ಕೋವಿಡ್‌ಗೆ ಬಲಿಯಾದ ಪತಿ: ಕೆಲಸಕ್ಕಾಗಿ SSLC ಪರೀಕ್ಷೆ ಬರೆದ ಪತ್ನಿ

By Anusha Kb  |  First Published Mar 29, 2022, 7:09 PM IST
  • ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದ ಪತಿ ಕೋವಿಡ್‌ಗೆ ಬಲಿ
  • SSLC ಪರೀಕ್ಷೆ ಬರೆದ ಮಹಿಳೆ 34 ವರ್ಷದ ಮಹಿಳೆ
  • ಪತಿ ಉದ್ಯೋಗ ಪಡೆಯಲು ಪರೀಕ್ಷೆಗೆ ಹಾಜರು

ಅಹ್ಮದಾಬಾದ್‌(ಮಾ.29): ಕೋವಿಡ್‌ ಸಾಂಕ್ರಾಮಿಕ ಮಾರಿಯೂ ಹಲವರ ಬದುಕಿನಲ್ಲಿ ದೊಡ್ಡ ಆಘಾತವನ್ನೇ ನೀಡಿದೆ. ಹಲವರು ತಮ್ಮ ಕುಟುಂಬದ ಸದಸ್ಯರನ್ನು, ಸಣ್ಣ ಮಕ್ಕಳನ್ನು ಹಿರಿಯರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದಾರೆ. ಅಹ್ಮದಾಬಾದ್‌ನಲ್ಲಿ ಕೋವಿಡ್‌ನಿಂದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಉದ್ಯೋಗಕ್ಕಾಗಿ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಗುಜರಾತ್‌ನಲ್ಲಿ(Gujarat) ಎಸ್‌ಎಸ್‌ಎಲ್‌ಸಿ ಬೋರ್ಡ್‌ ಪರೀಕ್ಷೆ ನಡೆಯುತ್ತಿದ್ದು ಈ ಪರೀಕ್ಷೆಯಲ್ಲಿ ಮಹಿಳೆ ಭಾಗಿಯಾಗಿದ್ದರು. 

34 ವರ್ಷದ ಹರ್ಷ ಸೋಲಂಕಿ ಎಂಬ ಮಹಿಳೆಯೇ ಎಸ್‌ಎಸ್ಎಲ್‌ಸಿ ಪರೀಕ್ಷೆ ಬರೆದವರು. ಅಂಚೆ ಇಲಾಖೆಯಲ್ಲಿ (Posta Departement) ಉದ್ಯೋಗದಲ್ಲಿದ್ದ ಇವರ ಪತಿ ಕಳೆದ ವರ್ಷ ಮೇ ತಿಂಗಳಲ್ಲಿ ಕೋವಿಡ್‌ಗೆ ಬಲಿಯಾಗಿದ್ದರು. ಉದ್ಯೋಗದಲ್ಲಿದ್ದಾಗಲೇ ಪತಿ ತೀರಿಕೊಂಡ ಕಾರಣ ಅನುಕಂಪದ ನೆಲೆಯಲ್ಲಿ ಸಮರ್ಪಕವಾದ ಶಿಕ್ಷಣವಿದ್ದಲ್ಲಿ ಅವರ ಉದ್ಯೋಗವನ್ನು ಪತ್ನಿಗೆ ನೀಡಲಾಗುತ್ತದೆ. ಆದರೆ ಪತ್ನಿ ಹರ್ಷ ಸೋಲಂಕಿ ಅವರು ಎಸ್‌ಎಸ್‌ಎಲ್‌ಸಿಯನ್ನು ಪೂರ್ತಿ ಮಾಡಿಲ್ಲ. ಆದರೆ ಈಗ ಅನಿವಾರ್ಯತೆ ಎದುರಾಗಿದ್ದು, ಪರೀಕ್ಷೆ ಬರೆಯುತ್ತಿದ್ದಾರೆ.

Tap to resize

Latest Videos

ಪರೀಕ್ಷೆ ಬರೆಯಲು ಹೊರಟ ವಿಜಯಪುರ ವಿದ್ಯಾರ್ಥಿಗೆ ತಿಥಿ ಮಾಡಿ ಕಿಡಿಗೇಡಿಗಳ ಕಾಟ!

ದಂಡೂಕಾ (Dhandhuka) ನಿವಾಸಿಯಾದ ಹರ್ಷ ಸೋಲಂಕಿ(Harsha Solanki) 2005 ರಲ್ಲಿ 9ನೇ ತರಗತಿಯನ್ನು ಪಾಸು ಮಾಡಿದ್ದರು. ನಂತರ 2008 ರಲ್ಲಿ ಇವರು ಪತಿ ಮೆಹುಲ್‌(Mehul) ಅವರನ್ನು ವಿವಾಹವಾದರು. ಅವರಿಗೆ ವಿವಾಹದ ನಂತರದಲ್ಲಿ ಅಂಚೆ ಇಲಾಖೆಯಲ್ಲಿ ಉದ್ಯೋಗ ಸಿಕ್ಕಿತ್ತು. ನನ್ಯಾವತ್ತು ಮತ್ತೆ ಶಿಕ್ಷಣ ಪಡೆಯಬೇಕಾಗ ಅಗತ್ಯ ಬರಬಹುದು ಎಂದು ಯೋಚಿಸಿರಲಿಲ್ಲ. ನಮ್ಮ ಜೀವನ ಸೆಟ್ ಆಗಿತ್ತು. ಕಳೆದ ವರ್ಷ ಪತಿ ಮೆಹುಲ್ ಸಾವಿಗಿಡಾಗುವವರೆಗೂ ನಾವು ತುಂಬಾ ಖುಷಿಯಾಗಿ ಬದುಕುತ್ತಿದ್ದೆವು. 

ನನ್ನ ಪತಿ ಕೋವಿಡ್‌ಗೆ ಬಲಿಯಾದರು, ನಮ್ಮ ಕುಟುಂಬಕ್ಕೆ ಸಮರ್ಪಕವಾದ ಹಣದ ಬೆಂಬಲವಿರುವ ಬೇರೆ ಆಧಾರವಿಲ್ಲ. ನಾನು ಅಂಚೆ ಇಲಾಖೆಯಲ್ಲಿ ಉದ್ಯೋಗದ ಬಗ್ಗೆ ಕೇಳಿದಾಗ, ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನಿಷ್ಠ ಹತ್ತನೇ ತರಗತಿ ಶಿಕ್ಷಣ ಬೇಕೆ ಬೇಕು ಎಂಬುದು ನನಗೆ ತಿಳಿದು ಬಂತು. ಹೀಗಾಗಿ ನಾನು ಪರೀಕ್ಷೆ ಬರೆಯುವ ನಿರ್ಧಾರಕ್ಕೆ ಬಂದೆ. ಇದರಿಂದ ನನ್ನ ಮಕ್ಕಳಾದರೂ ಉತ್ತಮ ಜೀವನ ನಡೆಸಬಹುದು ಎಂದು ಅವರು ಹೇಳಿದರು. 

ಕೋವಿಡ್‌ಗೆ ಬಲಿಯಾದ 1,200 ಜನಕ್ಕಿಂದು ಸಚಿವ ಅಶೋಕ್‌ ಪಿಂಡಪ್ರದಾನ!

ಜೋಧ್‌ಪುರದ (Jodhpur) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಹರ್ಷ ಸೋಲಂಕಿ, ಪರೀಕ್ಷೆ ಪಾಸಾಗುವುದೇ ನನ್ನ ಗುರಿ. ಈ ಪರೀಕ್ಷೆಯಲ್ಲಿ ಪಾಸಾದರಷ್ಟೇ ನನಗೆ ಉದ್ಯೋಗ ಗಳಿಸಲು ಸಾಧ್ಯ ಎಂದು ಹೇಳಿದರು. ಹರ್ಷಾಗೆ ಇಬ್ಬರು ಮಕ್ಕಳಿದ್ದು, ಒಂದು ಮಗುವಿಗೆ 12  ಹಾಗೂ ಇನ್ನೊಂದು ಮಗುವಿಗೆ ಆರು ವರ್ಷ. ಈ ಮಕ್ಕಳನ್ನು ನೊಡಿಕೊಳ್ಳುವುದರ ಜೊತೆ ಹರ್ಷ ತಮ್ಮ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. 

ದಂಡೂಕಾದಲ್ಲಿ ಇನ್ನೊಬ್ಬ  33 ವರ್ಷದ ಮಹಿಳೆ ಎಸ್‌ಎಸ್‌ಎಲ್‌ಸಿ (SSLC)  ಪರೀಕ್ಷೆ ಬರೆದಿದ್ದಾರೆ. ಗ್ರಾಮ ಸೇವಕ ದಳದ ಜವಾನಳಾಗಿ ಕಾರ್ಯ ನಿರ್ವಹಿಸುತ್ತಿರುವ ರಸೀಲಾ (Raseela) ಧುದ್ರೆಜಾ ಎಂಬ ಮಹಿಳೆ ತಮ್ಮ ಪುತ್ರ ರಾಧೇಶಾಂ (Radesham) ಜೊತೆ ತಾವು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದಾರೆ. ಬಾಹ್ಯ ವಿದ್ಯಾರ್ಥಿಯಾಗಿ ಇವರು ಪರೀಕ್ಷೆ ಬರೆದಿದ್ದಾರೆ. ನಾನು ಶಿಕ್ಷಣವನ್ನು ತೊರೆದು 15 ವರ್ಷಗಳ ಬಳಿಕ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದೇನೆ. ಪರೀಕ್ಷೆ (exam) ಬರೆಯುವಂತೆ ನನ್ನ ಪುತ್ರ ನನಗೆ ಪ್ರೋತ್ಸಾಹ ನೀಡಿದ. ನಾವು ಒಬ್ಬರಿಗೊಬ್ಬರು ಪರಸ್ಪರ ಸ್ಪೂರ್ತಿಯಾದೆವು. ಇದರಲ್ಲಿ ಪಾಸಾದರೆ ನನಗೆ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಖಾಯಂ ಆಗಲಿದೆ ಎಂದು ಹೇಳಿದರು. 

click me!