Shabarimala Temple: ಶಬರಿಮಲೆ ಬೆಟ್ಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಪೂಜೆ ಸಲ್ಲಿಕೆ: ತೀವ್ರ ಆಕ್ರೋಶ

Published : May 17, 2023, 03:23 AM ISTUpdated : May 17, 2023, 03:24 AM IST
Shabarimala Temple: ಶಬರಿಮಲೆ ಬೆಟ್ಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಪೂಜೆ ಸಲ್ಲಿಕೆ: ತೀವ್ರ ಆಕ್ರೋಶ

ಸಾರಾಂಶ

ಶಬರಿಮಲೆ ದೇಗುಲದಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟಕ್ಕೆ ಗುಂಪೊಂದು ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಪೂಜೆ ಸಲ್ಲಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅಯ್ಯಪ್ಪ ಭಕ್ತರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣಂತಿಟ್ಟ (ಮೇ.17): ಶಬರಿಮಲೆ ದೇಗುಲದಿಂದ 4 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟಕ್ಕೆ ಗುಂಪೊಂದು ಅತಿಕ್ರಮ ಪ್ರವೇಶ ಮಾಡಿ ಅಲ್ಲಿ ಪೂಜೆ ಸಲ್ಲಿಸಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅಯ್ಯಪ್ಪ ಭಕ್ತರು ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಘಟನೆಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಶಬರಿಮಲೆ ದೇಗುಲದ ಉಸ್ತುವಾರಿ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ(Travancore Devaswam Board) ದೂರಿದೆ. ಆದರೆ ಈ ಆರೋಪವನ್ನು ಅರಣ್ಯ ಇಲಾಖೆ(forest depeertment) ತಳ್ಳಿಹಾಕಿದೆ.

ತ್ರಯಂಬಕೇಶ್ವರ ದೇಗುಲಕ್ಕೆ ನುಗ್ಗಲು ಮುಸ್ಲಿಮರ ಯತ್ನ: ತನಿಖೆಗೆ ಮಹಾ ಡಿಸಿಎಂ ಫಡ್ನವೀಸ್‌ ಆದೇಶ

ಏನಾಯ್ತು?: ಶಬರಿಮಲೆ ದೇಗುಲ(Sabarimala temple)ದ ಸಮೀಪದಲ್ಲೇ ಪೊನ್ನಂಬಲಮೇಡು ಬೆಟ್ಟ(Ponnambalamed  hill)ವಿದೆ. ದೇಗುಲದಿಂದ 4 ಕಿ.ಮೀ ದೂರವಿರುವ ಈ ಬೆಟ್ಟದ ತುದಿಯಲ್ಲಿ ಕಲ್ಲಿನ ಚೌಕಟ್ಟೊಂದಿದ್ದು, ಅದನ್ನು ಅಯ್ಯಪ್ಪ ಭಕ್ತರು(ayyappaswamy devotees) ಅತ್ಯಂತ ಭಕ್ತಭಾವದಿಂದ ಪೂಜಿಸುತ್ತಾರೆ. ತಮಿಳುನಾಡು ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ಬೆಟ್ಟಕ್ಕೆ ಯಾರಿಗೂ ಪ್ರವೇಶವಿಲ್ಲ. ಪ್ರತಿ ವರ್ಷ ಈ ಬೆಟ್ಟದ ಮೇಲೆ ಮಕರಜ್ಯೋತಿ(Makara jyoti) ಕಾಣಿಸುವುದರೊಂದಿಗೆ ವಾರ್ಷಿಕ ಅಯ್ಯಪ್ಪ ಯಾತ್ರೆ ಮುಕ್ತಾಯವಾಗುತ್ತದೆ.

ಆಯ್ದ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ಇರುವ ಈ ಸ್ಥಳಕ್ಕೆ ತಮಿಳುನಾಡು ಮೂಲದ ನಾರಾಯಣ ಸ್ವಾಮಿ ಎಂಬ ವ್ಯಕ್ತಿ ಪ್ರವೇಶ ಮಾಡಿ ಕಲ್ಲಿನ ಚೌಕಟ್ಟಿನ ಮೇಲೆ ಪೂಜೆ ಮಾಡುತ್ತಿರುವ ವಿಡಿಯೋವೊಂದು ಇದೀಗ ಬೆಳಕಿಗೆ ಬಂದಿದೆ. ಆತನ ಜೊತೆಗೆ ಇನ್ನೂ 3-4 ಜನರು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ದಶಕಗಳ ಹಿಂದೆ ಶಬರಿಮಲೆ ದೇಗುಲದಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಈತನನ್ನು ಸೂಕ್ತ ನಡತೆ ಹೊಂದಿಲ್ಲ ಎಂಬ ಕಾರಣಕ್ಕೆ ತೆಗೆದು ಹಾಕಲಾಗಿತ್ತು. ಇದೀಗ ಆತ ಬೆಟ್ಟಕ್ಕೆ ಅತಿಕ್ರಮ ಪ್ರವೇಶ ಮಾಡಿ ಪವಿತ್ರ ಸ್ಥಳದಲ್ಲಿ ಪೂಜೆ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ 4-5 ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ.

ಮಂಗ್ಳೂರು ದೇಗುಲಕ್ಕೆ ನುಗ್ಗಿದ ಮೂವರು ಮುಸ್ಲಿಂ ಯುವಕರು: ಭದ್ರತಾ ಆತಂಕ!

ಅರಣ್ಯ ಇಲಾಖೆ ಕಾರಣ:

ಈ ಕುರಿತು ಪ್ರತಿಕ್ರಿಯಿಸಿರುವ ಶಬರಿಮಲೆ ದೇಗುಲದ ಆಡಳಿತ ಮಂಡಳಿ, ಅತ್ಯಂತ ಬಿಗಿಬಂದೋಬಸ್‌್ತ ಇರುವ ಪ್ರದೇಶಕ್ಕೆ ಇಷ್ಟೊಂದು ಜನ ಹೋಗಲು ಹೇಗೆ ಸಾಧ್ಯವಾಯ್ತು. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದೆ. ಅಲ್ಲದೆ ಈ ಬಗ್ಗೆ ಶೀಘ್ರ ದೂರು ಸಲ್ಲಿಸುವುದಾಗಿ ಹೇಳಿದೆ. ಆದರೆ ಅರಣ್ಯಾಧಿಕಾರಿಗಳು ಮಾತ್ರ, ಬೆಟ್ಟಕ್ಕೆ ತೆರಳಲು ಇರುವ ಮುಖ್ಯ ಮಾರ್ಗದಿಂದ ಆರೋಪಿಗಳು ತೆರಳಿರುವ ಸಾಧ್ಯತೆ ಇಲ್ಲ. ಅವರು ಬೇರೆ ಮಾರ್ಗದಿಂದ ತೆರಳಿಬೇಕು ಎಂದಿದೆ. ಜೊತೆಗೆ ಇಲಾಖೆ ಆಂತರಿಕ ತನಿಖೆಗೂ ಆದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ