆ ಸಾವು?

IUCN ಪ್ರಕಾರ, ಸಮುದ್ರದ ಮೇಲ್ಮೈ ನೀರಿನಿಂದ ಆಳವಾದ ಸಮುದ್ರದ ಕೆಸರುಗಳವರೆಗೆ ಕಂಡುಬರುವ ಸಮುದ್ರದ ಅವಶೇಷಗಳಲ್ಲಿ 80 ಪ್ರತಿಶತ ಪ್ಲಾಸ್ಟಿಕ್ ಇದೆ.. ಪ್ರತಿ ವರ್ಷ ಕನಿಷ್ಠ 14 ಮಿಲಿಯನ್ ಟನ್ ಪ್ಲಾಸ್ಟಿಕ್ ಸಾಗರಕ್ಕೆ ಸೇರುತ್ತದೆ. ಸಾಗರ ಪ್ರಭೇದಗಳು ಪ್ಲಾಸ್ಟಿಕ್ ಅವಶೇಷಗಳನ್ನು ಸೇವಿಸುತ್ತವೆ ಅಥವಾ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತವೆ, ಇದು ಗಂಭೀರವಾದ ಗಾಯಗಳು ಮತ್ತು ಸಾವಿಗೆ ಕಾರಣವಾಗುತ್ತದೆ. ಕಡಲ ಪಕ್ಷಿಗಳು, ತಿಮಿಂಗಿಲಗಳು, ಮೀನುಗಳು ಮತ್ತು ಆಮೆಗಳಂತಹ ಸಮುದ್ರ ವನ್ಯಜೀವಿಗಳು ದೇಹ ಸೀಳುವಿಕೆ, ಸೋಂಕುಗಳು, ಈಜುವ ಸಾಮರ್ಥ್ಯ ಕಡಿಮೆಯಾಗುವುದು ಮತ್ತು ಆಂತರಿಕ ಗಾಯಗಳಿಂದ ಬಳಲುತ್ತವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ