
ನವದೆಹಲಿ (ಮೇ.17) : ಮಹತ್ವವಾದ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇ 31ರಿಂದ 10 ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಹಲವು ರಾಜಕೀಯ, ಉದ್ಯಮ ನಾಯಕರನ್ನು ಭೇಟಿಯಾಗಲಿದ್ದು, ಹಲವು ಸಂವಾದ ಕಾರ್ಯಕ್ರಮಗಳಲ್ಲೂ ಭಾಗಿಯಾಗಲಿದ್ದಾರೆ. ಜೊತೆಗೆ ಮ್ಯಾಡಿಸನ್ ಸ್ವೆ$್ಕೕರ್‌ನಲ್ಲಿ 5000ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
10 ದಿನಗಳ ಭೇಟಿ ಅವಧಿಯಲ್ಲಿ ಜೂ.4ರಂದು ರಾಹುಲ್(Rahul gandhi) ನ್ಯೂಯಾರ್ಕ್ನ ಮ್ಯಾಡಿಸನ್ ಸ್ವೆ$್ಕೕರ್() ಗಾರ್ಡನ್(New York's Madison Square garden)ನಲ್ಲಿ 5000 ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2014ರಲ್ಲಿ ನರೇಂದ್ರ ಮೋದಿ(Narendra Modi) ಕೂಡಾ ಇದೇ ಆವರಣದಲ್ಲಿ ಎನ್‌ಆರ್‌ಐಗಳನ್ನು ಉದ್ದೇಶಿಸಿ ಮಾತನಾಡಿದ್ದರು.
Karnataka CM: ಡಿಕೆಶಿ ಮಣಿಯುತ್ತಿಲ್ಲ, ಸಿದ್ದು ಬಿಡುತ್ತಿಲ್ಲ, ಕಾಂಗ್ರೆಸ್ ಸಿಎಂ ಕಗ್ಗಂಟು 4ನೇ ದಿನಕ್ಕೆ
ಇದರ ಜೊತೆಗೆ ವಾಷಿಂಗ್ಟನ್ ಮತ್ತು ಕ್ಯಾಲಿಫೋರ್ನಿಯಾಗೂ ರಾಹುಲ್ ಭೇಟಿ ನೀಡಲಿದ್ದಾರೆ. ಸ್ಟಾನ್‌ಫರ್ಡ್ ವಿವಿಯಲ್ಲಿ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಇದರ ಜೊತೆಗೆ ಹಲವು ಉದ್ಯಮಿಗಳು ಮತ್ತು ರಾಜಕೀಯ ನಾಯಕರನ್ನೂ ಭೇಟಿ ಮಾಡಿ ಅವರೊಂದಿಗೆ ವಿವಿಧ ವಿಷಯಗಳ ಕುರಿತು ರಾಹುಲ್ ಚರ್ಚೆ ನಡೆಸಲಿದ್ದಾರೆ.
ಕರ್ನಾಟಕ ಸಿಎಂ ಆಯ್ಕೆ ಕಗ್ಗಂಟು ಸೀಕ್ರೆಟ್ ಬಾಕ್ಸ್ ಮತ್ತು 4 ಸೂತ್ರಗಳು!
ಕಳೆದ ಮಾಚ್‌ರ್‍ನಲ್ಲಿ ರಾಹುಲ್ ತಮ್ಮ ಲಂಡನ್ ಪ್ರವಾಸದ ವೇಳೆ ಕೇಂಬ್ರಿಡ್ಜ್ ವಿವಿಯಲ್ಲಿ ಮಾಡಿದ್ದ ಭಾಷಣ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ